February 25 Horoscope: ಸಮಸ್ಯೆಗಳ ಪರಿಹರಿಸಲು ಮಾರ್ಗಗಳ ಹುಡುಕಿ

ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 25 (February 25 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಇಂದು ಸಮಸ್ಯೆಗಳಿಗೆ ನಿಮ್ಮ ಹಲವು ಕೆಲಸದಲ್ಲಿ ದಿಡೀರ್ ಬದಲಾವಣೆಗಳ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಲಹೆಗಳ ಪಡೆಯಬೇಕಾಗಬಹುದು. ನೀವು ವ್ಯಾಪಾರ ಮಾಡುವ ಮಂದಿಯಾಗಿದ್ದರೆ ದೊಡ್ಡ ಒಪ್ಪಂದಗಳು ಚಿಂತೆ ತರಬಹುದು.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಿರಲಿದೆ. ನೀವು ಹಲವು ಕೆಲಸಗಳನ್ನು ಒತ್ತಡದ ನಡುವೆ ಮಾಡಿ ಮುಗಿಸುವಿರಿ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಸಂಬಂಧಗಳಲ್ಲಿ ಕಲಹಗಳು ಮೂಡಬಹುದು.

February-25-2025-daily-horoscope-prediction

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನೀವು ಮಾಡುವ ಪ್ರಯಾಣವು ನಿಮಗೆ ಧನಾತ್ಮಕ ಫಲಿತಾಂಶ ತರಲಿದೆ. ವಾಹನ ಸಂಬಂಧಿತ ಖರ್ಚುಗಳಿದ್ದರೂ ಅದರಿಂದ ತೃಪ್ತಿ ಇರಲಿದೆ. ಹೊಸ ಆದಾಯಕ್ಕೆ ಮತ್ತಷ್ಟು ಶ್ರಮ ಬೇಕಾಗುತ್ತದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಇಂದು ಮಿಶ್ರಫಲವಿದೆ. ಗೃಹಿಣಿಯರು ಮತ್ತು ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ನಿಮ್ಮ ದೈನಂದಿನ ಕೆಲಸದಲ್ಲಿ ಹಣಕಾಸು ವಿಚಾರಗಳು ಅಡ್ಡಿಯಾಗಬಹುದು. ಆಹಾರ ಸಂಬಂಧಿತ ವಿಚಾರದಲ್ಲಿ ನಿಮಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಸಾಮಾನ್ಯ ದಿನವಾಗಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮುಂದೂಡುವುದನ್ನು ತಪ್ಪಿಸಿ. ಯಾರಿಗಾದರು ಹಣ ನೀವುಡುವು ಬಾಕಿ ಉಳಿಸಿಕೊಂಡಿದ್ದರೆ ಪೂರ್ಣ ಮಾಡುವುದು ಉತ್ತಮ. ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸಗಳು ನಡೆಯಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಈ ದಿನವು ಬಹಳ ಅನುಕೂಲಕರ. ನೀವು ಹಲವು ಸಮಯದಿಂದ ಅನುಭವಿಸಿದ್ದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ದೊಡ್ಡ ಹಣಕಾಸಿನ ಸಮಸ್ಯೆಯೊಂದಕ್ಕೆ ತಾತ್ಕಾಲಿಕ ಪರಿಹಾರ ಪಡೆಯಬಹುದು.

ತುಲಾ ರಾಶಿ

ತುಲಾ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲ ತರಲಿದೆ. ದಾಂಪತ್ಯ ವಿಚಾರದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿದೆ. ದುಬಾರಿ ವಸ್ತು ಖರೀದಿಗೆ ಈ ದಿನ ಸೂಕ್ತವಾಗಿದೆ. ಉದರ ಸಂಬಂಧಿತ ಸಮಸ್ಯೆಗಳು ದೂರಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಇಂದು ಸಾಮಾನ್ಯ ದಿನ. ಮಕ್ಕಳ ಕುರಿತಾಗಿದ್ದ ಚಿಂತೆಯೊಂದು ಕಾಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡಕ್ಕೆ ಸಿಲುಕಬಹುದು. ನಿಮ್ಮ ಕೆಲಸದ ವಿಚಾರದಲ್ಲಿ ಇಂದು ಒತ್ತಡಗಳಿವೆ. ಮನೆಯ ವಾತಾವರಣ ಸಾಮಾನ್ಯವಾಗಿರಲಿದೆ.

ಧನು ರಾಶಿ

ಧನು ರಾಶಿ ಜನರಿಗೆ ಇಂದು ಅನುಕೂಲಕರ ದಿನವಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಕುರಿತಾದ ಬೇಡಿಕೆ ಬರಬಹುದು. ನಿಮ್ಮ ಮನೆಯ ವಾತಾವರಣದಲ್ಲಿ ಶಾಂತಿ ಇರಲಿದೆ. ಸಾಮಾನ್ಯ ಕೆಲಸಗಳು ಕಠಿಣ ಮಾಡಿಕೊಳ್ಳಬೇಡಿ. ದೇವಾಲಯ ಭೇಟಿಯ ಸಾಧ್ಯತೆ ಇದೆ.

ಮಕರ ರಾಶಿ

ಮಕರ ರಾಶಿಯ ಜನರಲ್ಲಿ ಈ ದಿನವು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವ ದಿನವಾಗುತ್ತಿದೆ. ನಿಮ್ಮ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೀವು ಆಪ್ತರ ಸಲಹೆ ಪಡೆಯುವಿರಿ. ಹಣಕಾಸು ಕುರಿತಾದ ವಿಚಾರವಾಗಿ ನಿಮಗೆ ಯಶಸ್ಸು ಸಿಗಲಿದೆ. ಯಾರಿಂದಾದರು ವ್ಯಾಪಾರ ಸಂಬಂಧಿತ ಸಲಹೆ ಪಡೆಯುವ ಮೊದಲು ಆಲೋಚಿಸುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇಂದು ಅನಾನುಕೂಲಕರ ದಿನ. ವಾಹನ ಸಂಬಂಧಿತ ವಿಚಾರವಾಗಿ ನಿಮಗೆ ಹಲವು ರೀತಿಯ ಅಡ್ಡಿಗಳಿವೆ. ಯಾರಿಗಾದರು ಹಣ ನೀಡುವ ನಿಮ್ಮ ಆಲೋಚನೆಯನ್ನು ಬದಲಾಯಿಸುವುದು ಉತ್ತಮ. ದಿನದ ಆರಂಭದಲ್ಲಿ ನಿಮ್ಮ ಖರ್ಚುಗಳನ್ನು ನಿಭಾಯಿಸಿ.

ಮೀನ ರಾಶಿ

ಮೀನ ರಾಶಿಯ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ನೀವು ಅಂದುಕೊಂಡಿದ್ದ ಕೆಲಸಗಳು ಈಡೇರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಆಪ್ತರೊಬ್ಬ ಸಹಕಾರ ಸಿಗಲಿದೆ. ಬಹಳ ದಿನದ ಕೆಲಸಗಳನ್ನು ಪೂರ್ಣ ಮಾಡುವಿರಿ.

English summary

February-25-2025-daily-horoscope-prediction-for-12-zodiac-signs-in-kannada

Here is Horoscope Today, 25 February Horoscope: Daily Horoscope Prediction For 12 Zodiac signs In Kannada
Story first published: Wednesday, February 25, 2026, 5:00 [IST]
X
Desktop Bottom Promotion