ಫೆಬ್ರವರಿ ಮಾಸದ ಪ್ರೀತಿ ಭವಿಷ್ಯ ಪ್ರಕಾರ ದ್ವಾದಶಗಳ ಪ್ರೀತಿ ಜೀವನ, ವೈವಾಹಿಕ ಜೀವನ ಹೇಗಿರಲಿದೆ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಫೆಬ್ರವರಿ ಮಾಸ ಪ್ರೇಮಿಗಳಿಗೆ, ವಿವಾಹಿತರಿಗೆ, ಅವಾಹಿತರಿಗೆ ಹೇಗಿರಲಿದೆ ನೋಡೋಣ:

ಮೇಷ ರಾಶಿ
ಮೇಷ ರಾಶಿಯವರ ಪ್ರೀತಿ ಜೀವನ ಚೆನ್ನಾಗಿರಲಿದೆ. ಪ್ರೇಮಿಗಳಿಗೆ ನಿಮ್ಮ ಪ್ರೀತಿಯ ಬಗ್ಗೆ ಮನೆಗೆ ತಿಳಿಸಲು ಈ ಸಮಯ ಅನುಕೂಲಕರವಾಗಿದೆ. ವಿವಾಹಿತರ ವೈವಾಹಿಕ ಬದುಕಿ ಚೆನ್ನಾಗಿರಲಿದೆ. ನಿಮ್ಮಿಬ್ಬರ ನಡುವೆ ಪ್ರೀತಿ-ಸಾಮರಸ್ಯ ಇರಲಿದೆ.

Love Horoscope

ವೃಷಭ ರಾಶಿ
ಈ ಮಾಸ ಸಂಬಂಧದ ವಿಷಯದಲ್ಲಿ ಉತ್ತಮವಾಗಿದೆ, ಹಳೆಯ ಭಿನ್ನಾಭಿಪ್ರಾಯ ಸರಿಪಡಿಸಲು ಸಾಧ್ಯವಾಗಲಿದೆ. ಅವಾಹಿತರಿಗೆ ಮದುವೆ ಸಂಬಂಧ ಬರಬಹುದು. ವಿವಾಹಿತರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯ ಸರಿಪಡಿಸಲು ಈ ಸಮಯ ಉತ್ತಮವಾಗಿದೆ.

ಮಿಥುನ ರಾಶಿ
ಫೆಬ್ರವರಿ ಮಾಸ ಸಂಬಂಧದ ದೃಷ್ಟಿಯಿಂದ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ. ಪ್ರೇಮಿಗಳ ಬಾಂಧವ್ಯ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷವಿರಲಿದೆ.

ಕರ್ಕ ರಾಶಿ
ಪ್ರೀತಿಯ ಮಾಸವಾದ ಫೆಬ್ರವರಿ ಕರ್ಕ ರಾಶಿಯವರಿಗೆ ಅನುಕೂಲಕರವಾಗಿದೆ. ಪ್ರೀತಿ ಜೀವನಕ್ಕೆ ಚೆನ್ನಾಗಿರಲಿದೆ. ವಿವಾಹಿತರ ವೈವಾಹಿಕ ಬದುಕು ಉತ್ತಮವಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ.

ಸಿಂಹ ರಾಶಿ
ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಅಭಿಪ್ರಾಯ ವ್ಯತ್ಯಾಸವಿದ್ದರೆ ಅದನ್ನು ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ, ಸಂಬಂಧದಲ್ಲಿ ಪ್ರೀತಿ, ಸಾಮರಸ್ಯ ಹೆಚ್ಚಾಗುವುದು.

ಕನ್ಯಾ ರಾಶಿ

ನೀವು ಲವ್ ಪ್ರಪೋಸ್ ಮಾಡಬೇಕೆಂದಿದ್ದರೆ ಈ ಮಾಸ ನಿಮ್ಮ ಪ್ರೀತಿ ಹೇಳಿಕೊಳ್ಳಲು ಸಕರಾತ್ಮಕವಾಗಿದೆ, ಆ ವ್ಯಕ್ತಿ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಬಹುದು. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ.

ತುಲಾ ರಾಶಿ
ನೀವು ಸಂಬಂಧದ ವಿಷಯದಲ್ಲಿ ಜಾಗ್ರತೆವಹಿಸಿ, ಚಿಕ್ಕ ಪುಟ್ಟ ವಿಷಯ ದೊಡ್ಡದು ಮಾಡಲು ಹೋಗಬೇಡಿ ಎಂಬ ಸಲಹೆ ನೀಡಲಾಗುವುದು. ನಿಮ್ಮ ಸಂಬಂಧದಲ್ಲಿ ಮೂರನೇಯವರ ಅಭಿಪ್ರಾಯ ತೆಗೆದುಕೊಳ್ಳಲು ಹೋಗಬೇಡಿ, ಏನೇ ಸಮಸ್ಯೆಯಿದ್ದರೆ ನೀವಿಬ್ಬರೇ ಮಾತನಾಡಿ ಬಗೆಹರಿಸಿ.

ವೃಶ್ಚಿಕ ರಾಶಿ
ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿ ಜೊತೆಗೆ ಮುಕ್ತವಾಗಿ ಹಂಚಿಕೊಳ್ಳಲು ಹಿಂದೇಟು ಹಾಕಬೇಡಿ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಅವಸರದ ನಿರ್ಧಾರ ಬೇಡ, ಸರಿಯಗಿ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಲಾಗುವುದು.

ಧನು ರಾಶಿ
ನಿಮ್ಮ ಹಾಗೂ ಸಂಗಾತಿ ನಡುವಿನ ಸಂಬಂಧ ಚೆನ್ನಾಗಿರಲಿದೆ, ನೀವು ಟ್ರಿಪ್‌ ಪ್ಲ್ಯಾನ್‌ ಮಾಡಬಹುದು ಅಥವಾ ಸರ್‌ಫ್ರೈಸ್ ಪ್ಲ್ಯಾನ್ ಮಾಡಬಹುದು. ಕುಟುಂಬದಲ್ಲಿ ಸಂತಫಷದ ವಾತಾವರಣ ಇರಲಿದೆ.

ಮಕರ ರಾಶಿ
ಕೆಲವೊಂದು ತಪ್ಪು ತಿಳುವಳಿಕೆ ನಿಮ್ಮಿಬ್ಬರ ನಡುವೆ ಸಮಸ್ಯೆ ಉಂಟು ಮಾಡಬಹುದು, ಹಾಗಾದಂತೆ ನೋಡಿ, ಯಾವುದೇ ವಿಷಯ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮುಕ್ತವಾಗಿ ಮಾತನಾಡುವುದು ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯ ಅವಾಹಿತರಿಗೆ ಮದುವೆ ಅಥವಾ ಪ್ರೀತಿ ಪ್ರಸ್ತಾಪಬರಬಹುದು. ಕುಟುಂಬದಲ್ಲಿ ಸಾಮರಸ್ಯ ಚೆನ್ನಾಗಿರಲಿದೆ. ವೈವಾಹಿಕ ಬದುಕಿನಲ್ಲಿ ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.

ಮೀನ ರಾಶಿ
ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು, ನೀವು ಪ್ರಮುಖ ನಿರ್ಧಾರ ಒಂಟಿಯಾಗಿ ತೆಗೆದುಕೊಳ್ಳಬೇಡಿ, ಸಂಗಾತಿಯ ಅಭಿಪ್ರಾಯಕ್ಕೂ ಗೌರವ ನೀಡಿ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

February 2025 Love Horoscope Prediction For 12 Zodiac Signs In Kannada

Here is February 2025 Love Horoscope Prediction , which are lucky in this month, read on....
Story first published: Wednesday, January 29, 2025, 22:43 [IST]
X
Desktop Bottom Promotion