Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 17 Horoscope: ಗ್ರಹಣ ದಿನ ಯಾರಿಗಿದೆ ಸಮಸ್ಯೆ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 17 (February 17 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲಕ ತರಲಿದೆ. ನೀವು ದಿನದ ಆರಂಭದಿಂದಲೂ ಸಂತಸದಿಂದ ಇರುವಿರಿ. ಆಸ್ತಿ ಸಂಬಂಧಿತ ವಿಚಾರವಾಗಿ ಶುಭವಿದೆ. ಮನೆಯ ವಾತಾವರಣದಲ್ಲಿ ಖುಷಿ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ಪ್ರಯಾಣಗಳ ಮಾಡುವಿರಿ. ಗೃಹಿಣಿಯರಲ್ಲಿನ ಹಣಕಾಸಿನ ಸಮಸ್ಯೆ ಬಗೆಹರಿಯುವ ದಿನವಾಗುತ್ತದೆ. ನಿಮ್ಮ ಸ್ನೇಹಿತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಪ್ರಯಾಣಗಳ ಮಾಡುವಿರಿ. ಆಪ್ತರೊಬ್ಬರಿಂದ ನಿಮಗೆ ಹಣ ಹರಿದು ಬರಬಹುದು. ಯಾರಿಂದಾದರು ಸಹಾಯಕ್ಕೆ ಬೇಡಿಕೆ ಇಟ್ಟಿದ್ದರೆ ಈಡೇರುವ ಸಂಭವವಿದೆ. ವಾಹನ ಕುರಿತಾದ ಚಿಂತೆಗಳು ಕಾಡಲಿದೆ.
ಕರ್ಕ ರಾಶಿ
ನೀವಿಂದು ಕೆಲಸದಲ್ಲಿ ಶ್ರಮ ಹಾಕುತ್ತೀರಿ. ಮಹಿಳೆಯರಲ್ಲಿ ಪ್ರಯಾಣಗಳಿವೆ. ಬಹು ಸಮಯದ ನಿಮ್ಮ ಅನಾರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಯಾರಿಗೂ ಸಾಲ ನೀಡಬೇಡಿ. ಮಕ್ಕಳ ಕುರಿತಾದ ಮುಖ್ಯ ವಿಚಾರವೊಂದರಲ್ಲಿ ನಿಮಗೆ ಚಿಂತೆ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಪ್ರಯಾಣಗಳನ್ನು ಮಾಡುವ ದಿನ. ನಿಮ್ಮ ಆರ್ಥಿಕ ಸ್ಥಿತಿ ಯಥಾಸ್ಥಿತಿಯಲ್ಲಿ ಇರಲಿದೆ. ದೇವಾಲಯ ಭೇಟಿಯ ಅವಕಾಶದಿಂದ ವಂಚಿತರಾಗಬೇಡಿ. ಪ್ರೇಮಿಗಳಿಗೆ ಈ ದಿನ ಬಹಳ ಅನುಕೂಲವಿದೆ. ಕೆಲಸ ಬದಲಾಯಿಸುವ ನಿಮ್ಮ ಆಸೆಯನ್ನು ಮತ್ತೆ ಮುಂದೂಡುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಸಂಕಷ್ಟಗಳಿವೆ. ಉದ್ಯೋಗ ಸಂಬಂಧಿತ ವಿಚಾರವಾಗಿ ಇರುವ ಕಂಟಕ ದೊಡ್ಡದಾಗುತ್ತದೆ. ಆಪ್ತರು ಅಥವಾ ಪ್ರಭಾವಿಗಳ ಭೇಟಿಯಾಗುವಿರಿ. ಗೃಹಿಣಿಯರಲ್ಲಿನ ಸಮಸ್ಯೆಗಳಿಗೆ ನಿರಾಳತೆ ಸಿಗಲಿದೆ. ಮಕ್ಕಳಿಂದ ಸಮಸ್ಯೆ ಎದುರಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಪ್ರಯಾಣಗಳಲ್ಲಿ ಭಾಗಿಯಾಗಬೇಕಾದ ದಿನ. ಹಣಕಾಸು ವಿಚಾರವಾಗಿ ನೀವು ಯಾರಿಂದಾದರು ಸಲಹೆ ಪಡೆಯಬಹುದು. ಪ್ರೀತಿ ಪಾತ್ರರಲ್ಲಿ ಇಂದು ತಾಳ್ಮೆಯಿಂದ ಮಾತನಾಡಿ. ವ್ಯಾಪಾರಿಗಳಿಗೆ ಮಿಶ್ರಫಲದ ದಿನವಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಸಮಸ್ಯೆಗಳ ಎದುರಿಸಬಹುದು. ಹಲವು ವಿಚಾರಗಳು ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿ ತರಲಿವೆ. ನಿಮ್ಮ ಹಣಕಾಸು ವಿಚಾರದಲ್ಲಿ ಕಷ್ಟದ ದಿನ. ಅಗತ್ಯ ಕೆಲಸಕ್ಕೆ ಹಣಕಾಸಿನ ಕೊರತೆ ಎದುರಿಸಬಹುದು.
ಧನು ರಾಶಿ
ಧನು ರಾಶಿಯ ಗೃಹಿಣಿಯರು ಅನಾರೋಗ್ಯ ಎದುರಿಸಬಹುದು. ಆದ್ರೆ ದಿನದ ಅಂತ್ಯದಲ್ಲಿ ಚಿಕಿತ್ಸೆಯೂ ಸಿಗಲಿದೆ. ಸರ್ಕಾರಿ ಹುದ್ದೆಯಲ್ಲಿರುವ ಮಂದಿಗೆ ನಷ್ಟದ ದಿನ, ನಿಮ್ಮ ಹಣಕಾಸು ವಿಚಾರದಲ್ಲಿ ನೋವಿದೆ. ಪ್ರಯಾಣಗಳಲ್ಲಿ ಶುಭವಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನ. ಬಹಳ ಸಮಯದಿಂದ ಬಾಕಿ ಉಳಿಸಿಕೊಂಡ ಕೆಲಸ ಮಾಡಿ ಮುಗಿಸಿ. ನಿಮ್ಮ ಬ್ಯಾಂಕಿಂಗ್ ವಿಚಾರದಲ್ಲಿ ವೇಗ ಸಿಗಲಿದೆ. ಮನೆ ನಿರ್ಮಾಣ ಸಂಬಂಧಿತ ವಿಚಾರದಲ್ಲಿ ಉತ್ತಮ ದಿನವಾಗುತ್ತಿದೆ. ಸ್ನೇಹಿತರ ಭೇಟಿಯಾಗುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಬಹು ದಿನದ ಆಸೆಯೊಂದನ್ನು ಈಡೇರಿಸಿಕೊಳ್ಳುವ ದಿನ. ನೀವು ಯಾರಿಗೂ ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ದಿನ ನೀಡುವುದು ಉತ್ತಮ. ಮನೆಗಾಗಿ ನೀವು ವಸ್ತುವೊಂದನ್ನು ಖರೀದಿಸಬಹುದು. ಮಕ್ಕಳ ಓದಿನ ಕಡೆ ಗಮನವಿಡಿ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮಿಂದ ಮನೆಗೆ ಹೊಸ ಆದಾಯ ಬರಲಿದೆ. ಆಪ್ತರೊಬ್ಬರು ನಿಮ್ಮನ್ನು ಭೇಟಿಯಾಗುತ್ತಾರೆ. ದೇವಾಲಯ ಅಥವಾ ಪ್ರವಾಸಿ ತಾಣದ ಭೇಟಿಯೂ ಮಾಡಬಹುದು. ವಾಹನ ವಿಚಾರದಲ್ಲಿ ಎಚ್ಚರ ವಹಿಸಿ.



Click it and Unblock the Notifications










