Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಫೆಬ್ರವರಿ 20 ದಿನ ಭವಿಷ್ಯ ಪ್ರಕಾರ ಯಾವ ರಾಶಿಗೆ ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಫೆಬ್ರವರಿ 20 ನಿಮಗೆ ಹೇಗಿರಲಿದೆ?
ಮೇಷ ರಾಶಿ
ಈ ದಿನ ನಿಮಗೆ ಮಿಶ್ರಫಲ, ಕೆಲಸದ ಕಡೆ ಹೆಚ್ಚಿನ ಗಮನಹರಿಸಿ, ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು, ಆರೋಗ್ಯದ ಕಡೆಗೆ ಗಮನಹರಿಸಿ, ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ.

ವೃಷಭ ರಾಶಿ
ಈ ದಿನ ನಿಮಗೆ ಶುಭವಾಗಿರಲಿದೆ, ಆದರೆ ಹಣಕಾಸಿನ ಬಗ್ಗೆ ಹೇಳುವುದಾದರೆ ಬಜೆಟ್ ಮೀರಿ ಖರ್ಚು ಮಾಡಬೇಡಿ, ಈ ದಿನ ನೀವು ಕೋಪ ನಿಯಂತ್ರಿಸಬೇಕು, ಕುಟುಂಬ ಜೀವನ ಚೆನ್ನಾಗಿರಲಿದೆ.
ಮಿಥುನ ರಾಶಿ
ಈ ದಿನ ನಿಮಗೆ ಮಿಶ್ರಫಲ, ಕೆಲಸದಲ್ಲಿ ನೀವು ನಿರೀಕ್ಷೆ ಮಾಡಿದಂತೆ ಫಲ ಪಡೆಯಲು ಕಷ್ಟವಾಗುವುದು, ಕುಟುಂಬದಲ್ಲಿಯೂ ಒತ್ತಡದ ವಾತಾವರಣ ಇರಬಹುದು, ನೀವು ಈ ದಿನ ತಾಳ್ಮೆಯಿಂದ ವರ್ತಿಸಬೇಕು, ಪ್ರತಿಕೂಲ ಸಂದರ್ಭದಲ್ಲಿ ಕೋಪದ ಮಾತುಗಳನ್ನಾಡಿದರೆ ನಷ್ಟ ನಿಮಗೇ ನೆನಪಿರಲಿ.
ಕರ್ಕ ರಾಶಿ
ಈ ದಿನ ನಿಮಗೆ ತುಂಬಾನೇ ಮುಖ್ಯವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಖುಷಿ ಸುದ್ದಿ ಪಡೆಯುತ್ತೀರಿ, ನಿಮ್ಮ ಕೆಲಸ ಕಾರ್ಯವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ, ವ್ಯಾಪಾರಿಗಳಿಗೂ ಈ ದಿನ ಉತ್ತಮವಾಗಿದೆ. ವಿರೋಧಿಗಳ ಬಗ್ಗೆ ಜಾಗ್ರತೆವಹಿಸಿ.
ಸಿಂಹ ರಾಶಿ'
ಈ ದಿನ ನೀವು ಹೆಚ್ಚು ಜಾಗ್ರತೆವಹಿಸಿ, ಆರೋಗ್ಯ ಸಂಬಂಧಿತ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ, ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ಈ ದಿನ ವಾಹನವನ್ನು ಜಾಗ್ರತೆಯಿಂದ ಓಡಿಸಿ, ವೈವಾಹಿಕ ಬದುಕು ಚೆನ್ನಾಗಿರಲಿದೆ.
ಕನ್ಯಾ ರಾಶಿ
ಈ ದಿನ ಹೆಚ್ಚು ಜಾಗ್ತೆವಹಿಸಿ, ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ, ಮನೆಯ ನವೀಕರಣದ ಬಗ್ಗೆ ಆಲೋಚನೆ ಮಾಡುತ್ತೀರಿ, ಇನ್ನು ವ್ಯಾಪಾರಿಗಳು ಅದರಲ್ಲಿಯೂ ಆನ್‌ಲೈನ್ ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ.
ತುಲಾ ರಾಶಿ
ಈ ದಿನ ಜಾಗ್ರತೆವಹಿಸಿ, ಪ್ರೇಮಿಗಳಿಗೆ ಈ ದಿನ ವಿಶೇಷವಾಗಿರಲಿದೆ, ನಿಮ್ಮ ಮದುವೆಗೆ ಮನೆಯವರ ಒಪ್ಪಿಗೆ ಪಡೆಯಬಹುದು, ರಾಜಕಾರಣಿಗಳಿಗೆ ಈ ಈ ದಿನ ಉತ್ತಮವಾಗಿದೆ, ಕೆಲಸ ಹುಡುಕುತ್ತಿರುವವರು ಅದಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿ ಪಡೆಯುತ್ತೀರಿ.
ವೃಶ್ಚಿಕ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ, ಇನ್ನು ಹಣದ ಖರ್ಚು ಹೆಚ್ಚಿರಲಿದೆ, ಆದರೆ ಮನೆಗೆ ಐಷಾರಾಮಿ ವಸ್ತುಗಳಿಗಾಗಿ ಖರ್ಚು ಮಾಡುತ್ತೀರಿ. ಕುಟುಂಬದಲ್ಲಿ ಏನಾದರು ಸಮಸ್ಯೆವಿದ್ದರೆ ಅದನ್ನು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಧನು ರಾಶಿ
ವ್ಯಾಪರಿಗಳಿಗೆ ಈ ದಿನ ಉತ್ತಮವಾಗಿರಲಿದೆ,ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಕೆಲಸದಲ್ಲಿ ಏನಾದರು ಸಮಸ್ಯೆವಿದ್ದರ ಅದು ಬಗೆಹರಿಯಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.
ಮಕರ ರಾಶಿ
ಹಣದ ದೃಷ್ಟಿಯಿಂದ ಈ ಿನ ಉತ್ತಮವಾಗಿದೆ, ಇನ್ನು ಹೊಸ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರು ನಿಮ್ಮ ಪ್ರಯತ್ನ ಮತ್ತಷ್ಟು ಹಾಕಬೇಕಾಗುತ್ತದೆ. ನಿಮಗೆ ವಹಿಸಿರುವ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ. ಕುಟುಂಬದಲ್ಲಿಯೂ ಕೆಲ ಭಿನ್ನಾಭಿಪ್ರಾಯವಿರಬಹುದು.
ಕುಂಭ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ಕೆಲಸದ ಒತ್ತಡ ಕಡಿಮೆ ಇರಲಿದೆ, ಏನಾದರೂ ಆರೋಗ್ಯ ಸಮಸ್ಯೆವಿದ್ದರೆ ಸುಧಾರಣೆ ಕಂಡು ಬರಲಿದೆ, ವೃತ್ತಿ ಬದುಕಿಗೆ ಸಂಬಂಧಿಸಿದ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುವುದು.
ಮೀನ ರಾಶಿ
ಈ ದಿನ ನಿಮಗೆ ತುಂಬಾನೇ ಮುಖ್ಯವಾಗಿದೆ, ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಖರ್ಚು ಹೆಚ್ಚಿರಲಿದೆ, ಹಣಕ್ಕೆ ಸಂಬಂಧಿಸಿದ ಹೂಡಿಕೆಯನ್ನು ಜಾಗ್ರತೆಯಿಂದ ಮಾಡಿ, ಅಪೂರ್ಣವಾಗಿರುವ ಕೆಲಸದ ಕಡೆಗೆ ಗಮನಹರಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications