Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
February 19 Horoscope: ಯಾರ ಪಾಲಿಗೆ ಈ ದಿನವು ಅನುಕೂಲಕರ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 19 (February 19 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಅನುಕೂಲವಿದೆ. ನಿಮ್ಮ ಹಲವು ಕೆಲಸಗಳನ್ನು ಅಂದುಕೊಂಡಂತೆ ಪೂರ್ಣ ಮಾಡುವಿರಿ. ಯಾರಿಗೂ ಸಾಲ ನೀಡಬೇಡಿ. ನಿಮ್ಮ ಆಪ್ತರೊಬ್ಬರ ಕೆಲಸದ ವಿಚಾರವಾಗಿ ಪ್ರಯಾಣ ಮಾಡುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಯಾರಿಗೂ ಶಕ್ತಿಯಿಂದ ಗೆಲ್ಲಲಾಗದ ಕೆಲವು ಸವಾಲುಗಳನ್ನು ಯುಕ್ತಿಯಿಂದ ಸರಳವಾಗಿ ಗೆದ್ದು ಬೀಗುವಿರಿ. ನಿಮ್ಮಲ್ಲಿದ್ದ ಹಣಕಾಸು ಕುರಿತಾದ ಚಿಂತೆಯೊಂದಕ್ಕೆ ತಾತ್ಕಾಲಿಕ ನಿವಾರಣೆಯನ್ನು ನೋಡುವಿರಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳನ್ನು ಬೇರೆಯವರ ಸಹಕಾರದಿಂದ ಮುಗಿಸಲಿದ್ದೀರಿ. ಕೆಲಸದ ಸ್ಥಳದಲ್ಲಿ ಮಾನಸಿಕ ಒತ್ತಡ ಹೆಚ್ಚಲಿದೆ. ಆರ್ಥಿಕ ವಿಚಾರವಾಗಿ ನೀವಿಂದು ಅನಗತ್ಯ ಖರ್ಚುಗಳಿಂದ ದೂರವಿರಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಸಮಸ್ಯೆಗಳ ದಿನ. ನೀವು ಮಾಡುವ ಹಲವು ಕೆಲಸಗಳು ನಿಮಗೆ ತೃಪ್ತಿ ನೀಡದೆ ಇರಬಹುದು. ಜಮೀನಿನ ಖರೀದಿ ವಿಚಾರದ ಮಾತುಕತೆಗಳು ನಡೆಯಲಿವೆ. ವ್ಯಾಪಾರದಲ್ಲಿನ ಲಾಭದಾಯಕ ಕೆಲಸಗಳು ಮತ್ತೆ ಮರುಕಳಿಸಲಿವೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನೀವು ಹಣಕಾಸಿನ ವಿಚಾರದಲ್ಲಿ ಇಂದು ಗೆಲುವು ಪಡೆಯಲಿದ್ದೀರಿ. ಯಾರಿಂದಾದರು ಹಣ ಪಡೆಯುವ ಬಯಕೆಯೂ ಈಡೇರಬಹುದು. ಮಾರಾಟ ಮತ್ತು ಖರೀದಿ ಸಂಬಂಧಿಸಿದ ವಿಚಾರದಲ್ಲಿ ಶುಭವಾಗುವುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನವು ಶುಭ ನೋಡುವಿರಿ. ವಾಹನ ಮಾರಾಟದ ಯೋಚನೆಯಲ್ಲಿರುವವರು ಮುಂದೂಡುವುದು ಉತ್ತಮ. ಹಿರಿಯ ಅಧಿಕಾರಿಗಳ ಅಥವಾ ಆಪ್ತರ ಸಹಾಯ ಸಿಗುವುದು. ಭೂಮಿ ಸಂಬಂಧಿತ ವ್ಯವಹಾರಗಳು ಲಾಭಕರವಾಗುತ್ತೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ದಿನದ ಅಂತ್ಯದಲ್ಲಿ ಅಚ್ಚರಿಯ ಸುದ್ದಿ ಕೇಳಲಿದ್ದೀರಿ. ನಿಮ್ಮ ಹಣಕಾಸು ವಿಚಾರವಾಗಿ ಆಪ್ತರ ಸಹಾಯವಿದೆ. ಮನೆಯ ವಾತಾವರಣವು ನಿಮಗೆ ಸಂತಸ ತರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುವುದು ಉತ್ತಮ.
ವೃಶ್ಚಿಕ ರಾಶಿ
ಮೂರನೆ ವ್ಯಕ್ತಿಯ ಮಾತಿನ ಮೇಲೆ ಹಣ ಹೂಡಿಕೆ ಮಾಡುವುದು ದೊಡ್ಡ ತಪ್ಪಾಗಬಹುದು. ದಾಂಪತ್ಯ ವಿಚಾರದಲ್ಲಿನ ಸಮಸ್ಯೆಗಳ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಯಾರಿಗೂ ಸಾಲ ನೀಡಬೇಡಿ. ವಾಹನ ಸಂಬಂಧವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಧನು ರಾಶಿ
ನೀವು ಮಾಡಿರುವ ಸಹಾಯವು ಬೇರೆಯವರಿಂದಲೂ ನಿರೀಕ್ಷಿಸಲು ಹೋಗಬೇಡಿ. ಶುಭ ಕಾರ್ಯ ಸಂಬಂಧಿತ ಚರ್ಚೆಗಳಲ್ಲಿ ಭಾಗಿಯಾಗುವಿರಿ. ಪಂಚೇಂದ್ರಿಯ ಸಂಬಂಧಿತ ಸಣ್ಣ ಪುಟ್ಟ ಅನಾರೋಗ್ಯದಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಸ್ನೇಹಿತರೊಬ್ಬರಿಗೆ ಸಹಾಯ ಮಾಡಬೇಕಾಗುತ್ತದೆ.
ಮಕರ ರಾಶಿ
ಕೆಲಸದ ಸ್ಥಳದಲ್ಲಿ ನಿಮಗೆ ಇಂದು ದೊಡ್ಡ ಸವಾಲುಗಳು ಎದುರಾಗಬಹುದು. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ನಾಯಕತ್ವ ಪ್ರದರ್ಶಿಸುವ ದಿನವಾಗಬಹುದು. ತಾಯಿಯ ಆರೋಗ್ಯದ ಕಡೆ ಹೆಚ್ಚು ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಹಲವು ರೀತಿಯ ಅನುಕೂಲವಿದೆ. ನೀವು ಬಹುಸಮಯದಿಂದ ಮಾಡಬೇಕಿದ್ದ ಕೆಲಸ ಪೂರ್ಣ ಮಾಡುವಿರಿ. . ಉತ್ತಮ ಪರಿಶ್ರಮಕ್ಕೆ ಲಾಭ ಸಿಗುತ್ತದೆ. ಹೊಸ ಜವಾಬ್ದಾರಿಗಳು ನಿಮಗೆ ಚಿಂತೆಗೀಡು ಮಾಡಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಅನುಕೂಲಕರ ದಿನವಾಗುತ್ತಿದೆ. ನೀವು ಅಂದುಕೊಂಡ ಕೆಲಸ ಮಾಡಿ ಮುಗಿಸಲು ಸೂಕ್ತ ದಿನ. ಯಾರಿಗೂ ಈ ದಿನ ನಿಮ್ಮ ಕೆಲಸವನ್ನು ವಹಿಸಲು ಮುಂದಾಗಬೇಡಿ. ಪ್ರಯಾಣಗಳಲ್ಲಿ ಎಚ್ಚರಿಕೆ ವಹಿಸಿ. ಸಹೋದರರೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ.



Click it and Unblock the Notifications