February 2026 Horoscope: ಫೆಬ್ರವರಿ ಮಾಸಿಕ ರಾಶಿಫಲ ಯಾರಿಗೆ ಈ ತಿಂಗಳು ಧನಲಾಭ?

ಫೆಬ್ರವರಿ 2026ರ ನಿಮ್ಮ ಮಾಸಿಕ ರಾಶಿಫಲ (February 2026 Horoscope)

ಮೇಷ ರಾಶಿ

ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ಸಾಮಾನ್ಯವಾಗಿರಲಿದೆ. ನಿಮ್ಮ ಹಲವು ಕೆಲಸಗಳು, ಆಸೆಗಳನ್ನು ಈಡೇರಿಸಿಕೊಳ್ಳಬಹುದು. ನೀವು ಕೆಲಸದಲ್ಲಿ ಶ್ರದ್ಧೆಯಿಂದ ಪ್ರಗತಿ ಹೊಂದುತ್ತೀರಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ತಿಂಗಳ ಮೊದಲ 10 ದಿನಗಳು ನಿಮಗೆ ಸಂತೋಷದ ವಾತಾವರಣಗಳು ಇರಲಿದೆ. ನೀವು ಹಲವು ಸಮಾರಂಭಗಳ ಕುರಿತಾದ ಮಾತುಕತೆಗಳಲ್ಲಿ ಭಾಗಿಯಾಗುವಿರಿ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಈ ತಿಂಗಳಿನಲ್ಲಿ ಮರೆಯಾಗುತ್ತದೆ. ಹಣಕಾಸು ಸಂಬಂಧಿತ ವಿಚಾರದಲ್ಲಿ ನಿಮಗೆ ಉತ್ತಮ ದಿನಗಳಿವೆ. ಆರೋಗ್ಯದಲ್ಲಿನ ಸುಧಾರಣೆಯು ಮತ್ತಷ್ಟು ಕೆಲಸಗಳನ್ನು ಮಾಡಲು ಪ್ರೇರೇಪಿಸಲಿದೆ.

ವೃಷಭ ರಾಶಿ

ಫೆಬ್ರವರಿ ತಿಂಗಳು ವೃಷಭ ರಾಶಿಯವರಿಗೆ ಬದಲಾವಣೆಗಳನ್ನು ತರಲಿದೆ. ಈ ತಿಂಗಳಲ್ಲಿ ನೀವು ಕಠಿಣ ಕೆಲಸದಿಂದ ಮುಕ್ತಿ ಪಡೆಯಲಿದ್ದೀರಿ. ನಿಮ್ಮ ಕೆಲಸಗಳು ನೀವು ಬಯಸಿದಂತೆ ನಡೆಯಲಿದೆ. ವೃತ್ತಿ ಜೀವನದಲ್ಲಿ ಸಂತಸ ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಹೀಗಾಗಿ ಈ ತಿಂಗಳ ಆರ್ಥಿಕ ಬಯಕೆಗಳನ್ನು ತಾತ್ಕಾಲಿಕವಾಗಿ ನೀವು ನಿವಾರಿಸಿಕೊಳ್ಳುವಿರಿ. ಸಾಲದ ಪ್ರಮಾಣ ಇಳಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಪ್ರಯಾಣಗಳಲ್ಲಿ ನಿಮಗೆ ಶುಭವಾಗುತ್ತಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಪರಸ್ಪರ ಸಂತಸದ ದಿನಗಳು ಬರುತ್ತಿವೆ. ತಿಂಗಳ ಕೊನೆಯ ವಾರದಲ್ಲಿ ಅಧಿಕ ಖರ್ಚುಗಳ ಮಾಡುತ್ತೀರಿ. ಮನೆಗೆ ಅಗತ್ಯವಾಗಿದ್ದ ವಸ್ತುಗಳ ಖರೀದಿಯಿಂದ ಒಟ್ಟಾರೆ ಸಂತಸ ಹೆಚ್ಚಾಗುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನವಿಡಿ.

February 2026 Monthly Horoscope December 2025 Monthly Horoscope In Kannada

ಮಿಥುನ ರಾಶಿ

ಫೆಬ್ರವರಿ ತಿಂಗಳು ಮಿಥುನ ರಾಶಿಯವರಿಗೆ ಬದಲಾವಣೆ ಮತ್ತು ಸಂತಸದ ತಿಂಗಳು. ನೀವು ಬಹಳ ಸಮಯದಿಂದ ಮಾಡಬೇಕಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ವಾಹನ ವಿಚಾರದಲ್ಲಿ ಶುಭ ಸಮಾಚಾರಗಳಿವೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಸೂಕ್ತ ಹಾಗೆ ಉತ್ತಮ ಕೆಲಸಗಳು ಸಿಗುವ ನಿರೀಕ್ಷೆ ಇದೆ. ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯವಾಗಿಯೇ ಇರುತ್ತವೆ, ಆದರೆ ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು. ಒಡಹುಟ್ಟಿದವರೊಂದಿಗೆ ಸಣ್ಣಪುಟ್ಟ ವಿವಾದಗಳು ಇರಬಹುದು. ಸಂಬಂಧಗಳಲ್ಲಿ ಸಂವಹನದ ಕೊರತೆಯು ತಪ್ಪು ತಿಳುವಳಿಕೆಯನ್ನು ಹೆಚ್ಚಿಸಬಹುದು. ತಿಂಗಳ ಅಂತ್ಯದಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರಗಳು ನಿಮಗೆ ಬರಲಿದೆ.

ಕರ್ಕಾಟಕ ರಾಶಿ

ಫೆಬ್ರವರಿ ತಿಂಗಳು ಕರ್ಕಾಟಕ ರಾಶಿ ಜನರಿಗೆ ಮಿಶ್ರಫಲವನ್ನು ತರಲಿದೆ. ನೀವು ಅಂದುಕೊಂಡಿದ್ದ ಕೆಲಸಗಳನ್ನು ಮುಂದೂಡುವ ಸಾಧ್ಯತೆ ಅಧಿಕವಾಗಿದೆ. ತಿಂಗಳ ಆರಂಭದ 15 ದಿನಗಳಲ್ಲಿ ನೀವು ಬಹಳಷ್ಟು ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಪ್ರಯಾಣಗಳನ್ನು ಈ ತಿಂಗಳಲ್ಲಿ ಮಾಡಿ ಮುಗಿಸುವಿರಿ. ವೃತ್ತಿ ಜೀವನದ ಪ್ರಮುಖ ಘಟ್ಟವನ್ನು ಅನುಭವಿಸಬಹುದು. ಅದ್ರಲ್ಲೂ ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ಈ ತಿಂಗಳು ಶುಭ ಸಮಾಚಾರಗಳ ಅನುಭವಿಸುವಿರಿ. ನಿಮ್ಮ ಆದಾಯದಲ್ಲಿ ತೃಪ್ತಿ ಇರಲಿದೆ. ಬಹಳಷ್ಟು ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸುವುದರಿಂದ ನಿಮ್ಮಲ್ಲಿ ನೆಮ್ಮದಿ ಭಾವನೆ ನೋಡಬಹುದು. ದಾಂಪತ್ಯ ಜೀವನದಲ್ಲಿ, ಸಹಕಾರ ಮತ್ತು ತಿಳುವಳಿಕೆ ಹೆಚ್ಚಾಗುತ್ತದೆ. ಆರೋಗ್ಯದ ದೃಷ್ಟಿಕೋನದಿಂದ, ಹೊಟ್ಟೆ ಮತ್ತು ನೀರಿನ ಸಂಬಂಧಿತ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ.

ಸಿಂಹ ರಾಶಿ

ಫೆಬ್ರವರಿ ತಿಂಗಳು ಸಿಂಹ ರಾಶಿ ಜನರಿಗೆ ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಹಣಕಾಸು ಸಮಸ್ಯೆಗಳು ಈ ತಿಂಗಳಿನಿಂದ ಪರಿಹಾರವಾಗಲಿವೆ. ಅನೇಕರಲ್ಲಿ ಗೌರವ ಹೆಚ್ಚಾಗುವ ಸಮಯ ಇದಾಗುತ್ತಿದೆ. ನಿಮ್ಮ ವೃತ್ತಿ ಜೀವನದಲ್ಲೊ ಒತ್ತಡವಿದ್ದರೂ ನೀವು ಬಯಸಿದ ಫಲಿತಾಂಶ ಹಾಗೂ ಯಶಸ್ಸು ಪಡೆಯಲಿದ್ದೀರಿ. ನಿಮ್ಮ ಸ್ವಂತ ಉದ್ಯೋಗ ಸಂಬಂಧಿತ ವಿಚಾರಗಳು ಶುಭವಾಗುತ್ತವೆ. ಹೊಸ ಹೂಡಿಕೆ ಹಾಗೂ ಉಳಿತಾಯದ ಕಡೆಗೆ ಹೆಚ್ಚು ಒಲವು ಹೊಂದಿರುತ್ತೀರಿ. ನಿಮ್ಮ ಆತ್ಮಗೌರವ ಹೆಚ್ಚಾಗುವ ಸಮಯ ಇದಾಗುತ್ತದೆ. ತಿಂಗಳ ಅಂತ್ಯದಲ್ಲಿ ಧನಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಮನೆಯ ವಿಚಾರದಲ್ಲಿ ಶಾಂತಿ ಇರಲಿದೆ. ಅನಿರೀಕ್ಷಿತ ಪ್ರಯಾಣಗಳಲ್ಲಿ ನೆಮ್ಮದಿ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಫೆಬ್ರವರಿ ತಿಂಗಳು ಶಿಸ್ತು ಮತ್ತು ಯೋಜನೆಯ ತಿಂಗಳು ಎನ್ನಬಹುದು. ನಿಮ್ಮ ಹಲವು ಕೆಲಸಗಳು ನೀದು ಬಯಸಿದಂತೆ ನಡೆಯಲಿದೆ. ಸಂಬಂಧಿಕರೊಬ್ಬರಿಂದ ನಿಮಗೆ ಯಾವುದಾದರು ವಿಚಾರದಲ್ಲಿ ಸಹಾಯವಾಗಬಹುದು. ವ್ಯವಹಾರದಲ್ಲಿ ಲಾಭ ಮತ್ತು ಹೊಸ ಅವಕಾಶಗಳು ಉದ್ಭವಿಸಬಹುದು, ಆದರೆ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಆರ್ಥಿಕ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೋಡಬಹುದು. ಹೊಸ ವಸ್ತು ಖರೀದಿ, ವ್ಯವಹಾರಿಕ ಬದಲಾವಣೆಗೆ ಈ ಸಮಯ ಬಹಳ ಉತ್ತಮವಾಗಿರಲಿದೆ.

ತುಲಾ ರಾಶಿ

ಫೆಬ್ರವರಿ ತಿಂಗಳು ತುಲಾ ರಾಶಿಯವರಿಗೆ ಸಮತೋಲನ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ವೃತ್ತಿ ಬದಲಾವಣೆಗಳು ಸಾಧ್ಯ, ಆದರೆ ಚಿಂತನಶೀಲವಾಗಿ ಮುಂದುವರಿಯುವುದು ಸೂಕ್ತ. ಬಹು ಸಮಯದಿಂದ ನೀವು ದೊಡ್ಡ ವಿಚಾರವೊಂದಕ್ಕೆ ಸಂಗ್ರಹಿಸುತ್ತಿದ್ದ ಹಣವು ಬೇರೊಂದು ವಿಚಾರಕ್ಕೆ ವಿನಿಯೋಗಿಸಬಹುದು. ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ. ಆಪ್ತರಿಂದ ನಿಮಗೆ ದೊಡ್ಡ ಲಾಭವಿದೆ. ಕೃಷಿ ಸಂಬಂಧಿತ ವ್ಯವಹಾರದಲ್ಲಿ ಲಾಭವಿದೆ. ಅವಿವಾಹಿತರಿಗೆ ಬಯಸಿದ ಸಂಬಂಧಗಳು ಬರುವ ಸಮಯ. ಹೊಸ ವ್ಯಾಪಾರ ಆರಂಭಿಸುವ ಕನಸು ಕಂಡ ಮಂದಿದೆ. ಈ ತಿಂಗಳು ಹೊಸ ವ್ಯವಹಾರ ಮಾಡುತ್ತಾರೆ. ವಿದ್ಯಾರ್ಥಿಗಳು ಈ ತಿಂಗಳು ಬಹಳ ಕಠಿಣ ಅಭ್ಯಾಸದಲ್ಲಿ ಭಾಗಿಯಾಗುವುದು ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಫೆಬ್ರವರಿ ತಿಂಗಳು ಮಿಶ್ರಫಲ ತರಲಿದೆ. ತಿಂಗಳ ಮೊದಲ 15 ದಿನಗಳು ನೀವು ಅಂದುಕೊಂಡ ಕೆಲಸಗಳು ವೇಗವಾಗಿ ನಡೆಯಲಿವೆ. ಆದ್ರೆ ತದನಂತರ ನಿಮಗೆ ಹಲವು ಸಮಸ್ಯೆಗಳು ಎದುರಾಗಬಹುದು. ವೃತ್ತಿಜೀವನದ ಸವಾಲುಗಳು ಉದ್ಭವಿಸುತ್ತವೆ, ಆದರೆ ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಉದ್ಯಮಿಗಳು ಲಾಭ ಮತ್ತು ಹೊಸ ಸಂಪರ್ಕಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿನ ಸಮಸ್ಯೆಗಳು ಕಡಿಮೆಯಾಗಲಿದೆ. ಭಿನ್ನಾಭಿಪ್ರಾಯಗಳು ಕಡಿಮೆಯಾಗುವುದು ನೋಡಬಹುದು. ಆರೋಗ್ಯದ ದೃಷ್ಟಿಕೋನದಿಂದ, ನೀವು ನಿಮ್ಮ ಚರ್ಮ ಮತ್ತು ಕಣ್ಣುಗಳಿಗೆ ಗಮನ ಕೊಡಬೇಕಾಗುತ್ತದೆ.

ಧನು ರಾಶಿ

ಫೆಬ್ರವರಿ ತಿಂಗಳು ಧನು ರಾಶಿಯವರಿಗೆ ಅನುಕೂಲಕರ ವಾತಾವರಣವನ್ನು ತರಲಿದೆ. ನೀವು ಬಯಸಿರುವಂತೆ ಕೆಲಸಗಳು ನಡೆಯಲಿವೆ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತದೆ. ಕುಟುಂಬ ಸಾಮರಸ್ಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಹೆತ್ತವರ ಆಶೀರ್ವಾದವನ್ನು ನೀವು ಪಡೆಯುತ್ತೀರಿ. ನಿಮ್ಮ ಪ್ರೇಮ ಜೀವನದಲ್ಲಿ ಪ್ರಣಯ ಮತ್ತು ಭಾವನಾತ್ಮಕ ವಿಶ್ರಾಂತಿ ಕಂಡುಬರಬಹುದು. ವೈವಾಹಿಕ ಜೀವನದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ. ಆಸ್ಪತ್ರೆ ಸಂಬಂಧಿತ ಓಟಾಟಗಳು ಇರಲಿವೆ. ಶ್ರಮದಾಯಕ ಕೆಲಸಗಳು ಉತ್ತಮ ಫಲಿತಾಂಶ ತರಲಿವೆ. ವಾಹನ ಖರೀದಿಯ ಆಲೋಚನೆಯಲ್ಲಿದ್ದರೆ ಅದಕ್ಕಾಗಿ ತಯಾರಿ ಧನಾತ್ಮಕ ರೀತಿಯಲ್ಲಿ ನಡೆಯಲಿದೆ.

ಮಕರ ರಾಶಿ

ಫೆಬ್ರವರಿ ತಿಂಗಳು ಮಕರ ರಾಶಿಯ ಜನರಿಗೆ ಅತ್ಯುತ್ತಮ ಫಲಿತಾಂಶಗಳ ತರಲಿದೆ. ನಿಮ್ಮ ಕೌಟುಬಿಕ ಸಮಸ್ಯೆಗಳು ಈ ತಿಂಗಳಲ್ಲಿ ಕಡಿಮೆಯಾಗಲಿದೆ, ಸಹೋದರರೊಂದಿಗೆ ನಿಮ್ಮ ಸಂಬಂಧವು ವೃದ್ಧಿಸಲಿದೆ. ಕುಟುಂಬದೊಂದಿಗೆ ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸಗಳಲ್ಲಿ ಭಾಗಿಯಾಗುವಿರಿ. ಆರ್ಥಿಕ ವಿಚಾರವಾಗಿ ಈ ತಿಂಗಳು ಸಾಮಾನ್ಯವಾಗಿರಲಿದೆ. ಕೆಲವು ಅತಿಥಿಗಳ ಆಗಮನವು ನಿಮ್ಮ ಕುಟುಂಬ ಜೀವನಕ್ಕೆ ಉತ್ಸಾಹವನ್ನು ತರುತ್ತದೆ. ಮನೆಯಲ್ಲಿ ಹೊಸ ಯೋಜನೆಗಳನ್ನು ಚರ್ಚಿಸಬಹುದು. ಆರೋಗ್ಯದ ದೃಷ್ಟಿಕೋನದಿಂದ, ನಿಮ್ಮ ಮೂಳೆ ಮತ್ತು ಕೀಲು ನೋವಿನ ಸಮಸ್ಯೆಗಳು ದೊಡ್ಡದಾಗಬಹುದು. ಪಿತ್ರಾರ್ಜಿತ ಆಸ್ತಿ ಕುರಿತಾದ ವಿಚಾರದಲ್ಲಿ ಸಮಸ್ಯೆಗಳು ಮುಂದುವರೆಯಲಿದೆ.

ಕುಂಭ ರಾಶಿ

ಫೆಬ್ರವರಿಯಲ್ಲಿ ಕುಂಭ ರಾಶಿ ಜನರಿಗೆ ಮಿಶ್ರಫಲವಿದೆ. ನಿರುದ್ಯೋಗಿಗಳಿಗೆ ಉತ್ತಮ ಸಮಯ ಹಾಗೆ ಉದ್ಯೋಗ ಬದಲಾಯಿಸುವ ಆಲೋಚನೆಯಲ್ಲಿದ್ದ ಮಂದಿಗೆ ಬಹಳ ಲಾಭವಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಆದರೆ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಅವಕಾಶವಿರುತ್ತದೆ. ಮಕ್ಕಳ ಆರೋಗ್ಯದಲ್ಲಿನ ಏರುಪೇರು ಹಲವು ದಿನಗಳ ಕಾಲ ನಿಮ್ಮ ಕೆಲಸಗಳು ಮುಂದುವರೆಯದಂತೆ ಮಾಡಬಹುದು. ಹೊಸ ಸ್ನೇಹಿತರ ಭೇಟಿಯಾಗುವಿರಿ. ಕೆಲಸದ ಒತ್ತಡದಿಂದ ಹೊರಬರಲು ನೀವು ಪ್ರವಾಸ ಮಾಡಬಹುದು. ತಿಂಗಳ ಅಂತ್ಯದಲ್ಲಿ ದೊಡ್ಡ ಖರ್ಚುಗಳಿವೆ.

ಮೀನ ರಾಶಿ

ಮೀನ ರಾಶಿಯವರಿಗೆ ಫೆಬ್ರವರಿ ತಿಂಗಳು ಸೂಕ್ಷ್ಮತೆ ಮತ್ತು ಮಾನಸಿಕ ಬೆಳವಣಿಗೆಯ ತಿಂಗಳು. ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಹಳೆಯ ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಅದ್ರಲ್ಲು ಅನಾರೋಗ್ಯ ಸಂಬಂಧಿತ ವಿಚಾರವಾಗಿ ನೀವು ಸವಾಲುಗಳ ಎದುರಿಸಬಹುದು. ಕುಟುಂಬ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಕೂಡಿರುತ್ತದೆ, ಆದರೆ ಹಿರಿಯರನ್ನು ನೋಡಿಕೊಳ್ಳುವುದು ಅತ್ಯಗತ್ಯ. ನಿಮ್ಮ ಪ್ರೇಮ ಜೀವನದಲ್ಲಿ ಭಾವನಾತ್ಮಕ ಸಂಪರ್ಕ ಹೆಚ್ಚಾಗುತ್ತದೆ ಮತ್ತು ಹೊಸ ಆರಂಭ ಸಾಧ್ಯ. ದಾಂಪತ್ಯ ವಿಚಾರದಲ್ಲಿ ಸಂತಸವಿದೆ.

English summary

February 2026 Monthly Horoscope: December 2025 Monthly Horoscope In Kannada

February 2026 Monthly Horoscope in Kannada : Check February monthly horoscope for all 12 zodiac signs in Kannada.
Story first published: Sunday, February 1, 2026, 10:40 [IST]
X
Desktop Bottom Promotion