Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ದಿನ ಭವಿಷ್ಯ: ಮಹಾ ಶಿವರಾತ್ರಿ ದಿನ ದ್ವಾದಶ ರಾಶಿಗಳಗೆ ಹೇಗಿರಲಿದೆ?
ಮಹಾ ಶಿವರಾತ್ರಿಯ ಶುಭಾಶಯ... ಈ ದಿನ ದ್ವಾದಶ ರಾಶಿಗಳ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ತುಂಬಾನೇ ಉತ್ತಮವಾಗಿರಲಿದೆ,ನಿಮ್ಮ ಸಹೋದರ ಜೊತೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದು ಸರಿಯಾಗಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕ ದೃಷ್ಟಿಯಿಂದಲೂ ಈ ದಿನ ನಿಮಗೆ ಅನುಕೂಲಕರವಾಗಿದೆ.

ವೃಷಭ ರಾಶಿ
ಈ ದಿನ ನೀವು ಆರೋಗ್ಯ ವಿಷಯದ ಕಡೆಗೆ ಗಮನಹರಿಸಬೇಕು, ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ಪಡೆಯುತ್ತೀರಿ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರ್ಥಿಕವಾಗಿಯೂ ಈ ದಿನ ನಿಮಗೆ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗಲಿದ.
ಮಿಥುನ ರಾಶಿ
ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣವಾಗಲಿದೆ, ಆದರೆ ಈ ದಿನ ನೀವು ನಿಮ್ಮ ಶತ್ರುಗಳ ಬಗ್ಗೆ ಜಾಗ್ರತೆವಹಿಸಬೇಕು, ಅವರು ಕೇಡು ಉಂಟು ಮಾಡಲು ಬಯಸಬಹುದು. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ, ಇತ್ತೀಚಿಗೆ ನೀವು ಹೊಸ ಕೆಲಸ ಆರಂಭಿಸಿದ್ದರೆ ಅದರಲ್ಲಿ ಉತ್ತಮ ಫಲ ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯವರು ಹಣಕಾಸಿನ ವಿಷಯದಲ್ಲಿ ಜಾಗ್ರತೆಮಾಡಿ, ನೀವು ಈ ದಿನ ಹಣ ಹೂಡಿಕೆ ಮಾಡುವುದಾದರೆ ಜಾಗ್ರತೆ ಮಾಡಿ. ಇನ್ನು ಆfತಿ, ವಾಹನ ಖರೀದಿ ಮಾಡುವುದಾದರೆ ಡಾಕ್ಯೂಮೆಂಟ್ ಕಡೆಗೆ ಗಮನಹರಿಸಿ. ನಿಮ್ಮ ಹಾಗೂ ಸಂಗಾತಿ ನಡುವೆ ಮನಸ್ತಾಪ ಉಂಟಾಗದಂತೆ ನೋಡಿಕೊಳ್ಳಿ.
ಸಿಂಹ ರಾಶಿ
ಈ ದಿನ ನಿಮಗೆ ಶುಭವಾಗಿದೆ, ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ, ಕುಟುಂಬ ಬದುಕು ಚೆನ್ನಾಗಿರಲಿದೆ. ನಿಮ್ಮ ಕೆಲಸದ ಜಾಗದಲ್ಲಿ ಜಾಗ್ರತೆ ಮಾಡಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಕನ್ಯಾ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಆಸ್ತಿ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ, ನೀವು ನಿಮ್ಮ ಸಂಗಾತಿಯ ಅಭಿಪ್ರಾಯಕ್ಕೂ ಗೌರವ ನೀಡುವುದು ಒಳ್ಳೆಯದು, ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು.
ತುಲಾ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ, ದೂರ ಪ್ರಯಾಣ ಮಾಡುವುದಾದರೆ ಜಾಗ್ರತೆವಹಿಸಿ,ಪ್ರೀತಿಯಲ್ಲಿರುವವರು ತಮ್ಮ ಪ್ರೀತಿ ಬಗ್ಗೆ ಕುಟುಂಬಕ್ಕೆ ತಿಳಿಸಬಹುದು, ಕೆಲಸದ ಒತ್ತಡ ಅಧಿಕವಿರಲಿದೆ.
ವೃಶ್ಚಿಕ ರಾಶಿ
ನೀವು ನಿಮಗೆ ನೀಡಿರುವ ಜವಾಬ್ದಾರಿ ಸಂಪೂರ್ಣವಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮನೆಯ ವಾತಾವರಣ ಖುಷಿಯಿಂದ ಕೂಡಿರಲಿದೆ. ಇನ್ನು ಹಣದ ಬಗ್ಗೆ ಜಾಗ್ರತೆ ಮಾಡಿ, ಯಾವುದೇ ದೊಡ್ಡ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ, ವ್ಯಾಪಾರಿಗಳು ಲಾಭ ಪಡೆಯುತ್ತೀರಿ, ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ.. ಈ ದಿನ ಖರ್ಚು ವೆಚ್ಚಗಳ ನಡುವೆ ಸಮತೋಲನ ಕಾಪಾಡುವುದು ಒಳ್ಳೆಯದು.
ಮಕರ ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ, ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣವಾಗಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಕಾಡಬಹುದು. ಆರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಕುಂಭ ರಾಶಿ
ಈ ದಿನ ನಿಮಗೆ ತುಂಬಾನೇ ಉತ್ತಮವಾಗಿದೆ, ಬೇರೆಯವರ ವಿಷಯದಲ್ಲಿ ಮೂಗು ತೂರಿಸಲು ಹೋಗಬೇಡಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ. ಆಸ್ತಿ ಸಂಬಂಧಿಸಿದ ವಿಷಯದಲ್ಲಿ ವಿವಾದ ಬೇಡ.
ಮೀನ ರಾಶಿ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ, ಕೆಲಸದಲ್ಲಿ ಬಡ್ತಿಸಿಗಲಿದೆ. ವ್ಯಾಪಾರಿಗಳು ಲಾಭ ಪಡೆಯುತ್ತೀರಿ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications