Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 13 Horoscope: ಈ ದಿನ ಕೆಲಸಗಳಲ್ಲಿ ಯಾರಿಗೆ ಶುಭಕರ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 13 (February 13 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಮಿಶ್ರಫಲಗಳ ತರುವ ಸಮಯ ಆಗಿರಲಿದೆ. ಹಣಕಾಸಿನ ವಿಚಾರಗಳು ನೀವು ಬಯಸಿದಂತೆ ನಡೆಯದೆ ಇರಬಹುದು. ಆದ್ರೆ ಕೆಲಸದ ಕಾರಣದಿಂದಾಗಿ ನಿಮಗೆ ನೆಮ್ಮದಿ ಇರಲಿದೆ. ವಸ್ತುಗಳ ಮೇಲಿನ ವ್ಯಾಮೋಹ ತ್ಯಜಿಸಬೇಕಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಈ ದಿನವು ಅದೃಷ್ಟಕರ ನಿಮ್ಮ ಹಲವು ವಿಚಾರಗಳಲ್ಲಿ ಲಾಭದಾಯಕ ವಾತಾವರಣ ನೋಡುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಬಹುದು. ಯಾರಿಗೂ ಸಾಲ ನೀಡಬೇಡಿ. ಅನಗತ್ಯ ಖರ್ಚುಗಳ ಮೇಲೆ ಹಿಡಿಯ ಇಟ್ಟುಕೊಳ್ಳಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಅನುಕೂಲವಿದೆ. ಗೃಹಿಣಿಯರಲ್ಲಿನ ಅನಾರೋಗ್ಯ ಸುಧಾರಿಸಲಿದೆ. ಮಕ್ಕಳ ಕುರಿತ ಚಿಂತೆಯೊಂದು ದೂರಾಗಲಿದೆ. ಯಾರಿಗಾದರು ಹಣ ನೀಡುವ ನಿಮ್ಮ ಆಲೋಚನೆ ಮುಂದೂಡುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಸಮಸ್ಯೆಗಳ ಪರಿಹಾರಕ್ಕೆ ಮುಕ್ತವಾಗಲಿದೆ. ದಾಂಪತ್ಯ ಸಂಬಂಧವಾಗಿ ಇದ್ದಂತಹ ಮನಸ್ತಾಪಗಳು ನಿವಾರಣೆಯಾಗಲಿದೆ. ನಿಮ್ಮ ದೂರ ಪ್ರಯಾಣಗಳಲ್ಲಿ ಸಂತಸವಿದೆ. ಅನೇಕರಿಗೆ ಈ ದಿನವು ಉತ್ತಮ ಸಂಬಂಧ ಬೆಳೆಸಲು ನೆರವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸಮಸ್ಯೆಗಳಿವೆ. ನಿಮ್ಮ ಹಣಕಾಸು ಕುರಿತಾದ ಒತ್ತಡವು ಚಿಂತೆಗೆ ತಳ್ಳಲಿದೆ. ನಿಮ್ಮಿಂದ ನಡೆಯಬೇಕಿದ್ದ ಕೆಲಸವೊಂದನ್ನು ಮುಂದೂಡುವಿರಿ. ಅನಗತ್ಯ ಖರ್ಚುಗಳು ನಿಮ್ಮ ಚಿಂತೆ ಹೆಚ್ಚಾಗುವಂತೆ ಮಾಡಲಿವೆ. ಮನೆಯಲ್ಲಿ ಸಹಾಯ ಪಡೆಯುವ ಅವಕಾಶ ಕಳೆದುಕೊಳ್ಳುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನೀವು ಮಾಡಬೇಕಿದ್ದ ಕೆಲಸದಲ್ಲಿ ಹಿನ್ನಡೆ ಅನುಭವಿಸಬಹುದು. ಅದ್ರಲ್ಲೂ ಉದ್ಯೋಗದ ಸ್ಥಳದಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ನಿಮಗೆ ಶಾಂತಿ ತರಲಿದೆ. ಹಣಕಾಸು ವಿಚಾರವಾಗಿ ಇದ್ದ ಚಿಂತೆ ದೂರ ಮಾಡಿಕೊಳ್ಳಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಪ್ರಮುಖ ಕೆಲಸಗಳಲ್ಲಿ ಭಾಗಿಯಾಗುವ ದಿನ. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಆಪ್ತರೊಬ್ಬರಿಗೆ ನಿಮ್ಮ ಸಹಕಾರ ಸಿಗಲಿದೆ. ಕೆಲಸದಲ್ಲಿನ ಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಪ್ರಯಾಣಗಳಿಂದ ತುಂಬಿದ ದಿನ. ದಿನದ ಆರಂಭದಿಂದ ಹಿಡಿದು ಅಂತ್ಯದವರೆಗೂ ನೀವು ಪ್ರಯಾಣಗಳಲ್ಲಿ ತೊಡಗಬಹುದು. ಮನೆಗಾಗಿ ನೀವು ಖರ್ಚುಗಳ ಮಾಡಬೇಕಾಗುತ್ತದೆ. ದಾಂಪತ್ಯ ವಿಚಾರವಾಗಿ ಶಾಂತಿಯ ವಾತಾವರಣ ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಉತ್ತಮ ಸಮಯ. ನೀವು ಬಹಳ ಸಮಯದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ಕಣ್ಣಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳಿಗೆ ನೀವು ಒಳಗಾಗಬಹುದು. ಮನೆಯಿಂದ ಹೊರಗೆ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಪೂರ್ಣ ಪ್ರಮಾಣದ ಶ್ರಮದಾಯಕ ದಿನ. ಯಾರಿಗಾದರು ನಿಮ್ಮ ಹಣಕಾಸಿನ ನೆರವಿನ ಅವಶ್ಯಕತೆ ಬರಬಹುದು. ದೇವಾಲಯ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣ ಮಾಡುವಿರಿ. ನಿಮ್ಮ ಹಳೆಯ ವಸ್ತುವೊಂದನ್ನು ಮರಳಿ ಪಡೆಯುವಿರಿ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಈ ದಿನವು ಹಲವು ರೀತಿಯ ಕೆಲಸಗಳ ನೋಡಬಹುದು. ಅವಿವಾಹಿತರಲ್ಲಿನ ಹಣಕಾಸಿನ ಸಮಸ್ಯೆ ದೊಡ್ಡದಾಗಬಹುದು. ನಿರುದ್ಯೋಗಿ ಯುವಕರಿಗೆ ಕೆಲಸ ಸಂಬಂಧಿ ವಿಚಾರವಾಗಿ ಧನಾತ್ಮಕ ಸ್ಥಿತಿ ಇರಲಿದೆ.
ಮೀನ ರಾಶಿ
ಮೀನ ರಾಶಿಯವರು ಇಂದು ಮಿಶ್ರಫಲ. ದಿನದ ಆರಂಭದಲ್ಲಿ ನಿಮ್ಮ ಹಣಕಾಸಿನ ವಿಚಾರವಾಗಿ ನಿಮ್ಮಲ್ಲಿ ಚಿಂತೆಗಳಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ನೆಮ್ಮದಿಗೆ ಕಾರಣವಾಗಲಿದೆ. ಸಂಬಂಧಿಕರೊಬ್ಬರ ಭೇಟಿಯು ಸಂತಸ ತರಲಿದೆ.



Click it and Unblock the Notifications











