Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
February 16 Horoscope: ನಿಮ್ಮ ಆರ್ಥಿಕ ಸ್ಥಿತಿಯಲ್ಲಿದೆ ಸುಧಾರಣೆ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 16 (February 16 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನೀವು ಬಯಸಿದಂತೆ ಇಂದು ಕೆಲಸಗಳು ಬಹುಬೇಗ ಮುಗಿಸಲಿದ್ದೀರಿ. ಆಪ್ತರೊಬ್ಬರಿಗೆ ನೀವು ನೀಡಿದ್ದ ಹಣ ಮರಳಿ ಬರಲಿದೆ. ಬೇರೆಯವರ ವಸ್ತುವನ್ನು ಜೋಪಾನ ಮಾಡಿ ಮರಳಿಸುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಈ ದಿನ ಪ್ರಯಾಣಗಳಲ್ಲಿ ತೊಡಗಬಹುದು. ಯಾರಿಂದಾದರು ಸಾಲ ಪಡೆಯುವ ನಿಮ್ಮ ಬಯಕೆ ಕೊನೆಯ ಕ್ಷಣದಲ್ಲಿ ಮುರಿದು ಬೀಳಬಹುದು. ಸಂಬಂಧಿಕರಿಂದ ನಿಮಗೆ ಶುಭ ಸುದ್ದಿಯ ಸಂಭವವಿದೆ. ಅನೇಕರಲ್ಲಿ ನೋವಿನ ದಿನ ಎನ್ನಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗುವ ದಿನ. ಕೆಲಸದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಹಣಕಾಸಿನ ವಿಚಾರದಿಂದ ಚಿಂತೆಗಳು ಬರಲಿದೆ. ಮನೆಯ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಪ್ರವಾಸ ಮಾಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವವಿದೆ. ದೇವಾಲಯ ಭೇಟಿಯ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ನಷ್ಟ ಸಂಭವವಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುತ್ತದೆ. ನಿಮ್ಮ ಮನದಲ್ಲಿನ ನೋವನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ನಿರುದ್ಯೋಗಿಗಳಿಗೆ ಈ ದಿನ ಉತ್ತಮ ಅವಕಾಶ ಬರಲಿದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಮಾತುಕತೆ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಧಾರ್ಮಿಕ ಆಚರಣೆಯ ದಿನ. ನಿಮ್ಮಿಂದ ಯಾರಿಗಾದರು ಹಣಕಾಸಿನ ಸಹಾಯ ಆಗಬಹುದು. ಹಿರಿಯ ಸದಸ್ಯರೊಬ್ಬರಲ್ಲಿ ಅನಾರೋಗ್ಯ ಸಂಭವ. ನಿಮ್ಮ ಆರೋಗ್ಯದ ಕಡೆ ಗಮನವಿಡಿ. ಯಾರಿಂದಾದರು ನೋವಿನ ಮಾತುಗಳ ಕೇಳಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನ ಮಿಶ್ರಫಲ ತರಲಿದೆ. ಪೂರ್ವ ನಿರ್ಧರಿತ ಕೆಲಸಗಳನ್ನು ಎಚ್ಚರಿಕೆಯಿಂದ ಮುಗಿಸಿ. ಆಸ್ಪತ್ರೆ ಕುರಿತಾದ ವಿಚಾರವಾಗಿ ಓಡಾಟಗಳಿವೆ. ನಿಮ್ಮಿಂದ ಆಪ್ತರೊಬ್ಬರಿಗೆ ಹಣಕಾಸಿನ ಸಹಾಯ ಆಗಲಿದೆ. ಆರ್ಥಿಕ ಸವಾಲುಗಳನ್ನು ಲಾಭವಾಗಿ ಪರಿವರ್ತಿಸುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಇಂದು ಪ್ರಯಾಣಗಳಲ್ಲಿ ತೊಡಗುವ ದಿನ, ನಿಮ್ಮ ನ್ಯಾಯಾಲಯ ಸಂಬಂಧಿತ ವಿಚಾರವಾಗಿ ಕಷ್ಟದ ದಿನ. ವ್ಯಾಪಾರಿಗಳಿಗೆ ಈ ದಿನವು ಲಾಭದಾಯಕವಾಗಿರಲಿದೆ. ಮಕ್ಕಳ ಆರೋಗ್ಯದಲ್ಲಿನ ಏರುಪೇರು ನಿಮಗೆ ಚಿಂತೆ ತರಬಹುದು.
ಧನು ರಾಶಿ
ಧನು ರಾಶಿ ಜನರು ಈ ದಿನ ಮಿಶ್ರಫಲವಿದೆ. ನಿಮ್ಮ ಸಾಂಸಾರಿಕ ಜೀವನದಲ್ಲಿ ಇಂದು ದಿಢೀರ್ ಕಷ್ಟ ಬರಬಹುದು. ಅವಿವಾಹಿತರಿಗೆ ಖರ್ಚುಗಳು ಹೆಚ್ಚಾಗಲಿದೆ. ಗೃಹಿಣಿಯರ ಆರೋಗ್ಯದಲ್ಲಿನ ಏರುಪೇರು ಚಿಂತೆಗೆ ಕಾರಣವಾಗಲಿದೆ. ವಾಹನ ವಿಚಾರದಲಿ ಎಚ್ಚರಿಕೆಯಿಂದ ಇರಬೇಕಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದ ಲಾಭದ ದಿನ. ವ್ಯಾಪಾರಿಗಳು ಲಾಭ ನೋಡಡುತ್ತಾರೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಹೊಸ ಆದಾಯಗಳು ಬರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ವಿಶೇಷ ದಿನವಾಗಲಿದೆ. ಇಂದು ನಿಮ್ಮ ಹಣಕಾಸಿನ ವಿಚಾರದಲ್ಲಿ ನಿಮಗೆ ಶುಭ ಸುದ್ದಿಗಳಿವೆ. ಬ್ಯಾಂಕಿಂಗ್, ಫೈನಾನ್ಸ್ ಸೇರಿ ಹಣಕಾಸು ವ್ಯವಹಾರಗಳು ಶುಭ ತರಲಿದೆ. ದೂರ ಪ್ರಯಾಣಗಳಲ್ಲಿ ನೀವು ಭಾಗಿಯಾಗಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ಧನ ಒಲಿದು ಬರಬಹುದು. ನಿಮ್ ಹಣಕಾಸಿನ ವಿಚಾರವಾಗಿ ಬಾಹ್ಯ ಬೆಂಬಲ ಪಡೆಯುವ ದಿನವಾಗಲಿದೆ. ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು. ನಿಮಗಾಗಿ ದಿನದ ಅಂತ್ಯದಲ್ಲಿ ಹಣ ಖರ್ಚು ಮಾಡುವಿರಿ.



Click it and Unblock the Notifications










