Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
February 09 Horoscope: ಈ ಸೋಮವಾರ ಯಾರಿಗೆಲ್ಲಾ ಕಾದಿದೆ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 09 (February 09 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಹೊಸ ಚೈತನ್ಯ ದೊರೆಯಲಿದೆ. ದೀರ್ಘಕಾಲದಿಂದ ಕಾಡುತ್ತಿದ್ದ ಕೆಲಸದ ಅಡಚಣೆಗಳು ನಿವಾರಣೆಯಾಗುವ ಸಾಧ್ಯತೆ ಇದೆ. ಇತರರ ಮಾತುಗಳಿಂದ ಸ್ವಲ್ಪ ಗೊಂದಲ ಉಂಟಾಗಬಹುದು, ಆದರೆ ಕುಟುಂಬದ ಬೆಂಬಲ ನಿಮ್ಮೊಂದಿಗೆ ಇರುತ್ತದೆ.
ವೃಷಭ ರಾಶಿ
ಇಂದು ಕಾರ್ಯಕ್ಷೇತ್ರದಲ್ಲಿ ಸುಲಭ ಯಶಸ್ಸು ಸಿಗಬಹುದು. ಬಹುಕಾಲದಿಂದ ಮುಂದೂಡುತ್ತಿದ್ದ ಕೆಲಸ ನೆನಪಿಗೆ ಬರಲಿದೆ. ವ್ಯಾಪಾರಿಗಳಿಗೆ ಲಾಭದ ದಿನ. ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ದಾಂಪತ್ಯದಲ್ಲಿ ಇದ್ದ ಅಸಮಾಧಾನ ಮಾತುಕತೆಯಿಂದ ಸರಿಯಾಗಬಹುದು.

ಮಿಥುನ ರಾಶಿ
ಧನಾತ್ಮಕ ಬದಲಾವಣೆಗಳ ದಿನ. ವ್ಯಾಪಾರಿಗಳಿಗೆ ವಿಶೇಷ ಲಾಭದ ಸಾಧ್ಯತೆ ಇದೆ. ವೈಯಕ್ತಿಕ ಜವಾಬ್ದಾರಿಗಳನ್ನು ಮರೆಯಬೇಡಿ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಒತ್ತಡ ಇದ್ದರೂ ನೀವು ಸಮರ್ಥವಾಗಿ ನಿಭಾಯಿಸುತ್ತೀರಿ.
ಕರ್ಕ ರಾಶಿ
ಮನೆಯಿಂದ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ಕೆಲಸದ ವೇಗ ಸ್ವಲ್ಪ ನಿಧಾನವಾಗಬಹುದು. ಕುಟುಂಬದವರನ್ನು ಸಂತೋಷಪಡಿಸಲು ಹೆಚ್ಚಿನ ಸಮಯ ಕಳೆಯುವಿರಿ. ಬಾಕಿ ಕೆಲಸಗಳನ್ನು ಸಮಯಕ್ಕೆ ಮುಗಿಸುವುದು ಉತ್ತಮ.
ಸಿಂಹ ರಾಶಿ
ಇಂದು ಕೆಲಸದ ಒತ್ತಡ ಹೆಚ್ಚಾಗಿದ್ದರೂ ದಿನದ ಅಂತ್ಯದಲ್ಲಿ ನೆಮ್ಮದಿ ಸಿಗಲಿದೆ. ಭವಿಷ್ಯದ ಬಗ್ಗೆ ಯೋಚನೆ ಹೆಚ್ಚು ಇರುತ್ತದೆ. ವ್ಯಾಪಾರಿಗಳಿಗೆ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಲಾಭವಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಹೆಚ್ಚಾಗುತ್ತದೆ.
ಕನ್ಯಾ ರಾಶಿ
ಹೂಡಿಕೆ ಮತ್ತು ಉಳಿತಾಯದಲ್ಲಿ ಹೆಚ್ಚಳ ಸಾಧ್ಯತೆ. ಅನಗತ್ಯ ಖರ್ಚುಗಳಿಂದ ದೂರವಿರಿ. ಉದರ ಸಂಬಂಧಿ ಸಣ್ಣ ಸಮಸ್ಯೆಗಳು ಕಾಡಬಹುದು, ಮನೆಯ ಊಟಕ್ಕೆ ಆದ್ಯತೆ ನೀಡಿ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿನ ಒತ್ತಡವನ್ನು ನಿಭಾಯಿಸಿ.
ತುಲಾ ರಾಶಿ
ಇಂದು ನಿಮಗೆ ಲಾಭದಾಯಕ ದಿನವಾಗಬಹುದು. ಬಾಕಿ ಹಣ ವಸೂಲಿಯಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೃಷಿ ಸಂಬಂಧಿತ ವಿಚಾರವಾಗಿ ನಿಮಗೆ ಶುಭವಿದೆ, ವಾಹನ ವಿಚಾರದಲ್ಲಿನ ಖರ್ಚುಗಳು ಕಡಿಮೆಯಾಗಲಿದೆ.
ವೃಶ್ಚಿಕ ರಾಶಿ
ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯಬಹುದು. ಸ್ನೇಹಿತರಿಂದ ಸಹಾಯ ಸಿಗಲಿದೆ. ಕೆಲಸಗಳನ್ನು ಅರ್ಧದಲ್ಲೇ ಬಿಟ್ಟುಬಿಡಬೇಡಿ. ಸ್ವಂತ ಉದ್ಯೋಗ ಮಾಡುವ ಮಂದಿ ಬುದ್ದಿವಂತಿಕೆಯಿಂದ ವ್ಯವಹಾರ ಮಾಡಬೇಕಿದೆ.
ಧನು ರಾಶಿ
ಧನು ರಾಶಿ ಜನರಿಗೆ ಸಂತೋಷ ಮತ್ತು ಶಾಂತಿಯ ದಿನ. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಸಮಾಜಮುಖಿ ಕಾರ್ಯಗಳಿಂದ ಉತ್ತಮ ಹೆಸರು ಸಿಗಲಿದೆ. ಬಹುಕಾಲದ ಕನಸು ನೆರವೇರಬಹುದು. ನಿಮ್ಮಿಂದ ಯಾರಾದರು ಹಣದ ಸಹಾಯ ಪಡೆಯಬಹುದು.
ಮಕರ ರಾಶಿ
ಯಾವ ಕ್ಷೇತ್ರದಲ್ಲಾದರೂ ಪರಿಶ್ರಮಕ್ಕೆ ಪ್ರಗತಿ ಸಿಗುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ಹೆಚ್ಚಾಗುತ್ತದೆ. ಉದ್ಯೋಗ ಸಂಬಂಧಿ ಸಮಸ್ಯೆಗಳು ದೂರಾಗಲಿದೆ. ಕೆಲಸದ ನಡುವೆ ಎದುರಾಗುತ್ತಿದ್ದ ತೊಡಕುಗಳು ದೂರಾಗಬಹುದು. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು.
ಕುಂಭ ರಾಶಿ
ಆತ್ಮೀಯರಿಂದ ಕಠಿಣ ಮಾತು ಕೇಳಬೇಕಾಗಬಹುದು. ಸಹೋದರರೊಂದಿಗಿನ ವ್ಯವಹಾರ ವಿಚಾರದಲ್ಲಿ ಮನಸ್ತಾಪ ಇರಬಹುದು. ಹೊಸ ಖರ್ಚುಗಳು ನಿಮಗೆ ವಾಹನ ಚಾಲನೆ ಮಾಡುವವರು ಜಾಗರೂಕರಾಗಿರಿ. ದೇವಾಲಯ ಭೇಟಿ ಸಾಧ್ಯ. ವ್ಯಾಪಾರಿಗಳಿಗೆ ದೊಡ್ಡ ಗ್ರಾಹಕರೊಂದಿಗೆ ವ್ಯವಹಾರ ಮಾಡುವ ಅವಕಾಶ.
ಮೀನ ರಾಶಿ
ನಿಮಗಿಂದು ಸಾಮಾನ್ಯ ದಿನ. ಕೆಲಸವನ್ನು ಪ್ರಾಮಾಣಿಕವಾಗಿ ಮುಗಿಸಿದರೆ ಉತ್ತಮ ಫಲ ದೊರೆಯುತ್ತದೆ. ಆರೋಗ್ಯದ ಕಡೆ ಗಮನವಿರಲಿ. ವೈಯಕ್ತಿಕ ಕಾರಣಗಳಿಂದ ದೂರ ಪ್ರಯಾಣ ಸಾಧ್ಯತೆ ಇದೆ.



Click it and Unblock the Notifications