Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
February 02 Horoscope: ಈ ಸೋಮವಾರವು ಯಾರಿಗೆ ಅನುಕೂಲಕರ
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 02 (February 02 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಸಮಸ್ಯೆಗಳ ತರಬಹುದು. ನೀವು ಬಹು ಸಮಯದಿಂದ ಮಾಡಲು ಯತ್ನಿಸಿದ್ದ ವಿಚಾರಗಳು ದೊಡ್ಡ ಅಡಚಣೆಗೆ ಎದುರಾಗಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗದೆ ಇರಬಹುದು. ವ್ಯಾಪಾರದಲ್ಲಿ ಇಂದು ಸಮಸ್ಯೆಗಳ ದಿನವಾಗುತ್ತದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಸಮ್ಯೆಗಳಿಂದ ಅಥವಾ ಚಿಂತೆಗಳಿಂದ ತುಂಬಿರಲಿದೆ. ನೀವು ಹಲವು ಕೆಲಸಗಳನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಬಹುದು. ಆರ್ಥಿಕ ವಿಚಾರದಲ್ಲಿ ಚಿಂತೆಗಳಿವೆ. ನಿಮಗಾಗಿ ಖರ್ಚು ಮಾಡುವಿರಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನವು ಅನುಕೂಲಗಳ ತರಲಿದೆ. ನಿಮ್ಮ ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ವಸ್ತು ಅಥವಾ ಹಣ ನಿಮ್ಮ ಕೈ ಸೇರಲಿದೆ. ಹಲವರಿಗೆ ಈ ದಿನ ಅದೃಷ್ಟಕರವಾಗಿರಲಿದೆ. ಮನೆ ಸಂಬಂಧಿತ ಸವಾಲುಗಳನ್ನು ಎದುರಿಸುವಿರಿ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಶ್ರಮದಾಯಕವಾಗುತ್ತಿದೆ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಅಡೆತಡೆಗಳು ಬರಬಹುದು. ವ್ಯಾಪಾರ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣಗಳ ಮಾಡಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಸವಾಲುಗಳಿವೆ. ಆರ್ಥಿಕ ವಿಚಾರವಾಗಿ ಬಹಳ ಅನಾನುಕೂಲವಿದೆ. ನೀವು ಅಂದುಕೊಂಡಂತೆ ಕೆಲಸಗಳು ನಡೆಯದೆ ಇರಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಇಂದು ಬಗೆಹರಿಸಿಕೊಳ್ಳಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನವು ಸವಾಲುಗಳ ತರಲಿದೆ. ನೀವು ಮನೆಯ ವಿಚಾರದಲ್ಲಿ ಮಾಡಬೇಕಿದ್ದ ಕೆಲಸವನ್ನು ಮುಂದೂಡುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಮತ್ತೆ ಸಿಲುಕಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಮುಖ್ಯವಾದ ದಿನವಾಗುತ್ತಿದೆ. ನೀವು ಹಲವು ಕೆಲಸಗಳನ್ನು ಮಾಡುವಾಗ ಹಣಕಾಸಿನ ಸ್ಥಿತಿಯು ನಿಮಗೆ ಅಡ್ಡಿಯಾಗಬಹುದು. ಯಾರೊಂದಿಗೂ ಅನಾವಶ್ಯಕ ಚರ್ಚೆ ಅಥವಾ ಮನಸ್ತಾಪಗಳ ಎದುರಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಮಿಶ್ರಫಲದಿಂದ ಕೂಡಿರಲಿದೆ. ಯಾರಿಗಾದರು ನೀವು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ನೀಡಬೇಕಾಗುವ ಒತ್ತಡದಲ್ಲಿ ಇರುವಿರಿ. ನಿಮ್ಮ ಭಾವನೆಗಳಿಗೆ ನೋವು ತರುವ ಘಟನೆಗಳು ನಡೆಯಬಹುದು. ಸಹೋದರರಿಂದ ಹಣಕಾಸಿನ ಬೇಡಿಕೆ ಬರಬಹುದು.
ಧನು ರಾಶಿ
ಧನು ರಾಶಿಯವರಲ್ಲಿ ಈ ದಿನವು ಅಚ್ಚರಿ ಫಲಿತಾಂಶಗಳಿಗೆ ಕಾರಣವಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವಿರಿ. ಅನೇಕರಿಗೆ ಈ ಸಮಯವು ಅಚ್ಚರಿಯ ಬೆಳವಣಿಗೆಗೆ ಕಾರಣವಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ಇಂದು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ಆಪ್ತರೊಬ್ಬರ ಆಹ್ವಾನದ ಮೇರೆ ಪ್ರಯಾಣಗಳ ಮಾಡುವಿರಿ. ಯಾರಿಂದಾದರು ಹಣ ಪಡೆಯುವ ಉದ್ದೇಶ ಈಡೇರದೆ ಇರಬಹುದು. ವಾಹನ ಸಂಬಂಧವಾಗಿ ಖರ್ಚುಗಳಿವೆ. ದಾಂಪತ್ಯ ವಿಚಾರವಾಗಿಯೂ ಕೂಡ ನಿಮಗೆ ನೋವಿನ ದಿನ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಅನುಕೂಲಕರ ದಿನ. ವ್ಯಾಪಾರಿಗಳು ಹೆಚ್ಚು ಲಾಭ ಮಾಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರದೆ ಇರಬಹುದು. ಪ್ರಾಮಾಣಿಕ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುವಿರಿ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಪ್ರಯಾಣ ಮಾಡುವ ದಿನ. ನೀವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ವೈದ್ಯರ ಭೇಟಿಯಾಗುವುದು ಉತ್ತಮ. ದಿನದ ಅಂತ್ಯದಲ್ಲಿ ದೊಡ್ಡ ಖರ್ಚುಗಳು ಬರಬಹುದು.



Click it and Unblock the Notifications