Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 21 Horoscope: ಈ ಶನಿವಾರ ನಿಮ್ಮ ರಾಶಿಯಲ್ಲಿ ಏನಿದೆ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 21 (February 21 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಅನುಕೂಲವಿದೆ. ನೀವು ಮಾಡಬೇಕಿದ್ದ ಹಲವು ಕೆಲಸವು ಇಂದು ಧನಾತ್ಮಕ ರೀತಿಯಲ್ಲಿ ಮುಗಿಯಲಿದೆ. ಹಲವು ವ್ಯವಹಾರಗಳಲ್ಲಿ ಮತ್ತು ಕೆಲಸದಲ್ಲಿ ಧನಾತ್ಮಕ ಬದಲಾವಣೆಗಳ ನೋಡುವಿರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗಿರಲಿದೆ. ಯಾರೊಂದಿಗಾದರು ನಿಮ್ಮ ಹಣಕಾಸು ವಿಚಾರದಲ್ಲಿ ಸಮಸ್ಯೆಗಳಿದ್ದರೆ ಇಂದು ಬಗೆಹರಿಸಿಕೊಳ್ಳುವುದು ಉತ್ತಮ. ಉದರ ಸಂಬಂಧಿ ಸಮಸ್ಯೆಗಳು ಎದುರಾಗಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದ ಲಾಭದ ದಿನವಾಗಬಹುದು. ನಿಮ್ಮಿಂದ ಆಪ್ತರೊಬ್ಬರಿಂದ ನೆರವಾಗಲಿದೆ. ಮನೆಗಾಗಿ ಖರ್ಚುಗಳ ಮಾಡುವಿರಿ. ದಿನದ ಅಂತ್ಯದಲ್ಲಿ ನಿಮಗೆ ಪ್ರಯಾಣಗಳಿವೆ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಅನುಕೂಲಕರ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ವಸ್ತು ಕೈ ಸೇರಲಿದೆ. ವ್ಯಾಪಾರಿಗಳಿಗೆ, ಹೋಟೆಲ್, ಆಹಾರ ಸಂಬಂಧಿತ ವ್ಯವಹಾರದಲ್ಲಿ ತೊಡಗಿರುವವರು ಇಂದು ಲಾಭ ನೋಡುವಿರಿ. ಆರೋಗ್ಯದಲ್ಲಿ ಏರುಪೇರು ನಿಮಗೆ ಚಿಂತೆ ತರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನ. ದಿನದ ಅಂತ್ಯದಲ್ಲಿ ನೆನಪುಗಳು ಉಳಿಯುವುದು. ನಿಮ್ಮ ಪ್ರೀತಿ ಸಂಬಂಧಿತ ಸಮಸ್ಯೆಯು ಬಗೆಹರಿಯಲಿದೆ. ಯಾರಿಗೂ ಹಣ ನೀಡಲು ಮುಂದಾಗದೆ ಇರುವುದು ಉತ್ತಮ. ಅನಗತ್ಯ ಖರ್ಚುಗಳ ಮಾಡುವುದು ಮುಂದೆ ಸಮಸ್ಯೆಗಳ ತರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ಪ್ರಯಾಣಗಳಲ್ಲಿ ಭಾಗಿಯಾಗಬೇಕಾದ ದಿನ. ನಿಮ್ಮ ಹಣಕಾಸಿನ ವಿಚಾರವಾಗಿಯೂ ಇಂದು ಬಿಕ್ಕಟ್ಟುಗಳು ಎದುರಾಗಬಹುದು. ಮಹಿಳೆಯರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನವು ಬಹಳ ಉತ್ತಮವಾಗಿರಲಿದೆ. ಯಾರೊಂದಿಗಾದರು ಹಣಕಾಸಿನ ವ್ಯವಹಾರದಲ್ಲಿದ್ದರೆ ಇಂದು ತಾಳ್ಮೆಯಿಂದ ವರ್ತಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಇಂದು ನೋವಿನ ದಿನವಾಗಬಹುದು. ದಿನಗೂಲಿ ನೌಕರರಲ್ಲಿ ಹಣಕಾಸಿನ ಕೊರತೆ ಅಥವಾ ಸಮಸ್ಯೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಮಿಶ್ರಫಲ ನೋಡಬಹುದು. ಗೃಹಿಣಿಯರು ಹಣಕಾಸು ಸಂಬಂಧಿತ ವಿಚಾರವಾಗಿ ತಾಳ್ಮೆಯಿಂದ ಪ್ರತಿಕ್ರಿಯಿಸಿ. ವ್ಯಾಪಾರಿಗಳು ದಿನದ ಅಂತ್ಯದಲ್ಲಿ ಲಾಭ ನೋಡಬಹುದು. ದೊಡ್ಡ ಒಪ್ಪಂದ ಅಥಚಾ ವ್ಯವಹಾರದಲ್ಲಿ ಮುಂದುವರೆಯಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರುವ ದಿನವಾಗಲಿದೆ. ಯಾರಿಗಾದರು ಸಹಾಯ ಮಾಡುವ ಅವಕಾಶಗಳು ಎದುರಾಗಬಹುದು. ದಿನದ ಅಂತ್ಯದಲ್ಲಿನ ಪ್ರಯಾಣಗಳು ನಿಮ್ಮಲ್ಲಿ ಸಂತಸಕ್ಕೆ ಕಾರಣವಾಗಲಿದೆ.
ಮಕರ ರಾಶಿ
ಮಕರ ರಾಶಿ ಅವರಗೆ ಈ ದಿನವು ಉತ್ತಮವಾಗಿರಲಿದೆ. ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳಿಗೆ ಈ ದಿನ ಉತ್ತಮ ಫಲಿತಾಂಶ ಪಡೆಯುವ ದಿನವಾಗಲಿದೆ. ಬ್ಯಾಂಕಿಂಗ್ ವಿಚಾರಗಳು ನಿಮಗೆ ಸಮಾಧಾನ ತರಬಹುದು. ಮನೆ ನಿರ್ಮಾಣ ಕಾರ್ಯದಲ್ಲಿ ಹಿನ್ನಡೆ ಇದೆ.
ಕುಂಭ ರಾಶಿ
ಕುಂಭ ರಾಶಿಯ ಜನರು ಈ ದಿನ ಜಾಗರೂಕರಾಗಿರಬೇಕಿದೆ. ನಿಮ್ಮ ಕೆಲಸಗಳನ್ನು ಆದಷ್ಟು ಬೇಗ ಮುಗಿಸುವುದು ಉತ್ತಮ. ವಾಹನ ಚಲಾವಣೆಯ ವೇಳೆ ಎಚ್ಚರಿಕೆ ವಹಿಸಿ. ಆಪ್ತರ ಮನೆ ಭೇಟಿ ಮಾಡಬಹುದು. ದೇವಾಲಯಕ್ಕೆ ತೆರಳುವ ನಿಮ್ಮ ಆಲೋಚನೆಗಳನ್ನು ಮುಂದೂಡಬೇಕಾಗುತ್ತದೆ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಬಹಳ ಅನುಕೂಲವಿದೆ. ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕ ಬದಲಾವಣೆ ನೋಡುವಿರಿ. ನಿಮ್ಮ ಕೆಲಸದ ವಿಚಾರದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹೊಸ ಆದಾಯಗಳು ಸಿಗಲಿದೆ. ಹಣಕಾಸು ವಿಚಾರಗಳು ನೀವು ಅಂದುಕೊಂಡಂತೆ ಇರಲಿದೆ.



Click it and Unblock the Notifications