Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 08 Horoscope: ಈ ಭಾನುವಾರ ಯಾರಿಗೆಲ್ಲಾ ಕಾದಿದೆ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 08 (February 08 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಆತುರದಲ್ಲಿ ಯಾವುದೇ ಕೆಲಸ ಮಾಡಬೇಡಿ. ಕೆಲಸಗಳು ಅರ್ಧದಲ್ಲೇ ನಿಲ್ಲುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ದಿನ ಸಾಧಾರಣವಾಗಿರಲಿದೆ. ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಗಮನ ಹರಿಸಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಒತ್ತಡ ಮತ್ತು ಮನಸ್ಸಿನ ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಉಂಟಾಗಬಹುದು. ಮಕ್ಕಳ ವಿಚಾರದಲ್ಲೂ ಕಾಳಜಿ ಅಗತ್ಯ. ವಾಹನ ಚಾಲನೆ ಹಾಗೂ ವ್ಯವಹಾರದಲ್ಲಿ ಎಚ್ಚರಿಕೆ ಅವಶ್ಯ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ಸಮಯ ಆಗಿರಲಿದೆ. ವ್ಯಾಪಾರಿಗಳಿಗೆ ವಿಶೇಷವಾಗಿ ಉತ್ತಮ ದಿನ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಶುಭ ಫಲ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಮೂಡಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ಆದ್ರೆ ರಾತ್ರಿ ಪ್ರಯಾಣಗಳನ್ನು ತಪ್ಪಿಸುವುದು ಉತ್ತಮ. ಮನೆಗೆ ಅಗತ್ಯ ವಸ್ತುಗಳನ್ನು ಖರೀದಿಸುವ ಯೋಗ ಇದೆ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಆದಾಯ ಹೆಚ್ಚಿಸುವ ಅವಕಾಶಗಳು ಸಿಗುತ್ತವೆ. ವ್ಯಾಪಾರಸ್ಥರು ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಡಬಹುದು. ಆಧ್ಯಾತ್ಮಿಕವಾಗಿ ನೀವು ಮತ್ತಷ್ಟು ಬಲರಾಗುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ಸಮಯ. ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಧನಾತ್ಮಕ ಬದಲಾವಣೆಗಳ ಸಾಧ್ಯತೆ ಇದೆ. ಹೂಡಿಕೆ ಮತ್ತು ಉಳಿತಾಯ ಹೆಚ್ಚಿಸಲು ಅವಕಾಶ ಸಿಗುತ್ತದೆ. ಪ್ರಯಾಣಗಳಿಂದ ಸಂತಸವಿದೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ಅತಿಯಾದ ಖರ್ಚು ತಪ್ಪಿಸಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳ ಸಾಧ್ಯತೆ ಇದೆ. ಹಳೆಯ ಸಮಸ್ಯೆಗಳು ಮತ್ತೆ ಎದುರಾಗಲಿದೆ. ದೇವಾಲಯ ಭೇಟಿ ಅಥವಾ ಧಾರ್ಮಿಕ ಚಿಂತನೆ ಮನಸ್ಸಿಗೆ ನೆಮ್ಮದಿ ತರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ದಾಂಪತ್ಯ ಮತ್ತು ಪ್ರೀತಿಯ ಜೀವನ ಸುಖಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಸಾಧನೆ ಸಾಧ್ಯ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಸಾಲದ ವಿಚಾರದಲ್ಲಿ ಒತ್ತಡಗಳಿವೆ. ನಿಮ್ಮ ಕೆಲಸದ ವಿಚಾರವಾಗಿ ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ವ್ಯಾಪಾರ ಕ್ಷೇತ್ರದಲ್ಲಿ ಲಾಭದ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ದಿನದ ಕೊನೆಯಲ್ಲಿ ಉತ್ತಮ ಆದಾಯ ಸಾಧ್ಯ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಬಾಕಿ ಸಾಲಗಳನ್ನು ತೀರಿಸಲು ಪ್ರಯತ್ನಿಸಿ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ನೀವು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಆಪ್ತರೊಬ್ಬರ ಜೊತೆ ನೀವು ಪ್ರಯಾಣ ಮಾಡುತ್ತೀರಿ. ಮನೆಯ ವಿಚಾರವಾಗಿ ನೀವು ಚಿಂತೆಯಲ್ಲಿ ತೊಡಗಬಹುದು.
ಕುಂಭ ರಾಶಿ
ಆರ್ಥಿಕ ಸ್ಥಿತಿ ನಿಧಾನವಾಗಿ ಸುಧಾರಣೆಯಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮಾಧಾನ ಇರುತ್ತದೆ. ಅತಿಯಾದ ಖರ್ಚು ತಪ್ಪಿಸಿ. ನಿಮ್ಮ ಹಲವು ಕೆಲಸಗಳನ್ನು ಮುಂದಕ್ಕೆ ಹಾಕಬಹುದು. ಯಾರಿಗೂ ಸಾಲ ನೀಡುವ ಕಾರ್ಯ ಮಾಡಬೇಡಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗಲಿದೆ. ಕುಟುಂಬದಲ್ಲಿ ಸಂತೋಷ ಹಾಗೂ ಶಾಂತಿ ನೆಲೆಸಿರುತ್ತದೆ. ಮಕ್ಕಳ ಅಥವಾ ಆತ್ಮೀಯರ ವಿಚಾರದಲ್ಲಿ ಕಹಿ ಸುದ್ದಿಯನ್ನು ಕೇಳುವ ಸಾಧ್ಯತೆಯೂ ಇದೆ.



Click it and Unblock the Notifications