February 03 Horoscope: ಈ ಮಂಗಳವಾರ ಯಾರಿಗೆ ಮಂಗಳಕರ?

ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 03 (February 03 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಬದಲಾವಣೆಗಳಿಗೆ ಕಾರಣವಾಗಲಿದೆ. ದಾಂಪತ್ಯ ವಿಚಾರದಲ್ಲಿ ಬಹಳ ದಿನದಿಂದ ಇದ್ದಂತಹ ಸಮಸ್ಯೆ ನಿವಾರಣೆಯಾಗಲಿದೆ.

ವೃಷಭ ರಾಶಿ

ವೃಷಭ ರಾಶಿ ಜನರಲ್ಲಿ ಈ ದಿನವು ಸಮ್ಯಸ್ಯೆಗಳ ತರಬಹುದು. ನಿಮ್ಮ ಕೆಲಸಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರುವುದು ಉತ್ತಮ. ಜೊತೆಗೆ ನಿಮ್ಮ ಹಣಕಾಸಿನ ವ್ಯವಹಾರಗಳು ಇಂದು ಸಮಸ್ಯೆಗಳ ತರಬಹುದು. ಅಗತ್ಯ ಕೆಲಸವೊಂದಕ್ಕೆ ಹಣಕಾಸಿನ ಕೊರತೆ ಇರಲಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ.

February-03-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿುನ ರಾಶಿ ಜನರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಯಾರಿಂದಾದರು ಕಹಿ ಸುದ್ದಿ ಬರಬಹುದು. ಆದರೆ ಬಹಳ ಹಿಂದಿನ ಸಮಸ್ಯೆಗಳನ್ನು ಬಗೆಹರಿಸಲು ನೀವು ಮತ್ತೆ ಪ್ರತ್ನಿಸಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಆಪ್ತರ ಬಳಿ ನಿಮ್ಮ ಕಷ್ಟಗಳ ಹೇಳಿಕೊಳ್ಳುವಿರಿ. ನಿಮ್ಮ ವ್ಯವಹಾರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ. ವ್ಯಾಪಾರ ವಿಚಾರದಲ್ಲಿ ಆಪ್ತರೊಬ್ಬರ ಭೇಟಿಯಾಗುವಿರಿ.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಯಾರಿಗೂ ಹಣಕಾಸಿನ ನೆರವು ನೀಡಬೇಡಿ. ಆಪ್ತರೊಬ್ಬರಿಂದ ನಿಮಗೆ ಹಣ ಬರಬಹುದು. ಯಾರಿಗೂ ಸಾಲ ನೀಡಬೇಡಿ. ಆಮಂತ್ರಣ ಮೇರೆಗೆ ನೀವು ಪ್ರಯಾಣ ಮಾಡಬಹುದು. ವಾಹನ ಸಂಬಂಧಿತ ವಿಚಾರದಲ್ಲಿ ಶುಭವಿದೆ.

ಕನ್ಯಾ ರಾಶಿ

ಕನ್ಯಾ ರಾಶಿ ಜನರು ಇಂದು ಸಾಮಾನ್ಯ ದಿನವನ್ನು ಎದುರು ನೋಡಬಹುದು. ನಿಮ್ಮ ಹಲವು ಕೆಲಸಗಳನ್ನು ಸಮಯದೊಳೆ ಮಾಡಬಹುದು. ದಾಂಪತ್ಯ ವಿಚಾರವಾಗಿ ಇಂದು ಮಿಶ್ರಫಲದ ದಿನ. ನಿಮ್ಮ ದೊಡ್ಡ ವ್ಯವಹಾರವೊಂದು ನಿಮಗೆ ಚಿಂತೆ ಹೆಚ್ಚಿಸಬಹುದು.

ತುಲಾ ರಾಶಿ

ತುಲಾ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನೀವು ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆಯುವ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನ ದೊಡ್ಡ ಲಾಭ ನೋಡುವಂತಹ ದಿನ. ನಿಮ್ಮಿಂದಾಗಿ ಹಲವರಿಗೆ ಹೊಸ ಕೆಲಸಗಳು ಒಲಿಯಲಿವೆ. ಅನಗತ್ಯ ಮಾತುಗತೆಗಳು ಚರ್ಚೆಗಳಲ್ಲಿ ಭಾಗಿಯಾಗಬೇಡಿ. ನಿಮ್ಮ ಬಹುದಿನದ ಬಯಕೆಯೊಂದನ್ನು ಇಂದು ಈಡೇರಿಸಿಕೊಳ್ಳಬಹುದು.

ಧನು ರಾಶಿ

ಧನು ರಾಶಿಯವರಿಗೆ ಇಂದು ಸಮಸ್ಯೆಗಳಿವೆ. ಗೃಹಿಣಿಯರು ಅನಾರೋಗ್ಯ ಅನುಭವಿಸಬಹುದು, ಅವಿವಾಹಿತರಲ್ಲಿ ಅನಗತ್ಯ ಖರ್ಚು ಹೆಚ್ಚಾಗಲಿದೆ. ವಾಹನ ಸಂಬಂಧಿ ಖರ್ಚುಗಳಿವೆ. ವಿವಾಹಿತರಲ್ಲಿ ಸಂತಸದ ದಿನವಾಗುತ್ತಿದೆ.

ಮಕರ ರಾಶಿ

ಮಕರ ರಾಶಿ ಜನರಿಗೆ ಆತ್ಮವಾಲೋಕನದ ದಿನ. ಹಿಂದಿನ ತಪ್ಪಿನಿಂದ ನೀವಿಂದು ಬುದ್ದಿ ಕಲಿಯುತ್ತೀರಿ. ಸಾಲ ತೀರಿಸುವುದು ಕೂಡ ನಿಮಗೆ ಆರ್ಥಿಕ ಸಮಸ್ಯೆಗೆ ಕಾರಣವಾಗಬಹುದು. ಮನಸ್ತಾಪಗಳು ದೊಡ್ಡದಾಗಲು ಬಿಡಬೇಡಿ. ದೇವಾಲಯ ಭೇಟಿಯ ಅವಕಾಶಗಳು ಬರಬಹುದು.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಇಂದು ಉತ್ತಮ ಪ್ರಯೋಜನಗಳ ಪಡೆಯುವ ದಿನ. ನಿಮ್ಮ ಕೆಲಸಗಳಲ್ಲಿ ಎದುರಾಗುತ್ತಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಕೆಲಸದ ಸ್ಥಳದಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆದಾಯ ಮೂಲದ ವಿಸ್ತರಣೆ ಮಾಡುವ ನಿಮ್ಮ ಆಲೋಚನೆಗೆ ಅವಕಾಶಗಳಿವೆ.

ಮೀನ ರಾಶಿ

ಮೀನ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ಅದ್ರಲ್ಲೂ ನೀವು ಮಾಡಬೇಕಿದ್ದ ಕೆಲಸಗಳು ಮುಂದೂಡಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶ ಸಿಗಬಹುದು. ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರಲಿದೆ.

English summary

February-03-2025-daily-horoscope-prediction-for-12-zodiac-signs-in-kannada

Here is Horoscope Today, 03 February Horoscope: Daily Horoscope Prediction For 12 Zodiac signs In Kannada
Story first published: Tuesday, February 3, 2026, 5:01 [IST]
X
Desktop Bottom Promotion