Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 10 Horoscope: ಮಂಗಳವಾರ ಯಾರಿಗೆ ಮಂಗಳಕರ ನೋಡಿ
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 10 (February 10 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಸಮಸ್ಯೆಗಳ ತರಬಹುದು. ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮ್ಮಲ್ಲಿ ಆಸಾಯ ಹೆಚ್ಚಾಗುವಂತೆ ಮಾಡಲಿದೆ ಇದು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ತರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಮಿಶ್ರಫಲ ತರಲಿದೆ. ಅದ್ರಲ್ಲೂ ಗ್ರಹಿಣಿಯರಿಗೆ ಈ ದಿನವು ಹೆಚ್ಚು ಸಮಸ್ಯೆಗಳು ಎದುರಾಗಬಹುದು. ಆಪ್ತರ ಅನಾರೋಗ್ಯದ ಕಾರಣಕ್ಕೆ ನಿಮ್ಮಲ್ಲಿ ಸಮಸ್ಯೆಗಳು ಕಾಡಬಹುದು. ಪ್ರಯಾಣ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲ ತರಲಿದೆ, ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ನೀವು ಮುಗಿಸುವಿರಿ. ಅನೇಕರಲ್ಲಿ ಪ್ರಯಾಣ ಮಾಡುವ ದಿನ. ಮಕ್ಕಳ ವಿಚಾರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ನಿಮ್ಮ ಆದಾಯ ಮೂಲದಿಂದ ಅಚ್ಚರಿ ಪ್ರಮಾಣದಲ್ಲಿ ಹಣ ಸಿಗಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ಅಗತ್ಯತೆಗಳು ನಿವಾರಣೆಯಾಗುವ ಸಮಯ ಇದು. ಯಾರಿಂದಾದರು ನೋವಿನ ಮಾತು ಕೇಳಬೇಕಾಗಬಹುದು. ಯಾರಿಗೂ ಸಾಲ ನೀಡಬೇಡಿ. ನಿಮ್ಮ ಕುಟುಂಬದಲ್ಲಿ ದೊಡ್ಡ ವಿಚಾರವೊಂದಕ್ಕೆ ನಿಮ್ಮ ಅಭಿಪ್ರಾಯ ಕೇಳಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಿಶ್ರಫಲ. ನಿಮ್ಮ ಬಹಳ ಸಮಯದ ಬಾಕಿ ಕೆಲಸವೊಂದನ್ನು ಮುಂದೂಡುವಿರಿ. ಹೊಸ ಕೆಲಸಗಳು, ಅಥವಾ ಆದಾಯ ಹುಡುಕುವ ಪ್ರಯತ್ನ ಕೈಗೂಡದೆ ಇರಬಹುದು. ಪ್ರಯಾಣ ಮಾಡುವಿರಿ. ವಾಹನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ದಿನ. ನೀವು ಹಣಕಾಸಿನ ವಿಚಾರವಾಗಿ ಬಯಸಿದ ಕೆಲಸ ಮಾಡಬಹುದು. ಸ್ವಂತ ಉದ್ಯೋಗ ಮಾಡುತ್ತಿದ್ದ ಮಂದಿಗೆ ಲಾಭದಾಯಕ ದಿನ. ಸರ್ಕಾರಿ ಕೆಲಸದಲ್ಲಿರುವವರು ಒತ್ತಡ ಎದುರಿಸಬಹುದು. ಬಾಡಿಗೆ ಮನೆ ಸಂಬಂಧವಾಗಿ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನವು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಸಂಬಂಧವಾಗಿ ಪ್ರಮುಖ ವ್ಯಕ್ತಿಯೊಬ್ಬರ ಭೇಟಿಯಾಗಬಹುದು. ಪ್ರೇಮಿಗಳಿಗೆ ಇಂದು ಮಧುರ ದಿನ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಹಲವು ಸಮಸ್ಯೆಗಳನ್ನು ಪರಿಹರಿಸುವ ದಾರಿಯಲ್ಲಿ ಮತ್ತಷ್ಟು ಬಿಕ್ಕಟ್ಟುಗಳು ಎದುರಾಗಬಹುದು. ಉದ್ಯೋಗದ ಸ್ಥಳದಲ್ಲಿ ಬಹಳಷ್ಟು ಒತ್ತಡ ಎದುರಿಸುವಿರಿ. ಉದ್ಯೋಗ ಬದಲಾಯಿಸುವ ಆಲೋಚನೆ ಮುಂದೂಡುವುದು ಉತ್ತಮ.
ಮಕರ ರಾಶಿ
ಮಕರ ರಾಶಿ ಜನರಿಗೆ ಮಿಶ್ರಫಲ. ದಿನದ ಆರಂಭದಲ್ಲಿ ನೀವು ಪ್ರಯಾಣ ಮಾಡುವಿರಿ. ನಿಮ್ಮ ಕೈ ಸೇರಬೇಕಿದ್ದ ವಸ್ತುವೊಂದನ್ನು ಪಡೆಯಬಹುದು. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಮರಳಿಸುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಜನಿಸಿದವರಿಗೆ ಅನಾನುಕೂಲ ತರುವ ದಿನ. ನಿಮ್ಮ ಕೆಲಸದಲ್ಲಿ ಅಡ್ಡಿಗಳಿವೆ. ಹಣಕಾಸು ವಿಚಾರವಾಗಿ ಚಿಂತೆ ಇದೆ. ವಾಹನ ಕುರಿತಾದ ವಿಚಾರವಾಗಿ ನಿಮಗೆ ಬಿಕ್ಕಟ್ಟುಗಳು ಎದುರಾಗಬಹುದು. ಆಪ್ತರೊಬ್ಬರ ಕೆಲಸ ಸಂಬಂಧವಾಗಿ ಪ್ರಯಾಣ ಮಾಡಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಬಹಳ ಉತ್ತಮ ಸಮಯ. ನೀವು ಬಹಳ ಸಮಯದಿಂದ ಪಡೆಯಬೇಕಿದ್ದ ವಸ್ತು ನಿಮ್ಮ ಕೈ ಸೇರಲಿದೆ. ಹಳೆಯ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲಿದ್ದೀರಿ. ಖರ್ಚುಗಳ ಕಡಿಮೆ ಮಾಡುವುದು ಉತ್ತಮ.



Click it and Unblock the Notifications