Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
February 14 Horoscope: ಪ್ರೇಮಿಗಳ ದಿನ ಯಾರಿಗೆಲ್ಲಾ ಹಿತಕರ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 14 (February 14 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಅನುಕೂಲಕರ ಸಮಯವನ್ನು ತರಲಿದೆ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಅಪಾಯಕಾರಿ ಕೆಲಸಗಳಿಂದ ದೂರ ಇರುವುದು ಉತ್ತಮ. ಆಪ್ತರ ಬಳಿ ನಿಮ್ಮ ಕಷ್ಟಗಳ ಹೇಳಿಕೊಳ್ಳುವುದು ಸಮಾಧಾನಕ್ಕೆ ಕಾರಣವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನವು ಅನುಕೂಲ ತರಲಿದೆ. ನಿಮ್ಮ ಕನಸೊಂದನ್ನು ಈಡೇರಿಸಿಕೊಳ್ಳುವ ಬಯಕೆಯನ್ನು ಈ ಸಮಯದಲ್ಲಿ ಪರಿಹರಿಸಿಕೊಳ್ಳಬಹುದು. ಪ್ರೇಮಿಗಳ ವಿಚಾರವಾಗಿ ಈ ಸಮಯವು ಅದೃಷ್ಟ ತರಲಿದೆ. ಮನೆಯ ಹಣಕಾಸು ವಿಚಾರವೊಂದು ಬಗೆಹರಿಸಲಿದ್ದೀರಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ಕೆಲಸದ ಅಡ್ಡಿಯು ಸವಾಲುಗಳಿಂದ ಕೂಡಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿನ ಗೊಂದಲವು ಮುಗಿಯಲಿದೆ. ಅನೇಕರಿಗೆ ಈ ದಿನ ಆತ್ಮತೃಪ್ತಿ ಕೆಲಸ ಮಾಡಿದ ನೆಮ್ಮದಿ ಇರಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಉತ್ತಮ ಸಮಯ. ನಿಮ್ಮ ಆಪ್ತರೊಬ್ಬರಿಗೆ ಹಣ ನೀಡಬೇಕಾಗುತ್ತದೆ. ಇದು ನಿಮಗೆ ಸವಾಲು ತರಬಹುದು. ಯಾರಿಗಾದರು ನಿಮ್ಮಿಂದ ನೋವಾಗಬಹುದು. ನಿಮ್ಮ ಸಮಸ್ಯೆಗಳನ್ನು ಆಪ್ತರ ಬಳಿ ಹಂಚಿಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿ ಜನಿಸಿದ ಮಂದಿಗೆ ಇಂದು ಉತ್ತಮ ಸಮಯ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಳ್ಳಬೇಡಿ. ದಾಂಪತ್ಯ ಸಂಬಂಧಿತ ವಿಚಾರವಾಗಿ ಮೂರನೆ ವ್ಯಕ್ತಿಯಿಂದ ಸಮಸ್ಯೆಗಳಿವೆ. ಪ್ರೇಮಿಗಳಿಗೆ ಈ ದಿನ ನೋವಿನ ದಿನವಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಆಪ್ತರೊಬ್ಬರಿಂದ ಸಮಸ್ಯೆಗಳಿವೆ. ಹಣಕಾಸು ವಿಚಾರವಾಗಿ ಯಾರಿಂದಾದರು ಸಹಾಯ ಪಡೆಯಬಹುದು. ನಿಮ್ಮ ದೂರ ಪ್ರಯಾಣಗಳ ಮಾಡುವ ಉದ್ದೇಶವು ಈಡೇರದೆ ಇರಬಹುದು. ಕೌಟುಂಬಿಕ ವಿಚಾರವು ಹಲವರಿಗೆ ಚಿಂತೆ ತರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಅಪಾಯಕಾರಿ ಕೆಲಸದಿಂದ ದೂರ ಇರಲು ಸಲಹೆ ನೀಡಲಾಗುತ್ತದೆ. ಅನೇಕರು ಇಂದು ಪ್ರಯಾಣ ಮಾಡಬೇಕಾಗುತ್ತದೆ. ವಾಹನ ವಿಚಾರವಾಗಿ ಆಪ್ತರಿಂದ ಬಿಕ್ಕಟ್ಟುಗಳು ಬರಬಹುದು. ಮಕ್ಕಳ ಅನಾರೋಗ್ಯ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಆಪ್ತರ ಸಲಹೆ ಪಡೆದು ವ್ಯವಹಾರ ನಡೆಸುವುದು ಉತ್ತಮ. ನಿಮ್ಮಿಂದ ವ್ಯಾಪಾರ ಸಂಬಂಧಿತ ವಿಚಾರವಾಗಿ ಶುಭವಿದೆ. ಹೊಸ ಕಾರ್ಯಗಳ ಮಾಡುವ ನಿಮ್ಮ ಬಯಕೆಯು ಈಡೇರಬಹುದು. ಯಾರಿಂದಾದರು ನಿಮಗೆ ಹಣ ಬರುವುದು ಬಾಕಿ ಉಳಿದಿದ್ದರೆ ಪ್ರಯತ್ನ ಬಿಡಬೇಡಿ.
ಧನು ರಾಶಿ
ಧನು ರಾಶಿ ಜನರಿಗೆ ಹೊಸ ವಿಚಾರಗಳು ಕೇಳಿಬರಲಿದೆ. ಕೆಲಸದ ಸ್ಥಳದಲ್ಲಿನ ಒತ್ತಡವು ನಿಮಗೆ ಸಮಸ್ಯೆಗಳ ಕಡೆಗೆ ಸೆಳೆಯಬಹುದು. ನಿಮ್ಮ ಅಮೂಲ್ಯ ವಸ್ತುಗಳು ಅಥವಾ ಹಣಕಾಸಿನ ಮೇಲೆ ಎಚ್ಚರಿಕೆ ಇಟ್ಟುಕೊಳ್ಳಿ.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಪ್ರಯಾಣಗಳಿಂದ ತುಂಬಿದ ದಿನವಾಗಲಿದೆ. ನಿಮ್ಮ ಪ್ರಯಾಣಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ. ದಾಂಪತ್ಯ ವಿಚಾರದಲ್ಲಿನ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ.
ಕುಂಭ ರಾಶಿ
ನಿಮ್ಮ ಹಲವು ಕೆಲಸಗಳನ್ನು ಇಂದು ಮುಂದೂಡಬಹುದು. ನಿಮ್ಮ ಬಹಳ ಹಿಂದಿನ ಆರ್ಥಿಕ ವಿಚಾರವೊಂದು ಮತ್ತೆ ಚಿಂತೆ ತರಬಹುದು. ಸ್ವಂತ ಉದ್ಯೋಗ ಮಾಡುವ ಮಂದಿಗೆ ಇಂದು ಪ್ರಯಾಣಗಳ ಮಾಡುವ ದಿನವಾಗುತ್ತದೆ.
ಮೀನ ರಾಶಿ
ಮೀನ ರಾಶಿಯವರು ಯಾರಿಂದಾದರು ಹಣ ಪಡೆಯುವ ಬಯಕೆ ಹೊಂದಿದ್ದರೆ ಇಂದು ಈಡೇರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರ ಇಡಿ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಕುಟುಂಬದಲ್ಲಿ ಇಂದು ಸಂತಸದ ದಿನವಾಗುತ್ತದೆ. ವಿದ್ಯಾಥಿಗಳು ಓದಿನತ್ತ ಗಮನ ಹರಿಸುವುದು ಉತ್ತಮ.



Click it and Unblock the Notifications