ಫೆಬ್ರವರಿ 16ರ ದಿನ ಭವಿಷ್ಯ ಪ್ರಕಾರ ಭಾನುವಾರದ ದಿನ 12 ರಾಶಿಗಳಿಗೆ ಹೇಗಿರಲಿದೆ?

ವೈದಿಕಶಾಸ್ತ್ರದ ಪ್ರಕಾರ ಫೆಬ್ರವರಿ 16 ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ

ಮೇಷ ರಾಶಿ

ಈ ದಿನ ವಿವಾಹಿತರು ಜಾಗ್ರತೆವಹಿಸಬೇಕು, ಸಂಗಾತಿ ಹಾಗೂ ನಿಮ್ಮ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ನೋಡಿಕೊಳ್ಳಿ. ದೂರ ಪ್ರಯಾಣದಂತಹ ವಿಶ್ರಾಂತಿ ಇಲ್ಲದ ಕೆಲಸಕ್ಕೆ ಮುಂದಾಗಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಇಂದು ಸುಧಾರಿಸಲಿದೆ. ಹಲವು ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಕಳವಳದಿಂದ ಹೆಚ್ಚು ಸಮಯ ಒತ್ತಡಕ್ಕೆ ಒಳಗಾಗಬಹುದು.

February 16 Daily Horoscope Prediction For 12 Zodiac Signs In Kannada

ವೃಷಭ ರಾಶಿ

ನೀವು ಯಾರಿಗಾದರೂ ಸಾಲ ನೀಡಿದ್ದರೆ ಮರಳಿ ಪಡೆಯಬಹುದು. ಇಂದು ನಿಮ್ಮ ಆರ್ಥಿಕ ಲಾಭ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಒಳ್ಳೆಯ ಅವಕಾಶಗಳು ಬರಬಹುದು.

ಮಿಥುನ ರಾಶಿ

ವ್ಯಾಪಾರಿಗಳು ಇಂದು ಉತ್ತಮ ಆರ್ಥಿಕ ಲಾಭ ಪಡೆಯಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಕುಟುಂಬದಲ್ಲಿ ಶಾಂತಿ ಇರಲಿದೆ, ಈ ದಿನ ಹೆಚ್ಚು ಸಮಯ ಪ್ರಯಾಣಿಸಬೇಕಾಗಬಹುದು. ವ್ಯಾಪಾರದಲ್ಲಿ ಅಡೆತಡೆ ಎದುರಾಗಬಹುದು.

ಕರ್ಕ ರಾಶಿ

ಈ ದಿನದಂದು ನಿಮ್ಮಲ್ಲಿ ಹೆಚ್ಚು ಗೊಂದಲಗಳು ಮೂಡಬಹುದು. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಇಂದ ನಿರ್ಧಾರ ತೆಗೆದುಕೊಳ್ಳಿ. ಮನೆಯ ಸಮಸ್ಯೆಯನ್ನು ಕುಳಿತು ಮಾತುಕತೆಯ ಮೂಲಕ ಬಗೆಹರಿಸಲು ಮುಂದಾಗಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರಲಿದೆ.

ಸಿಂಹ ರಾಶಿ

ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ನಿಮ್ಮ ಪಾಲುದಾರರೊಂದಿಗೆ ಲಾಭಗಳಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಗೆ ಇಂದು ಸುಧಾರಣೆಯ ಕಾಲ. ನಿಮ್ಮ ಸರಿಯಾದ ನಿರ್ಧಾರದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಕನ್ಯಾ ರಾಶಿ

ನೀವು ಬಹಳ ಕಾಲದಿಂದ ಬಯಸಿದ್ದ ಫಲಿತಾಂಶ ನಿಮ್ಮೆದುರು ಬರಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಇರುಸು ಮುರುಸು ಉಂಟಾಗಬಹುದು. ವಿಶ್ರಾಂತಿಯ ಅಗತ್ಯವಿದೆ. ಸಂಬಂಧಿಕರ ಭೇಟಿ ಮಾಡಬಹುದು.

ತುಲಾ ರಾಶಿ

ನಿಮ್ಮ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಸಹಾಯದಿಂದ ನಿಮ್ಮಲ್ಲಿ ಸಂತಸ ಮೂಡಲಿದೆ. ನಿಮ್ಮ ಆರ್ಥಿಕ ಪ್ರಗತಿಗೆ ಕಾರಣವಾಗುವ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಕೆಲವು ಸಮಯ ನೀವು ಮನೆಯಿಂದ ಹೊರ ಹೋಗಬೇಕಾಗಬಹುದು.

ವೃಶ್ಚಿಕ ರಾಶಿ

ಹಣದ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ನಿಮ್ಮ ಆದಾಯದಲ್ಲಿ ಒಂದಿಷ್ಟು ಭಾಗ ಉಳಿಸುವ ಯತ್ನ ಮಾಡಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ವಾಹನ ಮಾಲೀಕರು ಎಚ್ಚರಿಕೆ ವಹಿಸುವುದು ಒಳಿತು. ಸೋಮಾರಿತನವನ್ನು ದೂರ ಇಡುವುದು ಉತ್ತಮ.

ಧನು ರಾಶಿ

ಇಂದು ಹಲವು ರೀತಿಯಲ್ಲಿ ನೀವು ಹಣ ಗಳಿಸುವ ಅವಕಾಶಗಳಿವೆ. ನಿಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಅಮೂಲ್ಯ ವಸ್ತುಗಳ ಕಡೆಗೆ ಗಮನವಿಡಿ. ಮನೆಯ ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ. ವ್ಯಾಪಾರ ವ್ಯವಹಾರಗಳು, ಹಣಕಾಸು ವಿಚಾರದಲ್ಲಿ ಶುಭವಾಗಲಿದೆ.

ಮಕರ ರಾಶಿ

ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಬಹುದು. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮುನ್ನ ಆಲೋಚಿಸಿ. ಒಂದಿಷ್ಟು ಕೆಲಸಗಳು ಅಡೆತಡೆಯಿಲ್ಲದೆ ನಡೆಯಲಿದೆ.

ಕುಂಭ ರಾಶಿ

ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಋಣಬಾರದಂತಹ ಕೆಲಸಗಳಲ್ಲಿ ಇಂದು ತೊಡಗಬೇಡಿ. ಅನವಶ್ಯಕತ ಮಾತಿನ ಮೂಲಕ ನೀವು ಸಮಸ್ಯೆಗೆ ಒಳಗಾಬೇಕಾಗಬಹುದು. ಸಣ್ಣ ವ್ಯಾಪಾರಿಗಳಿಗೆ ಈ ದಿನ ಶುಭವಾಗಬಹುದು.

ಮೀನ ರಾಶಿ

ಉದ್ಯೋಗಿಗಳು ಕೆಲಸ ಬದಲಿಸುವ ಆಲೋಚನೆಯಲ್ಲಿದ್ದವರು ಸ್ವಲ್ಪ ದಿನಗಳ ಕಾಲ ಮುಂದೂಡಿ. ಇಂದು ಹಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ಹೆಚ್ಚು ಸಮಯ ಒತ್ತಡದಲ್ಲಿ ಕಳೆಯುತ್ತೀರಿ. ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು. ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

February 16 Daily Horoscope: Prediction For 12 Zodiac Signs In Kannada

February 16 Daily Horoscope: Here is prediction for 12 zodiac signs, read on..
X
Desktop Bottom Promotion