Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
February 07 Horoscope: ಈ ಶನಿವಾರ ಯಾರಿಗೆ ಅನುಕೂಲಕರ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 07 (February 07 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ದಿನದ ಕೆಲಸಗಳಲ್ಲಿನ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣ ಸಿಗಬಹುದು, ಗೃಹಿಣಿಯರಿಗೆ ಇಂದು ಪ್ರಯಾಣದಿಂದ ತುಂಬಿರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ದೊಡ್ಡ ಕೆಲಸಗಳ ಮಾಡುವ ದಿನವಾಗುತ್ತಿದೆ. ನಿಮ್ಮ ವಸ್ತುಗಳ ಮೇಲೆ ಗಮನವಿಡಿ. ಯಾರಿಂದಾದರು ಹಣ ಪಡೆಯುವುದು ನಿಮಗೆ ಕಷ್ಟವಾಗಬಹುದು. ಪ್ರೇಮಿಗಳು ಇಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ದೊಡ್ಡ ಸಮಸ್ಯೆಗಳಿಂದ ತುಂಬಿರಬಹುದು. ಯಾವುದಾದರು ಹಣಕಾಸಿನ ವಿಚಾರವಾಗಿ ಮನಸ್ತಾಪಗಳು ಮೂಡಬಹುದು. ದಾಂಪತ್ಯ ವಿಚಾರವಾಗಿ ನಿಮ್ಮ ಮನೆಯಲ್ಲಿ ಚರ್ಚೆಗಳು ನಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನವಾಗುತ್ತದೆ. ಯಾರಿಗೂ ಹಣಕಾಸಿನ ವಿಚಾರವಾಗಿ ಸಹಾಯಕ್ಕೆ ಮುಂದಾಗಬೇಡಿ. ಆಪ್ತರೊಬ್ಬರ ಆಹ್ವಾನದ ಮೇರೆಗೆ ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಪ್ರಯಾಣಗಳು ನೆನಪಿನಲ್ಲಿ ಉಳಿಯಲಿವೆ. ಮಕ್ಕಳ ವಿಚಾರವಾಗಿ ನಿಮಗಿಂದು ಶುಭ ಸುದ್ದಿ ಇರಲಿದೆ. ವಾಹನ ಕುರಿತಾದ ವಿಚಾರದಲ್ಲಿ ಶುಭವಿದೆ. ಪ್ರೇಮಿಗಳಿಗೆ ಉತ್ತಮ ದಿನ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬರುವಿರಿ. ಆಪ್ತರೊಬ್ಬರ ಸಲಹೆಯನ್ನು ಪಾಲಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಸಂಕಷ್ಟದ ದಿನ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಉತ್ತಮ ಕೆಲಸದ ದಿನ. ನೀವು ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಬೇಡಿಕೆ ಹೆಚ್ಚಾಗಬಹುದು. ಮನೆಯ ಹಿರಿಯರ ಮಾತುಗಳನ್ನು ಕೇಳುವುದು ಉತ್ತಮ. ವಾಹನ ಚಲಾವಣೆಯ ವೇಳೆ ಎಚ್ಚರ ವಹಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ದೊಡ್ಡ ಕೆಲಸಗಳ ಮಾಡಬೇಕಿದೆ. ಇದು ಶ್ರಮದಾಯಕ ಆಗುವುದು ನಿಮ್ಮಲ್ಲಿ ಆಯಾಸ ತರಲಿದೆ. ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಲಿದೆ. ಯಾರಿಗಾದರು ಸಹಾಯ ಮಾಡುವ ಅವಕಾಶ ಪಡೆಯಲಿದ್ದೀರಿ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮಿಂದ ಇಂದು ನೋವಾಗುವ ಸಾಧ್ಯತೆ ಇದೆ, ಹೀಗಾಗಿ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸಮಯದೊಳಗೆ ನಿಮ್ಮ ಕೆಲಸಗಳ ಮುಗಿಸಿ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ನಿಮ್ಮ ನಿತ್ಯದ ಕೆಲಸದಿಂದ ವಿಶ್ರಾಂತಿ ಪಡೆದಿದ್ದರೂ ಪ್ರಯಾಣದಲ್ಲಿ ಭಾಗಿಯಾಗುತ್ತೀರಿ. ಕುಟುಂಬದಲ್ಲಿ ಹಣಕಾಸು ಕುರಿತಾದ ಚಿಂತೆಗಳಿರಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಸವಾಲುಗಳಿವೆ. ನೀವು ಮಾಡಬೇಕಿದ್ದ ಕೆಲಸಗಳಲ್ಲಿ ಅಡ್ಡಿಗಳಿವೆ. ನಿತ್ಯದ ಕೆಲಸವೊಂದಕ್ಕೆ ಶ್ರಮ ಹಾಕುವಿರಿ. ದಾಂಪತ್ಯ ವಿಚಾರದಲ್ಲಿ ನಿಮಗೆ ಮನಸ್ತಾಪಗಳು ಎದುರಾಗುವ ದಿನ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಪ್ರಯಾಣಗಳಿಂದ ತುಂಬಿರಲಿದೆ. ಶುಭ ಕಾರ್ಯ ಸಂಬಂಧ ಖರ್ಚುಗಳಿವೆ. ದೇವಾಲಯ ಭೇಟಿಯ ಅವಕಾಶದಿಂದ ದೂರಾಗಬೇಡಿ. ಆಪ್ತರಿಗೆ ನಿಮ್ಮಿಂದ ಹಣ ನೀಡುವ ಸಾಧ್ಯತೆ ಇದೆ.



Click it and Unblock the Notifications