Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 05 Horoscope: ರಾಯರ ವಾರದಂದು ಯಾರಿಗೆಲ್ಲಾ ಶುಭದಿನ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 05 (February 05 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ನೀವು ಯಾವುದಾದರು ಕೆಲಸದ ನಿಮಿತ್ತ ಪ್ರಯಾಣ ಮಾಡುವ ಸಂದರ್ಭ ಬಂದರೆ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಮನಸ್ಸಿನಲ್ಲಿ ಹಣಕಾಸು ವಿಚಾರವಾಗಿ ತಳಮಳಗಳು ಹುಟ್ಟಿಕೊಳ್ಳಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನವು ಅನುಕೂಲಕರ. ಆಪ್ತರೊಬ್ಬರ ಭೇಟಿಯಿಂದ ಸಂತಸವಾಗಿರುವಿರಿ. ಮಕ್ಕಳ ವಿಚಾರವಾಗಿ ಖರ್ಚುಗಳ ಮಾಡುವಿರಿ. ಅಂದುಕೊಂಡಿರುವ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ. ಧನಾಗಮನ ಉತ್ತಮವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮುಗಿಸಿ. ಯಾವುದಾದರೂ ಆಸ್ತಿ ಜಮೀನು ಕೊಳ್ಳಲು ಕಾಲ ಪ್ರಶಸ್ತವಾಗಿದೆ. ತಂದೆಯಿಂದ ಲಾಭ ಅಥವಾ ಉಪಕಾರ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಸಾಮಾನ್ಯ ಲಾಭದಾಯಕ ದಿನ. ಈ ದಿನ ನೀವು ಪ್ರಯಾಣಗಳ ಮಾಡುವಿರಿ. ಕೆಲಸದ ಒತ್ತಡ ಇರುತ್ತದೆ. ಕೆಲಸಗಳು ಮುಂದುವರೆಯುವುದು ಕೊಂಚ ನಿಧಾನ. ಕೌಟುಂಬಿಕ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮಿಶ್ರಫಲದ ದಿನ. ನಿಮ್ಮ ಕಳೆದ ಕೆಲ ದಿನಗಳ ಆತಂಕವೊಂದು ದೂರಾಗಲಿದೆ. ಯಾವ ಕೆಲಸವೇ ಆಗಲಿ ನಿರಾತಂಕವಾಗಿ ನಡೆಯುತ್ತದೆ. ದೂರ ಪ್ರಯಾಣ ಯೋಗ ಇದೆ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಬರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಅಂದುಕೊಂಡ ಕೆಲಸ ಮಾಡಲು ಇಂದು ಶ್ರಮ ಹಾಕಬೇಕಿದೆ. ಅನಾವಶ್ಯಕ ತೊಂದರೆಗಳು ಎದುರಾಗುತ್ತದೆ. ಖರ್ಚುಗಳೂ ಬಹಳವಾಗಿ ಇರುತ್ತದೆ.
ಮನೆಯ ವಿಚಾರವಾಗಿ ನೀವು ಖರ್ಚುಗಳ ಮಾಡಬೇಕಾಗುತ್ತದೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಉತ್ತಮ ದಿನ. ಹಣದ ಹರಿವೂ ಕೂಡ ಉತ್ತಮವಾಗಿಯೇ ಇದೆ. ಹೀಗಾಗಿ ಖರ್ಚು ವೆಚ್ಚಗಳನ್ನು ನಿರ್ವಹಣೆ ಮಾಡುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಲಾಭ ನೋಡಬಹುದು. ಪ್ರಗತಿಯ ಮುನ್ಸೂಚನೆ ಸಿಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗುತ್ತಿದೆ. ಹಾಗೆ ಉದರ ಸಂಬಂಧಿ ತೊಂದರೆಗಳು ಎದುರಾಗುತ್ತದೆ. ಯಾವುದೇ ತೀರ್ಮಾನ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವಾಹನ ಚಲಾವಣೆಯ ಸಮಯದಲ್ಲಿ ಎಚ್ಚರವಹಿಸಿ.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಿಶ್ರಫಲ ನೋಡುವ ದಿನ. ಆರೋಗ್ಯಕ್ಕೆ ಕೊಂಚ ತೊಂದರೆ ಎದುರಾಗುತ್ತದೆ. ತಲೆನೋವು, ಜ್ವರದಂತಹ ಸಮಸ್ಯೆ ಎದುರಿಸಬಹುದು. ಗೃಹಿಣಿಯರಲ್ಲಿ ಆಯಾಸ. ಮಕ್ಕಳ ವಿಚಾರವಾಗಿ ನೀವು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ.
ಮಕರ ರಾಶಿ
ಮನೆಯವರ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಣಕಾಸಿನ ವಿಷಯದಲ್ಲಿ ಸಣ್ಣ ಲೆಕ್ಕಾಚಾರ ತಪ್ಪಾದರೂ ದೊಡ್ಡ ಪರಿಣಾಮ ಬೀರಬಹುದು. ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಗೃಹಿಣಿಯರಿಗೆ ಈ ದಿನ ಸವಾಲುಗಳಿವೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಅನುಕೂಲಕರ ವಾತಾವರಣ ಇರಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಹೊಸ ಯೋಜನೆ ಬಗ್ಗೆ ಯೋಚನೆ ಶುರುವಾಗಬಹುದು. ಕುಟುಂಬದ ಸದಸ್ಯರ ಆರೋಗ್ಯದ ವಿಚಾರ ಸ್ವಲ್ಪ ಚಿಂತೆ ತರಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಮಿಶ್ರಫಲದ ದಿನವಾಗುತ್ತಿದೆ. ಹಣಕಾಸಿನ ವಿಷಯದಲ್ಲಿ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಮನೆಯೊಳಗಿನ ಚರ್ಚೆಗಳಲ್ಲಿ ನಿಮ್ಮ ಮಾತಿಗೆ ಮೌಲ್ಯ ಸಿಗುತ್ತದೆ. ಅತಿಯಾಗಿ ಯೋಚಿಸುವ ಸ್ವಭಾವದಿಂದ ಮನಸ್ಸು ದಣಿಯಬಹುದು.



Click it and Unblock the Notifications










