Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
February 01 Horoscope: ಈ ಭಾನುವಾರ ಲಾಭದಾಯಕ ದಿನ
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 01 (February 01 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸವು ಅಂದುಕೊಂಡಿರುವ ಸಮಯದಲ್ಲಿ ಮುಗಿಯಲಿದೆ. ಅನೇಕರಿಗೆ ಈ ದಿನ ಶುಭವನ್ನು ತರಲಿದೆ. ನಿಮ್ಮ ವ್ಯವಹಾರದಲ್ಲಿ ಹೊಸ ರೀತಿಯ ಸವಾಲುಗಳಿದ್ದರೂ ಅವುಗಳನ್ನು ನಿಭಾಯಿಸುತ್ತೀರಿ.
ವೃಷಭ ರಾಶಿ
ನೀವಿಂದು ಅಪಾಯಕಾರಿ ವಸ್ತುಗಳು, ಕೆಲಸಗಳಿಂದ ದೂರವಿರುವುದು ಉತ್ತಮ. ಪ್ರಯಾಣಗಳ ಮಾಡಬೇಕಾಗುತ್ತದೆ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗುವ ದಿನ. ಆಪ್ತರೊಬ್ಬರ ಅನಾರೋಗ್ಯ ಸಂಬಂಧ ನೀವು ವ್ಯಯಿಸಬೇಕಾಗುತ್ತದೆ. ಯಾರಿಗೂ ಸಾಲ ನೀಡಬೇಡಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ದೊಡ್ಡ ಯಶಸ್ಸು ಪಡೆಯಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಸವಾಲುಗಳನ್ನು ಎದುರಿಸಿ ನಿಲ್ಲುವುದು ಭವಿಷ್ಯದ ದೃಷ್ಟಿಯಲ್ಲಿ ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರಲ್ಲಿ ಈ ದಿನವು ಬಹಳ ಪ್ರಯಾಣದಿಂದ ಕೂಡಿರಲಿದೆ. ನೀವು ಮಾಡಬೇಕಿದ್ದ ಕೆಲಸವನ್ನು ಮನಸ್ಸಿಟ್ಟು ಮಾಡಿ ಮುಗಿಸಿ. ಯಾರಿಂದಾದರ ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡಬೇಕಾಗುತ್ತದೆ. ಅನೇಕರಿಗೆ ಈ ದಿನ ಶ್ರಮದಾಯಕ ಕೆಲಸದಿಂದ ಕೂಡಿರಲಿದೆ. ಆರೋಗ್ಯದ ಕಡೆ ಗಮನವಿಡಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಸಮಸ್ಯೆಗಳಿಂದ ಕೂಡಿದ ದಿನ. ನೀವು ಅಂದುಕೊಂಡ ಕೆಲಸಕ್ಕೆ ಅಡ್ಡಿಗಳಿವೆ. ಯಾರಿಗೂ ಸಾಲ ನೀಡಬೇಡಿ. ನಿಮ್ಮ ದೊಡ್ಡ ಕೆಲಸವೊಂದನ್ನು ಮತ್ತೆ ಮುಂದೂಡುತ್ತೀರಿ. ಯಾರೊಂದಿಗೂ ಅನಗತ್ಯ ಚರ್ಚೆಗಳು ಅಥವಾ ಕಲಹದಲ್ಲಿ ಭಾಗಿಯಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ವಿಚಾರಗಳಲ್ಲಿ ಶುಭವಾಗುತ್ತದೆ. ವ್ಯಾಪಾರದಲ್ಲಿ ಹೊಸ ರೀತಿ ಲಾಭ ನೋಡುವಿರಿ. ಗೃಹಿಣಿಯರಿಗೆ ಹಣಕಾಸಿನ ವಿಚಾರದಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡದಲ್ಲಿ ಇರುವಿರಿ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಮಿಶ್ರಫಲವಿದೆ, ನೀವು ಅಂದುಕೊಂಡ ಕೆಲಸ ಆದರೂ ಅದರಿಂದ ತೃಪ್ತಿ ಇರುವುದಿಲ್ಲ. ಪತ್ನಿ ಜೊತೆಗಿನ ಕಲಹ ದೊಡ್ಡದಾಗಬಹುದು. ಮಕ್ಕಳಿಂದ ನಿಮಗೆ ನೋವಿನ ವಿಚಾರ ಬರಬಹುದು. ಉಳಿತಾಯ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಈ ದಿನ ಬಹಳ ಅನುಕೂಲವಿದೆ. ಕೃಷಿ ಸಂಬಂಧಿತ ವಿಚಾರವಾಗಿ ಲಾಭವಿದೆ. ಸ್ವಂತ ಉದ್ಯೋಗ ಮಾಡುವ ಜನರಿಗೆ ಇಂದು ಶುಭವಿದೆ. ಬಹಳ ಸಮಯದಿಂದ ಬಾಕಿ ಉಳಿಸಿಕೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ನಿಮ್ಮ ಸಹಾಯದಿಂದ ಬೇರೆಯವರಲ್ಲಿ ಸಂತಸ ಮೂಡಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಹಣಕಾಸು ವಿಚಾರದಲ್ಲಿ ಶುಭವಾಗುವ ದಿನ. ನಿಮ್ಮ ಮನೆಯಲ್ಲಿ ಬಹಳ ದಿನದಿಂದ ಇದ್ದಂತಹ ಹಣಕಾಸಿನ ಒತ್ತಡದೊಂದು ನಿವಾರಣೆಯಾಗಲಿದೆ. ಇದು ನಿಮಗೆ ಮಾನಸಿಕ ಶಾಂತಿಗೆ ಕಾರಣವಾಗಲಿದೆ. ಮನೆಯ ಹಿರಿಯರು ಪ್ರಯಾಣ ಮಾಡುವಾಗ ಎಚ್ಚರ ವಹಿಸಿ.
ಮಕರ ರಾಶಿ
ಹಲವು ದಿನದಿಂದ ನೀವು ಮಾಡದೆ ಉಳಿಸಿಕೊಂಡ ಕೆಲಸಗಳನ್ನು ಪೂರ್ಣ ಮಾಡುವಿರಿ. ಪ್ರಯಾಣಗಳಲ್ಲಿ ತೊಡಗಿದ್ದರೆ ಇಂದು ಶುಭವಾಗುತ್ತಿದೆ. ಹಣಕಾಸು ವಿಚಾರವಾಗಿ ಮುಖ್ಯ ನಿರ್ಧಾರ ತೆಗೆದುಕೊಳ್ಳುವಿರಿ.
ಕುಂಭ ರಾಶಿ
ಕುಂಭ ರಾಶಿಯ ಗೃಹಿಣಿಯರಿಗೆ ಈ ದಿನವು ಬಹಳ ಅನುಕೂಲವಿದೆ. ನಿಮ್ಮ ದಾಂಪತ್ಯ ವಿಚಾರದಲ್ಲಿ ಶುಭವಿದೆ. ಮಕ್ಕಳ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಅವರಲ್ಲಿ ನೋವು ಉಂಟು ಮಾಡಬಹುದು. ಆದರೆ ಅದು ಸರಿ ಎಂಬ ಮನೋಭಾವ ನೆಮ್ಮದಿ ತರಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಹಣಕ್ಕೆ ಸಂಬಂಧಿಸಿದಂತೆ ಈ ದಿನ ನೀವು ಒತ್ತಡ ಎದುರಿಸಬಹುದು. ಮನೆಗಾಗಿ ನೀವಿಂದು ಖರ್ಚು ಮಾಡಬಹುದು. ಸವಾಲುಗಳ ಎದುರಿಸುವ ನಿಮ್ಮ ಧೈರ್ಯಕ್ಕೆ ಇಂದು ಪೆಟ್ಟು ಬೀಳಬಹುದು. ಅಪಾಯಕಾರಿ ವಸ್ತುಗಳಿಂದ ದೂರವಿರಿ.



Click it and Unblock the Notifications