Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
February 24 Horoscope: ಹಣಕಾಸು ವಿಚಾರದಲ್ಲಿನ ಅಡ್ಡಿ ನಿವಾರಣೆ
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 24 (February 24 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಕೆಲಸಗಳಲ್ಲಿ ಆಪ್ತರ ಸಹಕಾರ ಸಿಗಲಿದೆ. ಬಹುಸಮಯದ ಚಿಂತೆಯೊಂದು ದೂರಾಗುವ ದಿನವಾಗೊಇದೆ. ನಿಮ್ಮ ಹಣಕಾಸು ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಹಲವು ರೀತಿಯಲ್ಲಿ ಶುಭವಾಗುವ ದಿನ. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಆಪ್ತರೊಬ್ಬರಿಂದ ನಿಮಗೆ ಕೆಲಸದ ವಿಚಾರದಲ್ಲಿ ಸಹಾಯವಿದೆ. ಮನೆಯ ದೊಡ್ಡ ಸಂಕಷ್ಟವನ್ನು ಬಗೆಹರಿಸುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವೊಂದನ್ನು ಪೂರೈಸಿಕೊಳ್ಳುವ ಸಮಯ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಮಿಶ್ರಫಲ ಸಿಗುವ ದಿನ. ಹಲವು ಸಮಯ ನಿಮ್ಮ ಕಷ್ಟವೊಂದನ್ನು ನಿವಾರಿಸಿಕೊಳ್ಳುವಿರಿ. ಅನೇಕರಿಗೆ ಈ ದಿನವು ಪ್ರಯಾಣಗಳ ಮಾಡಬೇಕಾದ ದಿನವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಮಿಶ್ರಫಲವಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಮುಂದಾಗುವುದು ಉತ್ತಮ. ತಾಳ್ಮೆಯಿಂದ ಸಂಬಂಧಗಳಲ್ಲಿ ಮುಂದುವರೆಯಿತಿ. ನಿರುದ್ಯೋಗಿಗಳಿಗೆ ಈ ಸಮಯ ಸಮಸ್ಯೆಗಳಿವೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ದೊಡ್ಡ ಮಟ್ಟದ ಲಾಭವಿದೆ. ಯಾರಿಗಾದರು ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುವ ಆಲೋಚನೆಯಿದ್ದರೆ ಮತ್ತೆ ಪರಿಶೀಲಿಸಿ. ಉದ್ಯೋಗ ಸ್ಥಳದಲ್ಲಿನ ಸಮಸ್ಯೆಗಳು ಕೊನೆಯಾಗಬಹುದು. ಹೊಸ ಆರಂಭಗಳಿಗೆ ಈ ದಿನ ಸೂಕ್ತವಾಗಿದೆ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನವು ಪ್ರಯಾಣ ಮಾಡಬೇಕಾಗುತ್ತದೆ. ಬೇರೆಯವರ ಮಾತಿನಂತೆ ವ್ಯವಹಾರ ಅಥವಾ ವಸ್ತು ಖರೀದಿಯಲ್ಲಿ ತೊಡಗುವುದು ದುಬಾರಿಯಾಗಬಹುದು. ಪ್ರೇಮಿಗಳಿಗೆ ಈ ದಿನವು ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಅನುಕೂಲಕರ. ನಿಮ್ಮ ಹಲವು ಕೆಲಸವನ್ನು ಮುಗಿಸುವ ದಿನ. ಗೃಹಿಣಿಯರಲ್ಲಿ ಹಣಕಾಸು ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನ ಬುದ್ದಿವಂತಿಕೆಯಿಂದ ವ್ಯವಹರಿಸಬೇಕಿದೆ. ಹಳೆಯ ಸಾಲಗಳ ಮರುಪಾವತಿ ಮಾಡುವಿರಿ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಬಹಳ ಉತ್ತಮ ಸಮಯ. ನೀವು ಹಣಕಾಸ ವಿಚಾರದಲ್ಲಿ ತಪ್ಪು ಮಾಡಬಹುದು. ಸ್ನೇಹಿತರೊಬ್ಬರಿಂದ ಬರುವ ಕರೆಯು ನಿಮಗೆ ಚಿಂತೆ ತರಬಹುದು. ಸಣ್ಣ ಪುಟ್ಟ ಅನಾರೋಗ್ಯವನ್ನು ಕೂಡ ನಿರ್ಲಕ್ಷಿಸಬೇಡಿ.
ಮಕರ ರಾಶಿ
ಮಕರ ರಾಶಿಯವರಲ್ಲಿ ಈ ದಿನವು ಬಹಳ ಅನುಕೂಲವಿದೆ. ಉದ್ಯೋಗದಲ್ಲಿನ ಒತ್ತಡಗಳು ಕಡಿಮೆಯಾಗಲಿದೆ. ಕೃಷಿ ಸಂಬಂಧಿತ ವಿಚಾರದಲ್ಲಿ ಲಾಭದಾಯಕ ದಿನ. ಮನೆ ಕಟ್ಟಿಸುವ ಮಂದಿಗೆ ಹಣಕಾಸು ವಿಚಾರದಲ್ಲಿ ಶುಭವಿದೆ. ಹೂಡಿಕೆಯಲ್ಲಿ ಎಚ್ಚರ.
ಕುಂಭ ರಾಶಿ
ಕುಂಭ ರಾಶಿಯ ಜನರು ಈ ದಿನ ಪ್ರಯಾಣಗಳ ಮಾಡುವಿರಿ. ದೇವಾಲಯ ಭೇಟಿ ಸಂಭವವಿದೆ. ನಿಮ್ಮಿಂದಾಗಿ ಮನೆಯಲ್ಲಿ ಸಂತಸ ಇರಲಿದೆ. ಅಧಿಕ ಖರ್ಚುಗಳನ್ನು ಸರಿಯಾಗಿ ನಿಭಾಯಿಸುವುದು ಉತ್ತಮ. ದಾಂಪತ್ಯ ವಿಚಾರವಾಗಿ ಅಡ್ಡಿಗಳನ್ನು ಮಾತುಕತೆಯ ಮೂಲಕ ಬಗೆಹರಿಯುವಂತೆ ಮಾಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸು ವಿಚಾರದಲ್ಲಿನ ನಿರ್ಧಾರಗಳು ನಿಮಗೆ ಸಮಸ್ಯೆಗಳ ತರಬಹುದು. ಮನೆಯ ವಿಚಾರವೊಂದು ಚಿಂತೆಗೆ ಕಾರಣವಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ.



Click it and Unblock the Notifications