Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 18 Horoscope: ದೈನಂದಿನ ಕೆಲಸಗಳು ನಿಧಾನವಾಗಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 18 (February 18 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸು ಸ್ಥಿತಿ ನೀವು ಅಂದುಕೊಂಡಂತೆ ಇರುವುದಿಲ್ಲ. ಯಾರಿಂದಾದರು ಹಣ ಪಡೆಯುವ ಬಯಕೆಯು ಈಡೇರದೆ ಇರಬಹುದು. ಕೆಲಸಗಳಲ್ಲಿ ನೋವಿದೆ.
ವೃಷಭ ರಾಶಿ
ನಿಮ್ಮಲ್ಲಿ ಇಂದು ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಆಪ್ತರ ಅನಾರೋಗ್ಯ ವಿಚಾರವಾಗಿ ನೀವು ಪ್ರಯಾಣಿಸುತ್ತೀರಿ. ಗೃಹಿಣಿಯರ ಆರೋಗ್ಯ ವಿಚಾರವಾಗಿ ಇರುವ ಸಮಸ್ಯೆಗಳು ಬಗೆಹರಿಯಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಅನಗತ್ಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ದೂರ ಇರಿ. ನೀವು ಪ್ರಯತ್ನಿಸಿದ ಕಾರ್ಯಗಳು ಗುರು-ಹಿರಿಯರ ಅನುಗ್ರಹದಿಂದ ಕೈಗೂಡುತ್ತವೆ. ಯಾರಿಗೂ ಹಣ ನೀಡಲು ಮುಂದಾಗಬೇಇ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಮಿಶ್ರಫಲದ ದಿನ. ದಿನದ ಆರಂಭದಲ್ಲಿನ ಖರ್ಚುಗಳನ್ನು ನಿಭಾಯಿಸುವುದು ಉತ್ತಮ. ಮನೆಯ ವಿಚಾರವೊಂದರಿಂದ ನೀವು ಚಿಂತೆಗೆ ಒಳಗಾಗಬಹುದು. ದಿನದ ಅಂತ್ಯದಲ್ಲಿ ಖರೀದಿಯ ಆಸಕ್ತಿ ಹೆಚ್ಚಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅನುಕೂಲಕರ ದಿನ, ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವಾಹನ ವ್ಯವಹಾರಗಳಲ್ಲಿ ವಿಶೇಷ ಲಾಭ ಆಗುವುದು. ಮನೆಯ ಹಿರಿಯ ಸದಸ್ಯರ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಮಾಡಬೇಡಿ. ಪ್ರಯಾಣಗಳ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ದಿನದ ಆರಂಭದಲ್ಲಿ ಅಡ್ಡಿಗಳು ಎದುರಾಗುತ್ತವೆ. ವಿವಾದಗಳಿಂದ ದೂರ ಉಳಿದು ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ವ್ಯಾಪಾರಿ ವಲಯದಲ್ಲಿ ಹಣಕಾಸಿನ ತೊಡಕುಗಳು ಎದುರಾಗಬಹುದು. ದಾಂಪತ್ಯ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ನೋವಿಗೆ ಕಾರಣವಾಗಬಹುದು.
ತುಲಾ ರಾಶಿ
ನಿಮಗಿಂದು ಶುಭ ಕಾರ್ಯ ಸಂಬಂಧಿತ ಕರೆಗಳು ಬರಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಗುರುತಿಸುವಿಕೆ ನೋಡಬಹುದು. ಪಿತ್ರಾರ್ಜಿತ ಆಸ್ತಿ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಹತ್ತು ಹಲವು ಕೆಲಸಗಳು ನಡೆಯಲಿವೆ, ನಿಮ್ಮ ಈ ದಿನ ಶ್ರಮದಾಯಕವಾಗಿರಲಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಮುಂದೂಡಬೇಕಾಗುತ್ತದೆ. ದಾಂಪತ್ಯ ವಿಚಾರವಾಗಿ ಇದ್ದಂತಹ ಮುನಿಸುಗಳು ಶಮನವಾಗಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಪ್ರಯಾಣ ಮಾಡುವ ದಿನ. ಗೃಹಿಣಿಯರು ಆರೋಗ್ಯ ಸಂಬಂಧ ಗಮನವಿಡಿ. ಮಕ್ಕಳ ಕುರಿತಾಗಿದ್ದ ಚಿಂತೆ ದೂರಾಗುವ ದಿನ. ನಿಮ್ಮ ಪ್ರಮುಖ ಕೆಲಸವೊಂದು ಮಂದಗತಿಯಲ್ಲಿ ಸಾಗಲಿದೆ. ಬ್ಯಾಂಕಿಂಗ್ ವಲಯದಲ್ಲಿರುವ ಮಂದಿ ಎಚ್ಚರಿಕೆ ವಹಿಸಿ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಉತ್ತಮ ಸಮಯಗಳಿವೆ. ಆಪ್ತರ ಭೇಟಿಯಾಗುತ್ತೀರಿ. ನಿಮಗೆ ಬರಬೇಕಿದ್ದ ಸಣ್ಣ ಮೊತ್ತವೊಂದು ಕೈ ಸೇರಲಿದೆ. ಮನೆಗಾಗಿ ನೀವು ಪ್ರಮುಖ ವಸ್ತುವೊಂದನ್ನು ಖರೀದಿಸಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಹಲವು ಪ್ರಯತ್ನಗಳಿಗೆ ಇಂದು ಫಲ ಸಿಗಬಹುದು. ಕೆಲಸ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವ ನಿರ್ಧಾರ ಮಾಡಿ. ಪ್ರಯಾಣಗಳಲ್ಲಿ ಎಚ್ಚರಿಕೆ ಇಡಿ. ಹಳೆಯ ಆರ್ಥಿಕ ಸಮಸ್ಯೆಗಳು ಮತ್ತೆ ಮರುಕಳಿಸಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಿದೆ. ನಿಮ್ಮ ಪ್ರಯಾಣಗಳಲ್ಲಿ ಶುಭವಾಗುತ್ತದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ನಿಮ್ಮಲ್ಲಿ ನೆಮ್ಮದಿ ತರಲಿದೆ. ಹೊಸ ವಸ್ತುಗಳಿಂದ ಸಂತಸವಿದೆ. ಬಹುಸಮಯದಿಂದ ಪ್ರಯಾಣದಿಂದ ಕೆಲಸವೊಂದು ಮುಂದೂಡುತ್ತಿದ್ದರೆ ಈ ದಿನ ಪೂರ್ಣವಾಗಬಹುದು.



Click it and Unblock the Notifications