Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
February 15 Horoscope: ಶಿವರಾತ್ರಿ ದಿನದಂದು ಶಿವನ ಕೃಪೆ ಯಾರ ಮೇಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 15 (February 15 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಶಿವರಾತ್ರಿಯ ದಿನದಂದು ಉತ್ತಮ ಸಮಯ ಇರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಮಾಡಿ ಮುಗಿಸಲು ಸೂಕ್ತ ದಿನವೂ ಇದಾಗುತ್ತಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಬಹಳ ಸಂತಸದಿಂದ ದಿನ ಕಳೆಯುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿಸುವುದು ಉತ್ತಮ. ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಖುಷಿಗೆ ಕಾರಣವಾಗದ್ದ ವಸ್ತು ನಿಮ್ಮ ಕೈ ಸೇರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಗೃಹಿಣಿಯರು ಇಂದು ಎಚ್ಚರಿಕೆಯಿಂದ ಕೆಲಸಗಳ ಪೂರ್ಣ ಮಾಡಿ. ಹಣಕಾಸು ವಿಚಾರದಲ್ಲಿ ಮಿಶ್ರಫಲವಿದೆ. ವ್ಯಾಪಾರಿಗಳು ಲಾಭ ನೋಡಬಹುದು. ವ್ಯವಹಾರಗಳನ್ನು ಅತ್ಯಂತ ಬುದ್ದಿವಂತಿಕೆಯಿಂದ ನಿರ್ವಹಿಸಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನವು ಮಿಶ್ರಫಲವಿದೆ. ಆದ್ರೆ ದಿನದ ಅಂತ್ಯದಲ್ಲಿ ನಿಮಗೆ ಶುಭವಾಗುತ್ತಿದೆ. ಆರ್ಥಿಕ ವಿಚಾರದಲ್ಲಿ ಶುಭವಾಗುತ್ತಿದೆ. ಗೃಹಿಣಿಯರಲ್ಲಿ ಶ್ರಮದಾಯಕ ಎನಿಸುವ ಕೆಲಸ ಮಾಡಬೇಕಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ ತರಲಿದೆ. ನೀವು ಬಹ ಸಮಯದಿಂದ ಪ್ರಯತ್ನಿಸುತ್ತಿದ್ದ ವಿಚಾರವೊಂದು ಸಂತಸದೊಂದಿಗೆ ಅಂತ್ಯವಾಗಲಿದೆ. ದಾಂಪತ್ಯದಲ್ಲಿ ಸಂತಸದ ದಿನ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉದ್ಯೋಗ ಸಂಬಂಧಿತ ವಿಚಾರದಲ್ಲಿದ್ದ ಸಮಸ್ಯೆಗಳು ಬಗೆಹರಿಯುವ ದಿನವಾಗುತ್ತಿದೆ. ನಿಮ್ಮ ದೊಡ್ಡ ಕೆಲಸವೊಂದನ್ನು ಇಂದು ಪೂರ್ಣ ಮಾಡುವಿರಿ. ಅನೇಕರಲ್ಲಿ ಇಂದು ದೇವಾಲಯ ಭೇಟಿಯ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನೀವು ಯಾರಿಂದಾದರು ಹಣ ಪಡೆಯುವ ಬಯಕೆ ಇಟ್ಟುಕೊಂಡಿದ್ದರೆ ಇಂದು ಈಡೇರಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಪ್ರೇಮಿಗಳಿಗೆ ಹಾಗೆ ದಂಪತಿಗೆ ಇಂದು ಉತ್ತಮ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದ ಶುಭವಿದೆ. ಚಿನ್ನ ಬೆಳ್ಳಿ ಅಥವಾ ಐಷಾರಾಮಿ ವಸ್ತು ಮನೆಗೆ ಬರಬಹುದು. ನಿಮ್ಮ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ. ಸ್ವಂತ ಉದ್ಯೋಗವು ಲಾಭ ತರಲಿದೆ. ಹೊಸ ಆರಂಭಕ್ಕೂ ಇಂದು ಉತ್ತಮ ಸಮಯ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ದೊಡ್ಡ ಕೆಲಸಗಳಲ್ಲಿ ಶುಭವಿದೆ. ವಾಹನ ಲಾಭವಿದೆ. ಹಣಕಾಸಿನ ಲಾಭವೂ ನಿಮಗಿದೆ. ಅನಗತ್ಯ ಖರ್ಚುಗಳಿಂದ ನೀವು ದೂರಗುತ್ತೀರಿ. ಮಕ್ಕಳ ಕುರಿತಾದ ಚಿಂತೆ ಉಳಿಯಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳು ಇಂದು ಅಂದುಕೊಂಡಂತೆ ನೆರವೇರಲಿದೆ. ನಿಮ್ಮ ದುಡ್ಡಿನ ವಿಚಾರದಲ್ಲಿ ಯಾರೊಂದಿಗಾದರು ಮನಸ್ತಾಪ ಮೂಡಿದ್ದರೆ ನಿವಾರಣೆಯಾಗಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸ ಇಂದು ಪೂರ್ಣ, ಶಿವನ ದೇವಾಲಯ ಭೇಟಿಯ ಅವಕಾಶದಿಂದ ಹಿಂದೆ ಸರಿಯಬೇಡಿ. ಮನೆಯ ಹಿರಿಯರ ಮಾತಿನಂತೆ ಅವರ ಸಲಹೆಯನ್ನು ಪಾಲಿಸುವುದು ಉತ್ತಮ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಈ ದಿನವು ಬಹಳ ಅನುಕೂಲ ತರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣಕಾಸಿನ ನೆರವು ಸೂಕ್ತ ಸಮಯಕ್ಕೆ ಬರಲಿದೆ. ಇಂದು ನಿಮ್ಮ ಪ್ರಯಾಣಗಳು ಶುಭಕರವಾಗಲಿದೆ. ದಿನದ ಅಂತ್ಯದಲ್ಲಿ ತೃಪ್ತಿಕರ ವಾತಾವರಣ ಇರಲಿದೆ.



Click it and Unblock the Notifications











