Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
February 26 Horoscope: ಹಣದ ವಿಚಾರದಲ್ಲಿ ನಿಮಗೆ ಶುಭವಿದೆ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 26 (February 26 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಸಮಸ್ಯೆಗಳ ತರಲಿದೆ. ನಿಮ್ಮ ಹಲವು ಕೆಲಸಗಳು ಅಚ್ಚರಿಯ ಕಾರಣದಿಂದಾಗಿ ಅಡ್ಡಿಗಳ ಎದುರಿಸಲಿವೆ. ಪ್ರಾಮಾಣಿಕ ಪ್ರಯತ್ನದ ಹೊರತಾಗಿಯೂ ನಿಮ್ಮಲ್ಲಿ ಅತೃಪ್ತಿ ಇರಲಿದೆ. ಬಹು ಸಮಯದ ಅನಾರೋಗ್ಯ ಸಮಸ್ಯೆಗೆ ಮತ್ತೆ ಹಣ ಖರ್ಚು ಮಾಡಬೇಕಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಬಹಳಷ್ಟು ಸಮಸ್ಯೆಗಳ ತರಬಹುದು. ಇಂದು ನೀವು ಪ್ರಯಾಣ ಮಾಡಬೇಕಾದ ವಿಚಾರದಿಂದ ಹಿಂದೆ ಸರಿಯುವುದು ಉತ್ತಮ. ಹಣಕಾಸು ವಿಚಾರದಲ್ಲಿ ಮತ್ತೆ ಒತ್ತಡಗಳ ಎದುರಿಸುವಿರಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ, ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಿಸಿಕೊಳ್ಳಲು ಒಂದಿಷ್ಟು ಶ್ರಮ ವಹಿಸಬೇಕಾಗುತ್ತದೆ. ಪ್ರೇಮಿಗಳಿಗೆ ಈ ದಿನ ಪ್ರಯಾಣಗಳ ತರಲಿದೆ. ಮನೆಯಲ್ಲಿ ಖರ್ಚು ಹೆಚ್ಚಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸಾಮಾನ್ಯ ದಿನವಾಗುತ್ತಿದೆ. ಅರ್ಧದಲ್ಲೇ ನಿಂತ ನಿಮ್ಮ ಕೆಲಸವನ್ನು ಪೂರ್ಣ ಮಾಡಬೇಕಾಗುತ್ತದೆ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅವರಿಂದ ಮತ್ತೆ ಒತ್ತಡ ಎದುರಿಸಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಸವಾಲುಗಳಿಂದ ತುಂಬಿರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಸಮಯದೊಳಗೆ ಮಾಡುವ ಬದಲಾಗಿ ಮುಂದೂಡುತ್ತೀರಿ. ಹಣಕಾಸು ವಿಚಾರದಲ್ಲಿ ನೆಮ್ಮದಿಯ ದಿನ. ಆಹಾರ ವಿಚಾರದಲ್ಲಿ ಎಚ್ಚರ ವಹಿಸಿ.
ಕನ್ಯಾ ರಾಶಿ
ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಕಷ್ಟಗಳು ನಿವಾರಣೆಯಾಗಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡುವ ಆಲೋಚನೆ ಮಾಡುವುದು ಉತ್ತಮ. ಸ್ವಂತ ಉದ್ಯೋಗ ಆರಂಭಿಸುವ ನಿಮ್ಮ ಆಲೋಚನೆಯು ಮರೆಯಾಗದಂತೆ ನೋಡಿಕೊಳ್ಳಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಅನುಕೂಲಕರ ಸಮಯ ತರಲಿದೆ. ನಿಮ್ಮ ಹಣಕಾಸು ಮತ್ತು ವ್ಯಾಪಾರ ಸಂಬಂಧಿತ ಅಡ್ಡಿಗಳನ್ನು ನಿವಾರಿಸಿಕೊಳ್ಳುವಿರಿ. ಇತರರಿಗೆ ನೀವು ಹಣಕಾಸಿನ ನೆರವು ನೀಡುವಿರಿ. ಮನೆ ನಿರ್ಮಾಣ ವಿಚಾರದಲ್ಲಿನ ಅಡ್ಡಿ ನಿವಾರಣೆಯಾಗುತ್ತದೆ. ದಾಂಪತ್ಯ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಪ್ರಾಮಾಣಿಕ ಪ್ರಯತ್ನಗಳು ಫಲ ನೀಡುವ ಸಮಯ. ನಿಮ್ಮ ಹಣಕಾಸಿನ ವಿಚಾರವಾಗಿ ಇದ್ದಂತಹ ಸಮಸ್ಯೆಗಳ ನಿವಾರಿಸಿಕೊಳ್ಳುವಿರಿ. ಹೋಟೆಲ್ ಉದ್ಯಮಿಗಳು ಎಚ್ಚರಿಕೆಯಿಂದಿರಬೇಕಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಪ್ರಯಾಣಗಳ ಮಾಡುವ ಸಮಯ. ನೀವು ಹೊಸ ಆದಾಯ ಪಡೆಯುವ ಆತುರದಲ್ಲಿದ್ದರೆ ಈ ದಿನ ಅದರ ಕಡೆ ಪ್ರಯತ್ನ ಮಾಡಬಹುದು. ವಾಹನ ಕುರಿತಾದ ಅಡ್ಡಿಗಳು ನಿವಾರಿಸಿಕೊಳ್ಳುವಿರಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಸಾಮಾನ್ಯ ದಿನ. ಮನೆಯಲ್ಲಿ ಹಿರಿಯರೊಂದಿಗಿನ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಿ. ಆಸ್ತಿ ವಿಚಾರವಾಗಿ ರಕ್ತ ಸಂಬಂಧದಲ್ಲಿ ಮುನಿಸುಗಳು ದೊಡ್ಡದಾಗಬಹುದು. ಹಣ ಪಡೆಯುವುದು ಸೂಕ್ತವಲ್ಲ.
ಕುಂಭ ರಾಶಿ
ಕುಂಭ ರಾಶಿ ಜನರು ಈ ದಿನ ಪ್ರಯಾಣಗಳಿಂದ ತುಂಬಿರುವ ದಿನವಾಗಿ ನೋಡುತ್ತಾರೆ. ದಿನದ ಅಂತ್ಯದಲ್ಲಿ ನೀವು ಅಂದುಕೊಂಡಿದ್ದ ಕೆಲಸ ಪೂರ್ಣವಾಗಲಿದೆ. ಯಾರಿಗೂ ಹಣಕಾಸಿನ ಸಹಾಯಲಕ್ಕೆ ಮುಂದಾಗಬೇಡಿ.
ಮೀನ ರಾಶಿ
ಅವಿವಾಹಿತರಿಗೆ ಈ ದಿನವು ಬಹಳ ಖರ್ಚುಗಳೊಂದಿಗೆ ತುಂಬಿರಲಿದೆ, ನೀವು ಮಾಡಬೇಕಿದ್ದ ಕೆಲಸ ಮುಂದೂಡುತ್ತೀರಿ. ಮನೆಗಾಗಿ ಖರ್ಚು ಮಾಡುವಿರಿ. ಆಪ್ತರ ಅನಾರೋಗ್ಯ ವಿಚಾರದಲ್ಲಿ ನೀವು ಪ್ರಯಾಣ ಮಾಡುವಿರಿ.



Click it and Unblock the Notifications