Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 12 Horoscope: ಈ ದಿನ ಕೆಲಸಗಳಲ್ಲಿ ಅಡ್ಡಿ, ಅನಾರೋಗ್ಯದ ಸವಾಲು
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 12 (February 12 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಮಸ್ಯೆಗಳಿಂದ ತುಂಬಿದ ದಿನ. ನಿಮ್ಮ ಹಲವು ವಿಚಾರಗಳು ಇಂದು ಚಿಂತೆಗಳಿಂದ ತುಂಬಿರಬಹುದು. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ದೊಡ್ಡ ಒತ್ತಡ ಎದುರಿಸುವಿರಿ. ಆಪ್ತರಿಂದ ಸಹಾಯ ಪಡೆಯುತ್ತೀರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲ. ಯಾರಿಂದಾದರು ಲಾಭ ಬಯಸುವುದು ಫಲ ನೀಡದೆ ಇರಬಹುದು. ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಯಾರಿಗಾದರು ಹಣ ನೀಡುವ ಮುನ್ನ ಎಚ್ಚರ ವಹಿಸಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಈ ದಿನವು ಅಚ್ಚರಿಯ ಫಲಿತಾಂಶಗಳ ತರಬಹುದು. ಹಲವು ದಿನದಿಂದ ನೀವು ಮಾಡಬೇಕಿದ್ದ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು ಪೂರ್ಣಗೊಳಿಸಿ. ಉದರ ಸಂಬಂಧಿ ಸಮಸ್ಯೆಗಳು ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಲಾಭದಾಯಕ ದಿನ. ಬಹು ಸಮಯದ ಕೆಲಸದ ವಿಚಾರದಲ್ಲಿನ ಒತ್ತಡ ನಿವಾರಣೆಯಾಗಲಿದೆ. ವಾಹನ ಸಂಬಂಧಿತ ವಿಚಾರವು ಸುಖಾಂತ್ಯವಾಗಲಿದೆ. ದೂರ ಪ್ರಯಾಣಗಳ ಮಾಡಬೇಕಾಗುತ್ತದೆ. ನಿಮ್ಮ ಸ್ನೇಹಿತರ ಭೇಟಿಯು ಹಣಕಾಸಿನ ವಿಚಾರಕ್ಕೆ ತಿರುಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ಹೊಸ ಆದಾಯ ಮೂಲ ಹುಡುಕುವ ಪ್ರಯತ್ನ ಬಿಡಬೇಡಿ. ವ್ಯಾಪಾರಿಗಳಿಗೆ ಉತ್ತಮ ದಿನವಾಗುತ್ತಿದೆ. ಹೊಸ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮುಂದುವರೆಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನ ಮನೆಗಾಗಿ ಹೆಚ್ಚಿನ ಖರ್ಚು ಮಾಡಬಹುದು. ಪ್ರೇಮಿಗಳಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಬಹುದು. ದೇವಾಲಯ ಭೇಟಿಯ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಕೃಷಿ ಸಂಬಂಧಿತ ವಿಚಾರವಾಗಿ ಉತ್ತಮ ದಿನ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಚಿಂತೆಗಳಿಂದ ಕೂಡಿರಲಿದೆ. ಕೆಲಸದ ವಿಚಾರವಾಗಿ, ಮಕ್ಕಳ ವಿಚಾರವಾಗಿ ಹಲವು ರೀತಿಯ ಚಿಂತೆಗಳನ್ನು ನೋಡುವಿರಿ. ದಿನದ ಅಂತ್ಯದಲ್ಲಿ ಹಣಕಾಸು ಸಂಬಂಧಿತ ಬಿಕ್ಕಟ್ಟುಗಳನ್ನು ಎದುರಿಸುವಿರಿ. ವಿದ್ಯಾರ್ಥಗಳಿಗೆ ನೋವಿನ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನವು ಅನಾನುಕೂಲಗಳ ತರಬಹುದು. ಗೃಹಿಣಿಯರು ಈ ದಿನ ಅನಾರೋಗ್ಯಗಳ ಎದುರಿಸಬಹುದು, ಪಂಚೇಂದ್ರಿಯ ಸಂಬಂಧಿತ ವಿಚಾರದಲ್ಲಿ ನೋವು ಅನುಭವಿಸಬಹುದು. ದಾಂಪತ್ಯ ವಿಚಾರದಲ್ಲಿ ಮನಸ್ತಾಪಗಳು ಮೂಡಬಹುದು.
ಧನು ರಾಶಿ
ಧನು ರಾಶಿಯವರು ಕೆಲಸದ ವಿಚಾರವಾಗಿ ಪ್ರಯಾಣಗಳ ಮಾಡುವಿರಿ. ಆದ್ರೆ ದಿನದ ಅಂತ್ಯದಲ್ಲಿ ಈ ಸಂಬಂಧಿತ ವಿಚಾರವು ಅತೃಪ್ತಿ ತರಲಿದೆ. ಸಂಗಾತಿಯ ವಿಚಾರವಾಗಿ ಬೇಸರವಿದೆ. ಹಣಕಾಸು ವಿಚಾರವಾಗಿ ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಉತ್ತಮವಾಗಿರಲಿದೆ. ನೆರೆಹೊರೆಯವರ ಜೊತೆಗೆ ಕಲಹಗಳು ಮೂಡಬಹುದು. ಆಸ್ತಿ ವ್ಯವಹಾರದ ವಿಚಾರವಾಗಿ ನೀವು ಪ್ರಭಾವಿಯೊಬ್ಬರ ಭೇಟಿಯಾಗಬಹುದು, ಇದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ. ಮಕ್ಕಳ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಿಗಳು ದೊಡ್ಡ ಖರ್ಚುಗಳ ಮಾಡಬೇಕಾಗುತ್ತದೆ. ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ನೋಡಬಹುದು.
ಮೀನ ರಾಶಿ
ಮೀನ ರಾಶಿಯ ಗೃಹಿಣಿಯರಿಗೆ ಈ ದಿನವು ಲಾಭದಾಯಕ, ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಮನೆಗಾಗಿ ಮಾಡುವ ಖರ್ಚುಗಳು ನೆಮ್ಮದಿಗೆ ಕಾರಣವಾಗಲಿದೆ. ದಾಂಪ್ಯ ವಿಚಾರವಾಗಿ ಆಪ್ತರೊಬ್ಬರ ಸಲಹೆ ಪಾಲಿಸುವುದು ಉತ್ತಮ. ಕೆಲಸದ ವಿಚಾರವಾಗಿ ದುಡುಕಿನ ನಿರ್ಧಾರ ಮಾಡಬೇಡಿ.



Click it and Unblock the Notifications




