Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 22 Horoscope: ಭಾನುವಾರದಂದು ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 22 (February 22 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ಭಾನುವಾರ ಬಹಳ ಅನುಕೂಲ ತರಲಿದೆ, ಆದ್ರೆ ನಿಮ್ಮ ಸಕಾರಾತ್ಮಕ ಆಲೋಚನೆಗಳ ಮೂಲಕ ಮಾತ್ರ ಹಲವು ಕೆಲಸಗಳನ್ನು ಪೂರೈಸಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ಅನುಕೂಲಕರ ಸಮಯ ಆಗಿರಲಿದೆ.
ವೃಷಭ ರಾಶಿ
ವೃಷಭ ರಾಶೀ ಜನರಿಗೆ ದೊಡ್ಡ ಕೆಲಸಗಳಲ್ಲಿ ಭಾಗುಯಾಗುವ ಅವಕಾಶಗಳಿವೆ. ನೀವು ಮಾಡುವ ಪ್ರಯಾಣಗಳು ಶುಭವಾಗಲಿದೆ. ಆಪ್ತರೊಬ್ಬರಿಗೆ ನಿಮಗೆ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಯಾರೊಂದಿಗೂ ನಿರ್ಲಕ್ಷದ ಮಾತುಗಳ ಆಡಬೇಡಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ನೀವು ಯಾರಿಗೂ ಸಾಲ ನೀಡಬೇಡಿ. ನಿಮ್ಮ ಹಳೆಯ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ಆಸ್ಪತ್ರೆ ಕುರಿತಾದ ವಿಚಾರವೊಂದು ನಿವಾರಣೆಯಾಗುವ ಸಾಧ್ಯತೆ ಇದೆ. ಸರ್ಕಾರಿ ಹುದ್ದೆಯ ಜನರಿಗೆ ಖರ್ಚುಗಳಿಂದ ತುಂಬಿರುವ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲಕರ ವಾತಾವರಣ ತರಲಿದೆ. ದಾಂಪತ್ಯ ವಿಚಾರದಲ್ಲಿನ ಸಣ್ಣ ಪುಟ್ಟ ಮನಸ್ತಾಪಗಳ ನಿವಾರಿಸಿಕೊಳ್ಳು ಇದು ಸೂಕ್ತ ಸಮಯ ಆಗಿರಲಿದೆ. ಪ್ರಯಾಣ ಮಾಡುವಿರಿ. ಮನೆಯಲ್ಲಿ ಹಣಕಾಸು ವಿಚಾರವಾಗಿ ನಿಮ್ಮ ಮಾತುಗಳಿಗೆ ಬೆಂಬಲ ಸಿಗಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ಪ್ರಯಾಣ ಮಾಡುವಿರಿ. ಆಪ್ತರೊಬ್ಬರ ಭೇಟಿಯೂ ಮುಕ್ತ ಮಾತುಕತೆಗೆ ತೆರೆದುಕೊಳ್ಳಲಿದೆ. ಆರ್ಥಿಕ ವಿಚಾರದಲ್ಲಿ ಶುಭವಿದೆ. ಮನೆಗಾಗಿ ನೀವು ಖರ್ಚು ಮಾಡುವಿರಿ. ಸ್ನೇಹಿತರಿಂದ ಹಲವು ವಿಚಾರವಾಗಿ ಕರೆಗಳು ಬರಬಹುದು. ಮಕ್ಕಳ ವಿಚಾರದಲ್ಲಿ ಗಮನವಿಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಓಡಾಟದಿಂದ ಕೂಡಿರಲಿದೆ. ನೀವು ಮಾಡಬೇಕಿದ್ದ ಪ್ರಯಾಣಗಳ ಮುಂದೂಡಬೇಡಿ. ಕೆಲಸದ ವಿಚಾರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಮನೆಯ ವಿಚಾರವೊಂದಕ್ಕೆ ನೀವು ಅಡ್ಡಿಯಾಗುವುದು ಮುನಿಸುಗಳಿಗೆ ಕಾರಣವಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನವು ಆಪ್ತರ ಸಹಾಯ ಪಡೆಯುವ ದಿನ. ನೀವು ಮಾಡಬೇಕಿದ್ದ ಕೆಲಸಗಳ ಕಡೆಗೆ ಗಮನವಿಡಿ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ಅದನ್ನು ಪೂರ್ಣ ಮಾಡುವುದು ಉತ್ತಮ. ಸ್ವಂತ ಉದ್ಯೋಗದಲ್ಲಿನ ಮಂದಿಗೆ ಲಾಭದಾಯಕ ದಿನವಾಗುತ್ತಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಅನುಮಾನಗಳ ನಿವಾರಣೆಯ ದಿನವಾಗುತ್ತಿದೆ. ನೀವು ದೊಡ್ಡ ಒಪ್ಪಂದಗಳು ಹಾಗೆ ವ್ಯವಹಾರಿಕ ವಿಚಾರವಾಗಿ ನಿರ್ಧಾರಗಳ ತೆಗೆದುಕೊಳ್ಳುವಿರಿ. ಈ ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ಹಲವು ಕೆಲಸಗಳನ್ನು ಮುಂದೂಡುತ್ತೀರಿ. ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮನೆಗಾಗಿ ನೀವು ಖರೀದಿಸುವ ವಸ್ತುಗಳು ತೃಪ್ತಿ ತರದೆ ಇರಬಹುದು. ನಿಮ್ಮ ದೊಡ್ಡ ಲಾಭದಾಯಕ ಕೆಲಸಗಳನ್ನು ಮತ್ತಷ್ಟು ವಿಸ್ತರಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಬಹಳ ಅನುಕೂಲವಿದೆ, ಆಸ್ಪತ್ರೆ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣ ಮಾಡಬೇಕಾಗುತ್ತದೆ. ಪ್ರವಾಸದ ವಿಚಾರವಾಗಿಯೂ ಆಲೋಚಿಸಬಹುದು. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ಹೊಸ ವಸ್ತು ಖರೀದಿಯಲ್ಲಿ ತೊಡಗಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ವಿಶ್ರಾಂತಿಯ ದಿನ. ನಿಮ್ಮ ಉದರ ಸಂಬಂಧಿ ಸಮಸ್ಯೆಗಳು ದೂರಾಗಲಿದೆ. ನಿಮ್ಮದಲ್ಲದ ಕೆಲಸಗಳಲ್ಲಿ ನೀವು ಭಾಗುಯಾಗಬೇಕಾಗಿ ಬರಬಹುದು, ವಾಹನ ಚಲಾವಣೆಯಲ್ಲಿ ಎಚ್ಚರವಹಿಸಿ. ಹಣಕಾಸು ವ್ಯವಹಾರ ಸ್ಥಿರವಾಗಿರಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದಲ್ಲಿ ಲಾಭವಾಗುವ ದಿನ. ನಿಮ್ಮಿಂದಾಗಿ ಯಾರಿಗಾದರು ಹಣಕಾಸಿನ ಸಹಾಯವಾಗಬಹುದು. ದೇವಾಲಯ ಭೇಟಿ ಅವಕಾಶದಿಂದ ದೂರ ಉಳಿಯಬೇಡಿ. ದಾಂಪತ್ಯದಲ್ಲಿ ಅನಗತ್ಯ ಚರ್ಚೆಗಳು ಮುನಿಸುಗಳಿಗೆ ಕಾರಣವಾಗಬಹುದು.



Click it and Unblock the Notifications