Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 28 Horoscope: ಮನೆಯ ವಾತಾವರಣದಲ್ಲಿ ಆತಂಕ ನಿರ್ಮಿಸುವ ಘಟನೆ ನಡೆಯಲಿದೆ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 28 (February 28 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಒಂದಿಷ್ಟು ಅನುಕೂಲಕರ ವಾತಾವರಣಗಳ ತರಲಿದೆ, ಈ ದಿನ ನೀವು ಮಾಡಬೇಕಿದ್ದ ಕೆಲಸವನ್ನು ಅಡ್ಡಿಗಳಿಲ್ಲದೆ ಮಾಡಿ ಮುಗಿಸುವಿರಿ. ಆಪ್ತರ ಜೊತೆಗೆ ನೀವು ಪ್ರಯಾಣ ಮಾಡಬೇಕಾಗುತ್ತದೆ, ವಾಹನ ಸಂಬಂಧಿ ಖರ್ಚು ಹೆಚ್ಚಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿ ಜನರು ತಾಳ್ಮೆಯಿಂದ ಇರುವುದು ಉತ್ತಮ. ನಿಮ್ಮ ಆರ್ಥಿಕ ಸಮಸ್ಯೆ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇದೆ. ಅನೇಕರಲ್ಲಿ ಈ ದಿನವು ನಷ್ಟದ ದಿನ. ಸರ್ಕಾರಿ ಹುದ್ದೆಯಲ್ಲಿರುವ ಮಂದಿಗೆ ಶ್ರಮದಾಯಕ ದಿನವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಗೃಹಿಣಿಯರಲ್ಲಿ ಈ ದಿನವು ಹಣ ಪಡೆಯುವ ದಿನ. ಸವಾಲುಗಳನ್ನು ಎದುರಿಸಲು ನೀವು ತಯಾರಿಗಳ ಮಾಡಿಕೊಳ್ಳಬೇಕಿದೆ. ಮನೆಯ ಕಾರಣದಿಂದ ನೀವು ಚಿಂತೆ ಮಾಡಬಹುದು. ಕೆಲಸದ ವಿಚಾರದಲ್ಲಿ ನೀವು ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ.
ಕರ್ಕ ರಾಶಿ
ಕರ್ಕ ರಾಶಿಯವರು ಇಂದು ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಈ ದಿನವು ಸುಗಮ ದಾರಿಗಳ ತರಲಿದೆ. ಬಹು ಸಮಯದಿಂದ ಇದ್ದಂತಹ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಪ್ರಯಾಣದ ದಿನ. ಉದ್ಯೋಗಸ್ಥರಿಗೆ ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಭದ್ರತೆ ಹಾಗೂ ಹೂಡಿಕೆ ಹೆಚ್ಚಿಸುತ್ತದೆ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ, ದಾಯಾದಿ ಕಲಹ ಮುಂದುವರಿಯಲಿದೆ. ಆಪ್ತರ ಕೆಲಸಗಳಿಗೆ ನೆರವಾಗುತ್ತೀರಿ.
ಕನ್ಯಾ ರಾಶಿ
ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ, ಬಂಧು ಮಿತ್ರರ ಕಡೆಯಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಸಿಗುವ ಸಮಯ ಆಗಿರಲಿದೆ. ವ್ಯಾಪಾರ ವಲಯದಲ್ಲಿನ ಮಂದಿಗೆ ಈ ಸಮಯವು ಅದೃಷ್ಟಕರವಾಗಿರಲಿದೆ. ಕುಟುಂಬ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಈ ದಿನ ನಿಮಗೆ ಶ್ರಮದಾಯಕ ದಿನವಾಗುತ್ತದೆ. ಕಚೇರಿಯಲ್ಲಿ ಬಾಕಿ ಉಳಿದಿರುವ ಜವಾಬ್ದಾರಿಗಳನ್ನು ಮುಗಿಸಲು ಹೆಚ್ಚಿನ ಶ್ರಮ ಬೇಕಾಗಬಹುದು. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ನಿಮ್ಮ ಉಳಿತಾಯಕ್ಕೆ ಒಳ್ಳೆಯದು. ದಾಂಪತ್ಯ ವಿಚಾರದಲ್ಲಿ ಕಲಹಗಳ ತಪ್ಪಿಸುವುದು ಉತ್ತಮ.
ವೃಶ್ಚಿಕ ರಾಶಿ
ನಿಮಗೆ ಇಂದು ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ. ನಿಮ್ಮಿಂದ ಹಲವು ಆರ್ಥಿಕ ಲಾಭದಾಯಕ ಕೆಲಸಗಳು ನಡೆಯಬಹುದು. ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳ ನಿವಾರಿಸಿಕೊಳ್ಳುವುದು ಉತ್ತಮ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನೀವು ಮಾಡಬೇಕಿದ್ದ ಕೆಲಸಗಳನ್ನು ಆದಷ್ಟು ಪ್ರಾಮಾಣಿಕವಾಗಿ ಮುಗಿಸಿಕೊಳ್ಳಿ. ಆರ್ಥಿಕವಾಗಿ ಇಂದು ಸ್ಥಿರತೆ ಇರಲಿದೆ. ದಿನದ ಅಂತ್ಯದಲ್ಲಿ ಖರ್ಚುಗಳನ್ನು ನಿಭಾಯಿಸಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ಮಕರ ರಾಶಿ
ಕೆಲಸದ ಒತ್ತಡದಿಂದಾಗಿ ನೀವು ಇಂದು ಸ್ವಲ್ಪ ಆಯಾಸ ಅನುಭವಿಸಬಹುದು. ಹಣಕಾಸಿನ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ದಾಂಪತ್ಯ ವಿಚಾರವಾಗಿ ಕಲಹಗಳಲ್ಲಿ ಭಾಗಿಯಾಗಬೇಡಿ. ವಾಹನ ಚಲಾವಣೆಯ ಸಮಯದಲ್ಲಿ ಎಚ್ಚರ ವಹಿಸಿ.
ಕುಂಭ ರಾಶಿ
ಇಂದು ಕುಂಭ ರಾಶಿ ಜನರಿಗೆ ನಿಮಗೆ ಸಂತೋಷದ ದಿನವಾಗಿರಲಿದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರಲಿದ್ದು, ಹೊಸ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಅಪರೂಪದ ವ್ಯಕ್ತಿಗಳ ಭೇಟಿ ಸಂಭವವಿದೆ.
ಮೀನ ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಇಂದು ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಕುಟುಂಬದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಸಿಗಲಿದೆ. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ.



Click it and Unblock the Notifications










