Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 27 Horoscope: ಗೃಹಿಣಿಯರಿಗೆ ಶ್ರಮದಾಯಕ ದಿನ
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 27 (February 27 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಸಾಮಾನ್ಯವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಸಾಧ್ಯವಾದಷ್ಟು ಶ್ರಮವಹಿಸಿ ಹಾಗೆ ಪ್ರಾಮಣಿಕವಾಗಿ ಮಾಡಿ ಮುಗಿಸುವುದು ಉತ್ತಮ. ಮತ್ತೆ ಸಾಲ ಮಾಡುವ ನಿರ್ಧಾರವನ್ನು ಬದಲಾಯಿಸುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಾದ ಪ್ರಯಾಣವನ್ನು ಮುಂದೂಡುತ್ತೀರಿ. ಆಪ್ತರೊಬ್ಬರಿಂದ ಹಣ ಪಡೆಯುವ ಸಾಧ್ಯತೆ ಇದೆ, ವ್ಯಾಪಾರಿಗಳಿಗೆ ಈ ದಿನವು ಸಾಮಾನ್ಯವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಬಹುದು. ಗೃಹಿಣಿಯರಿಗೆ ಧನಲಾಭದ ದಿನ. ವಿದ್ಯಾರ್ಥಿಗಳು ಈ ದಿನ ಓದಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬಹುದು. ದಿನದ ಅಂತ್ಯದಲ್ಲಿ ಶಾಂತಿಯ ವಾತಾವರಣ ಇರಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಸಮಸ್ಯೆಗಳಿಂದ ತುಂಬಿದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿನ ಒತ್ತಡದಿಂದ ನಿಮಗೆ ಚಿಂತೆ ಕಾಡಬಹುದು. ನಿಮಗೆ ಸೇರಬೇಕಿದ್ದ ವಸ್ತು ಅಥವಾ ಹಣ ಮತ್ತೆ ದೂರಾಗಬಹುದು. ಮನೆಯ ಹಿರಿಯ ಸದಸ್ಯರ ಸಲಹೆ ಪಡೆಯುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನದಂದು ದೊಡ್ಡ ಮಟ್ಟದ ಲಾಭವಾಗುವ ದಿನ. ನೀವು ಅಂದುಕೊಂಡಂತೆ ಹಣಕಾಸಿನ ವಿಚಾರದಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಲಿದೆ.
ಕನ್ಯಾ ರಾಶಿ
ಕೆಲಸದ ವಿಚಾರದಲ್ಲಿ ನಿಮಗಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯುವ ದಿನವಾಗಬಹುದು. ನಿಮ್ಮ ಸಂಬಂಧಿಕರಿಂದ ಉತ್ತಮ ಸುದ್ದಿ ಪಡೆಯಬಹುದು. ಹಣಕಾಸಿನ ವಿಚಾರವಾಗಿ ಯಾರಿಗಾದರು ಸಹಾಯ ಮಾಡಬಹುದು. ನಿಮ್ಮ ಮನೆಯ ಆಸ್ತಿ ಕುರಿತಾದ ವಿಚಾರದಲ್ಲಿ ಚರ್ಚೆಗಳ ನಡೆಯುವುದು ಚಿಂತೆಗೆ ಕಾರಣವಾಗಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ದಿನ. ನಿಮ್ಮ ಹಳೆಯ ಅನಾರೋಗ್ಯವೊಂದು ಮತ್ತೆ ಕಾಡಬಹುದು. ಪ್ರಯಾಣಗಳಲ್ಲಿ ನಿಮಗೆ ಸುಖವಿದೆ. ಮನೆಗೆ ಬೇಕಾದ ಅಗತ್ಯ ವಸ್ತುವನ್ನ ಖರೀದಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಆಂತರಿಕ ವಿಚಾರವಾಗಿ ನೀವು ಬಹಳಷ್ಟು ಚಿಂತೆಯಲ್ಲಿ ಕಳೆಯುವಿರಿ. ಮನೆಯ ವಿಚಾರವಾಗಿ ತಾಳ್ಮೆಯಿಂದ ಇರುವುದು ಉತ್ತಮ. ವಾಹನ ವಿಚಾರದಲ್ಲಿ ದುಡುಕಿನ ವರ್ತನೆ ಮಾಡಬೇಡಿ. ದಿನದ ಅಂತ್ಯದಲ್ಲಿ ಖರ್ಚುಗಳಿವೆ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ನೀವು ಮಾಡಬೇಕಿದ್ದ ಕೆಲಸ ನೀವು ಅಂದುಕೊಂಡಂತೆ ನಡೆಯಲಿದೆ. ಗೃಹಿಣಿಯರು ಇಂದು ಸಾಲ ಮಾಡುವುದನ್ನು ತಪ್ಪಿಸಿ. ಮನೆಗಾಗಿ ಗೃಹಿಣಿಯರು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುವಿರಿ. ಶುಭ ಕಾರ್ಯ ಸಂಬಂಧಿತ ಆಹ್ವಾನ ಪಡೆಯಬಹುದು.
ಮಕರ ರಾಶಿ
ನಿಮ್ಮ ಪ್ರಯಾಣಗಳಲ್ಲಿ ಖರ್ಚುಗಳು ಹೆಚ್ಚಾಗಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ದಿನ ನೀಡಬೇಕಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ವ್ಯಾಪಾರ ಕ್ಷೇತ್ರದಲ್ಲಿ ಲಾಭದ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ದಿನದ ಕೊನೆಯಲ್ಲಿ ಉತ್ತಮ ಆದಾಯ ಸಾಧ್ಯ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಬಾಕಿ ಸಾಲಗಳನ್ನು ತೀರಿಸಲು ಪ್ರಯತ್ನಿಸಿ.
ಮೀನ ರಾಶಿ
ನಿಮಗಿಂದು ಮಿಶ್ರಫಲದ ದಿನ. ಯಾರಿಗೂ ಹಣಕಾಸಿನ ನೆರವು ನೀಡಬೇಡಿ. ಆಪ್ತರೊಬ್ಬರಿಂದ ನಿಮಗೆ ಹಣ ಬರಬಹುದು. ಯಾರಿಗೂ ಸಾಲ ನೀಡಬೇಡಿ. ಆಮಂತ್ರಣ ಮೇರೆಗೆ ನೀವು ಪ್ರಯಾಣ ಮಾಡಬಹುದು. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಿದೆ.



Click it and Unblock the Notifications