Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 04 Horoscope: ಬುಧವಾರದ ಈ ದಿನವು ಹಣಕಾಸು ವಿಚಾರದಲ್ಲಿ ಶುಭದಿನ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 04 (February 04 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ಆದ್ರೆ ಆರ್ಥಿಕ ವಿಚಾರದಲ್ಲಿ ತಾತ್ಕಾಲಿಕ ಪರಿಹಾರಗಳ ಪಡೆಯುವಿರಿ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ವಿಚಾರಗಳಿದ್ದರೂ ನಿಮ್ಮಿಂದ ದೊಡ್ಡ ಲಾಭದ ಕೆಲಸಗಳು ನಡೆಯುವುದಿಲ್ಲ. ಮನೆ ವಿಚಾರದಲ್ಲಿ ತಾಳ್ಮೆಯಿಂದಿರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಪ್ರಯಾಣಗಳ ಮಾಡುವ ದಿನವಾಗುತ್ತಿದೆ. ನಿಮ್ಮ ಆಪ್ತರೊಬ್ಬರಿಂದ ಇಂದು ಸಮಸ್ಯೆ ಎದುರಿಸಬಹುದು. ನಿಮ್ಮಿಂದ ಕುಟುಂಬದಲ್ಲಿ ಇಂದು ಚಿಂತೆಯ ವಾತಾವರಣ ಇರಲಿದೆ. ರಾತ್ರಿ ಸಮಯದಲ್ಲಿ ವಾಹನ ಚಲಾವಣೆ ಮಾಡದೆ ಇರುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಕೆಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವಿರಿ. ಅನೇಕರಿಗೆ ಈ ದಿನವು ಸವಾಲುಗಳಿದ್ದರೂ ಹೊಸ ಆದಾಯ ಮೂಲ ಹೊಂದುವ ಮೂಲಕ ನೆಮ್ಮದಿ ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಮಿಶ್ರಫಲಗಳ ತರಲಿದೆ. ನಿಮ್ಮ ವೈವಾಹಿಕ ಸಂಬಂಧದಲ್ಲಿ ಕಲಹಗಳಿವೆ. ದಿನದ ಅಂತ್ಯದಲ್ಲಿನ ಖರ್ಚುಗಳನ್ನು ನಿಭಾಯಿಸಿ. ಅನೇಕರಲ್ಲಿ ಶುಭ ಸಮಾರಂಭ ಕುರಿತಾದ ಚರ್ಚೆಗಳಲ್ಲಿ ಭಾಗಿಯಾಗುವ ದಿನವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನೀವು ಬಹಳ ದಿನದಿಂದ ಮಾಡಬೇಕಿದ್ದ ಕೆಲಸ ಇಂದು ಪೂರ್ಣ ಮಾಡುವಿರಿ. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯಿರಿ. ನಿಮ್ಮ ಸಂಬಂಧಗಳು ಇಂದು ಗಟ್ಟಿಯಾಗಲಿದೆ. ನಿಮಗಾಗಿ ಖರ್ಚುಗಳ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಸಾಲ ಮರುಪಾವತಿಯ ಒತ್ತಡ ಎದುರಿಸಬಹುದು. ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವಿರಿ. ವ್ಯಾಪಾರಿ ವಲಯದಲ್ಲಿ ಸಂತೋಷದಿಂದ ತುಂಬಿದ ದಿನವಾಗುತ್ತಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ನೀವು ಯಾರಿಗೂ ಸಾಲ ನೀಡಬೇಡಿ. ಮನೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಆರ್ಥಿಕ ವಿಚಾರ ನೀವು ಅಂದುಕೊಂಡಂತೆ ಇರಲಿದೆ. ಸ್ನೇಹಿತರ ನಡುವೆ ಸಣ್ಣ ಪುಟ್ಟ ಮನಸ್ತಾಪ ಮೂಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಆದಾಯ ಗಳಿಸುವ ದಿನವಿದು. ನಿಮ್ಮ ಪ್ರಮಾಣಕ ಪ್ರಯತ್ನಗಳಿಂದ ಫಲ ಅನುಭವಿಸಲಿದ್ದೀರಿ. ಹೊಸ ಕೆಲಸಗಳನ್ನು ಮಾಡುವುದು ನಿಮಗೆ ಶ್ರಮದಾಯಕವಾಗಬಹುದು. ವಾಹನ ಸಂಬಂಧಿತ ಸಮಸ್ಯೆಗಳು ದೂರಾಗಲಿದೆ.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಿಶ್ರಫಲ. ರಿಯಲ್ ಎಸ್ಟೇಟ್ ಉದ್ಯಮಿಗಳು, ಕಂಟ್ರಾಕ್ಟರ್, ಕೃಷಿ ಸಂಬಂಧಿತ ವ್ಯವಹಾರ ಮಾಡುವ ಮಂದಿಗೆ ಈ ದಿನವು ಅನುಕೂಲವಾಗಲಿದೆ. ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ಓಡಾಟಗಳಲ್ಲಿ ಭಾಗಿಯಾುವಿರಿ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಪ್ರಯಾಣಗಳ ದಿನ. ನಿಮ್ಮದಲ್ಲದ ಕೆಲಸಗಳಿಗೂ ನೀವು ಪ್ರಯಾಣ ಮಾಡಬೇಕಾಗಬಹುದು. ಕೌಟುಂಬಿಕ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ನಿರುದ್ಯೋಗಿಗಳು ಹೆಚ್ಚು ಶ್ರಮದಾಯಕ ಪ್ರಯತ್ನದ ಮೂಲಕ ಉತ್ತಮ ಅವಕಾಶ ಪಡೆಯಬಹುದು.
ಕುಂಭ ರಾಶಿ
ನಿಮಗಿಂದು ಉತ್ತಮ ದಿನ, ಗೃಹಿಣಿಯರಿಗೆ ಈ ದಿನವು ಹಣ ಪಡೆಯುವ ದಿನವಾಗಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಅಡ್ಡಿಗಳು ಕೂಡ ಎದುರಾಗಲಿದೆ. ನಿಮ್ಮಿಂದಾಗಿ ದೊಡ್ಡ ಕೆಲಸವೊಂದಕ್ಕೆ ಆರಂಭ ಸಿಗಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ವ್ಯಾಪಾರಿಗಳು ಲಾಭ ನೋಡುವ ದಿನ. ನಿರುದ್ಯೋಗಿ ಯುವಕರು ಇಂದು ಆಪ್ತರೊಬ್ಬರ ಸಹಕಾರದಿಂದ ಉತ್ತಮ ಅವಕಾಶ ಪಡೆಯಬಹುದು. ಪ್ರೇಮಿಗಳಿಗೆ ಇಂದು ಉತ್ತಮವಾಗಿರಲಿದೆ. ಆನ್‌ಲೈನ್ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ.



Click it and Unblock the Notifications










