Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರಗ್ರಹಣದ ಎಫೆಕ್ಟ್: ಈ ರಾಶಿಯವರಲ್ಲಿ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿತ!
ಸೆಪ್ಟೆಂಬರ್ 7 2025 ರಂದು ಸಂಭವಿಸುತ್ತಿರುವ ಚಂದ್ರಗ್ರಹಣವು ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಅದ್ರಲ್ಲೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳನ್ನು ಬಹಳ ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ಅದ್ರಲ್ಲೂ ಚಂದ್ರಗ್ರಹಣ ಹಲವು ರೀತಿಯಲ್ಲಿ ಪ್ರಭಾವ ಉಂಟು ಮಾಡುವುದರಿಂದ ಈ ದಿನದಂದು ಹಲವು ಬದಲಾವಣೆಗಳ ನೋಡಬಹುದು.
ಇದು ವರ್ಷದ ಕೊನೆಯ ಮತ್ತು ಪೂರ್ಣ ಚಂದ್ರಗ್ರಹಣವಾಗಿದ್ದು, ಇದು ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರಿಸುತ್ತದೆ. ಈ ಬಾರಿ ಗ್ರಹಗಳ ಸ್ಥಾನವು ಜ್ಯೋತಿಷ್ಯದಲ್ಲಿ ಅಶುಭ ಕಾಕತಾಳೀಯವೆಂದು ಪರಿಗಣಿಸಲಾದ ಕೆಲವು ಯೋಗಗಳನ್ನು ಸೃಷ್ಟಿಸುತ್ತಿದೆ. ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕುಂಭ ರಾಶಿಯಲ್ಲಿರುತ್ತಾನೆ.

ಕುಂಭ ರಾಶಿಯಲ್ಲಿ ರಾಹು ಕೂಡ ನೆಲೆಸಿದ್ದಾನೆ. ಇಲ್ಲಿ ರಾಹು ಹಾಗೂ ಚಂದ್ರನ ಸಂಯೋಗವಾಗುತ್ತದೆ. ಇದು ಗ್ರಹಣ ಯೋಗವನ್ನು ಸೃಷ್ಟಿಸಲಿದೆ. ಹಾಗೆ ಇನ್ನೊಂದು ಕಡೆ ಸೂರ್ಯ ಮತ್ತು ಕೇತುವಿನ ಸಂಯೋಗವು ಕನ್ಯಾ ರಾಶಿಯಲ್ಲಿ ಇರುತ್ತದೆ ಮತ್ತು ಅವರಿಬ್ಬರೂ ಚಂದ್ರ-ರಾಹುವಿನ ನೇರವಾಗಿ ನೆಲೆಯಾಗುತ್ತಾರೆ, ಅಂದರೆ 7ನೇ ಮನೆಯಲ್ಲಿ ಇರುತ್ತಾರೆ. ಈ ರೀತಿ ನೇರ ಚಲನೆಯಲ್ಲಿರುವುದರಿಂದ ಹಲವರಲ್ಲಿ ಅದರ ಪರಿಣಾಮ ನೋಡಬಹುದು.
ಈ ಎಲ್ಲಾ ಗ್ರಹಗಳ ಚಲನೆಯು ಚಂದ್ರಗ್ರಹಣದಲ್ಲಿ ಹಲವು ರೀತಿ ಪರಿಣಾಮಕ್ಕೆ ಕಾರಣವಾಗುತ್ತಿದೆ. ಕಾಕತಾಳಿಯವಾಗಿ ಹಲವು ರಾಶಿ ಜನರಿಗೆ ಇದು ಸಮಸ್ಯೆಗಳ ತರಬಹುದು. ಅದ್ರಲ್ಲೂ ಆರ್ಥಿಕ ವಿಚಾಗಳು, ಉದ್ಯೋಗ ಸಂಬಂಧಿ ಸಮ್ಯಸ್ಯೆಗಳು ಕಾಡಬಹುದು. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಚಂದ್ರ ಗ್ರಹಣವು ಸಮಸ್ಯಾತ್ಮಕವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಈ ಚಂದ್ರಗ್ರಹಣದ ಸಮಯದಲ್ಲಿ ವೃಷಭ ರಾಶಿಯ ಜನರು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ದೀರ್ಘಕಾಲದ ಸಮಸ್ಯೆಗಳು, ಅಥವಾ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ಕಿಡ್ನಿ ಸಂಬಂಧಿತ ಸಮಸ್ಯೆಗಳಲ್ಲಿ ನಿಮಗೆ ಅನೇಕ ರೀತಿಯಲ್ಲಿ ಸಮಸ್ಯೆಗಳು ಬರಬಹುದು. ಇದು ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮಲ್ಲಿ ಆರ್ಥಿಕ ಒತ್ತಡಕ್ಕೆ ಇದು ಕಾರಣವಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳ ನಿರ್ವಹಿಸಲು ಅಡ್ಡಿಗಳು ಎದುರಾಗಬಹುದು.
ಮಿಥುನ ರಾಶಿ
ಮಿಥುನ ರಾಶಿಯ ಜನರು ಈ ಸಮಯದಲ್ಲಿ ತಮ್ಮ ಮಕ್ಕಳಿಗೆ ಸಂಬಂಧಿಸಿದ ಕೆಲವು ಚಿಂತೆಗೆ ಒಳಗಾಗಬಹುದು. ಕುಟುಂಬ ಸದಸ್ಯರೊಬ್ಬರಿಗೆ ನೀವು ಹಣಕಾಸು ಸಂಬಂಧವಾಗಿ ಸಹಾಯ ಮಾಡುವಿರಿ, ಆದ್ರೆ ನಿಮ್ಮ ಸಮಸ್ಯೆಗಳು ಹೆಚ್ಚಾಗುವ ಸಂಭವವಿದೆ. ನೀವು ಬಹಳ ವರ್ಷದಿಂದ ಅಂದುಕೊಂಡಿದ್ದ ಕೆಲಸದಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಕೆಲಸದ ಒತ್ತಡ ಹೆಚ್ಚಾಗಬಹುದು. ಮಾನಸಿಕ ನೆಮ್ಮದಿ ಹಾಳಾಗುವ ಹಲವು ಕೆಲಸಗಳು ನಿಮಗೆ ಎದುರಾಗಲಿದೆ.
ಸಿಂಹ ರಾಶಿ
ಚಂದ್ರಗ್ರಹಣದ ನಂತರ ಸಿಂಹ ರಾಶಿಯವರು ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸ್ವಲ್ಪ ಉದ್ವಿಗ್ನವಾಗಿರುತ್ತದೆ. ವಾಹನ ಸಂಬಂಧವಾಗಿ ಹಲವು ದಿನಗಳ ಕನಸನ್ನೂ ಮತ್ತೆ ಮುಂದೂಡಬಹುದು. ಮನೆ ನಿರ್ಮಾಣ ಮಾಡುವವರಿಗೆ ಈ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯ ಕಾರ್ಯನಿರತ ಮತ್ತು ಒತ್ತಡದಿಂದ ಕೂಡಿರುತ್ತದೆ. ನಿಮಗೆ ಯಾರಿಂದಾದರು ದೊಡ್ಡ ಮೊತ್ತ ಸಂದಾಯವಾಗಬೇಕಿದ್ದರೆ ಅದು ಮತ್ತೆ ಮುಂದೂಡುತ್ತಾರೆ. ನಿಮ್ಮ ಅಗತ್ಯ ಕೆಲಸಕ್ಕೆ ಹಣಕಾಸು ಕೊರತೆ ಎದುರಾಗಬಹುದು. ಪಂಚೇಂದ್ರಿಯ ಸಂಬಂಧಿ ಅನಾರೋಗ್ಯ ಕಾಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications