Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 06 Horoscope: ಈ ಶುಕ್ರವಾರವು ಯಾರಿಗೆ ಅನುಕೂಲಕರ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 06 (February 06 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಸಮಸ್ಯೆಗಳಿವೆ. ನಿಮ್ಮ ಹಲವು ಕೆಲಸಗಳನ್ನು ಈ ಸಮಯದಲ್ಲಿ ಮುಗಿಸಲು ಅಡ್ಡಿಯುಂಟಾಗಬಹುದು. ಆಪ್ತರೊಬ್ಬರ ಕೆಲಸಕ್ಕೆ ನೀವು ಸಹಾಯ ಮಾಡಬೇಕಾಗಬಹುದು. ನಿಮ್ಮಿಂದಾಗಿ ಮನೆಯಲ್ಲಿ ಕಲಹಗಳು ಸಹ ಉಂಟಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ದೂರ ಪ್ರಯಾಣಗಳು ನಿಮ್ಮಲ್ಲಿ ನಿರೀಕ್ಷಿತ ಫಲಿತಾಂಶ ತರದೆ ಇರಬಹುದು. ನಿಮ್ಮ ಕೆಲಸಗಳಲ್ಲಿ ಅಡ್ಡಿಗನ್ನು ನೋಡಬಹುದು. ಅದ್ರಲ್ಲೂ ವ್ಯಾಪಾರದಲ್ಲಿ ಮಿಶ್ರ ಫಲವಿದೆ.

ಮಿಥುನ ರಾಶಿ:
ಇಂದು ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳನ್ನು ಸ್ವೀಕರಿಸಲು ಸಿದ್ಧರಿರಿ. ವ್ಯವಹಾರದಲ್ಲಿರುವವರಿಗೆ ಪಾಲುದಾರಿಕೆ ಮೂಲಕ ಲಾಭ ದೊರಕುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೃತ್ತಿಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಿ.
ಕರ್ಕಾಟಕ ರಾಶಿ
ಇಂದು ಅದೃಷ್ಟ ನಿಮ್ಮ ಬೆಂಬಲಕ್ಕೆ ಬರಲಿದೆ. ಕೈಗೊಂಡ ಕೆಲಸಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆದಾಯಕ್ಕೆ ಹೊಸ ಮಾರ್ಗಗಳು ದೊರಕುತ್ತವೆ. ಸಂಬಂಧಗಳಲ್ಲಿ ಪ್ರೀತಿ ಹಾಗೂ ನಂಬಿಕೆ ಹೆಚ್ಚಾಗುತ್ತದೆ.
ಸಿಂಹ ರಾಶಿ
ಅತಿಯಾದ ಖರ್ಚುಗಳು ಮನಸ್ಸಿಗೆ ಒತ್ತಡ ಉಂಟುಮಾಡಬಹುದು. ಹೊಸ ಬಜೆಟ್ ರೂಪಿಸಿ ಮುಖ್ಯ ಅಗತ್ಯಗಳಿಗೆ ಆದ್ಯತೆ ನೀಡಿ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಣ್ಣ ಪ್ರವಾಸವನ್ನು ಯೋಜಿಸುವ ಸಾಧ್ಯತೆ ಇದೆ. ವಾಹನ ವಿಚಾರವಾಗಿ ಎಚ್ಚರಿಕೆಯಿಂದಿರಿ.
ಕನ್ಯಾ ರಾಶಿ
ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಿ, ಹೊಸ ರೀತಿಯ ಕೆಲಸಗಳನ್ನು ಮಾಡುವಿರಿ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ ಕಾಣಬಹುದು. ದೇವಾಲಯ ಭೇಟಿಯ ಅವಕಾಶಗಳ ಪಡೆಯುವಿರಿ.
ತುಲಾ ರಾಶಿ
ಹಣಕಾಸಿನ ವಿಷಯಗಳಲ್ಲಿ ಶುಭಫಲ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳು ಕಾಣಿಸಬಹುದು. ಕೆಲಸದ ಒತ್ತಡ ಹೆಚ್ಚಾದರೂ ಹಿರಿಯರ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸಬಹುದು. ಪ್ರಯಾಣದ ವಿಚಾರದಲ್ಲಿ ಎಚ್ಚರಿಕೆ ಇಡುವುದು ಉತ್ತಮ.
ವೃಶ್ಚಿಕ ರಾಶಿ
ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ. ಹಣಕಾಸು ವಿಷಯಗಳಲ್ಲಿ ಲಾಭದಾಯಕ ದಿನ. ಹಣದ ಅಗತ್ಯ ಹೆಚ್ಚಾದರೂ ಉದ್ಯಮಿಗಳಿಗೆ ಹಲವು ಮೂಲಗಳಿಂದ ನೆರವು ಸಿಗುತ್ತದೆ. ಬಹುದಿನದ ಕೆಲಸವನ್ನು ಪೂರ್ಣ ಮಾಡುವಿರಿ.
ಧನು ರಾಶಿ
ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ. ಹಳೆಯ ಅನಾರೋಗ್ಯವು ಮತ್ತೆ ಖರ್ಚುಗಳಿಗೆ. ಕುಟುಂಬದವರ ಮಾರ್ಗದರ್ಶನದಿಂದ ಮುನ್ನಡೆ ಸಾಧ್ಯ. ವ್ಯಾಪಾರಿಗಳು ಹೊಸ ಯೋಜನೆಗಳನ್ನು ಆರಂಭಿಸಬಹುದು. ನಿಮ್ಮ ದಾಂಪತ್ಯ ವಿಚಾದಲ್ಲಿ ಶುಭ ಸಮಾಚಾರಗಳಿವೆ.
ಮಕರ ರಾಶಿ
ಆರ್ಥಿಕವಾಗಿ ಶುಭ ದಿನ. ವ್ಯವಹಾರದಲ್ಲಿ ಲಾಭ ಕಾಣಬಹುದು. ಕುಟುಂಬದೊಂದಿಗೆ ಪ್ರವಾಸದ ಅವಕಾಶ ಇದೆ. ಮನೆಮಂದಿಯೊಂದಿಗೆ ಸಂತೋಷದ ವಾತಾವರಣ ಇರುತ್ತದೆ. ಆಸ್ತಿ ಮತ್ತು ಸಂಪತ್ತಿನಲ್ಲಿ ವೃದ್ಧಿಯ ಸಾಧ್ಯತೆಗಳಿವೆ. ಆಪ್ತರೊಬ್ಬರ ಆಹ್ವಾನದ ಮೇರೆಗೆ ಪ್ರಯಾಣ ಮಾಡುವಿರಿ.
ಕುಂಭ ರಾಶಿ
ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇದೆ. ಆದರೂ ನಿಮ್ಮ ವೃತ್ತಿ ಗುರಿಗಳತ್ತ ಗಮನ ಹರಿಸಿ. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗಲಿದೆ. ಹಾಗೆ ನಿಮ್ಮಿಂದಾಗಿ ದೂರ ಪ್ರಯಾಣಗಳು ಮುಂದೂಡುವ ಸಾಧ್ಯತೆ ಇದೆ.
ಮೀನ ರಾಶಿ
ಹಳೆಯ ಬಾಕಿ ಹಣ ಮರಳಿ ಸಿಗುವ ಸಾಧ್ಯತೆ ಇದೆ. ಕುಟುಂಬದ ಬೆಂಬಲದಿಂದ ಕೆಲಸದ ಅಡೆತಡೆಗಳು ನಿವಾರಣೆಯಾಗುತ್ತವೆ. ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ಯಾರಿಗೂ ಸಾಲ ನೀಡುವ ಪ್ರಕ್ರಿಯೆಗೆ ಮುಂದಾಗೇಡಿ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.



Click it and Unblock the Notifications