Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ ನಕ್ಷತ್ರದಲ್ಲಿ ಜನಿಸಿದವರಿಗೆ ಯಾವಾಗ ಕುಬೇರ ಯೋಗ ಗೊತ್ತಾ? ಇಲ್ಲಿದೆ ಮಾಹಿತಿ!
ವೈದಿಕ ಶಾಸ್ತ್ರದಲ್ಲಿ 27 ನಕ್ಷತ್ರಗಳು ಒಂದೊಂದು ರೀತಿಯ ಗುಣಗಳ ಪಾಲಿಸುತ್ತವೆ. ಪ್ರತಿಯೊಂದಕ್ಕೂ ತನ್ನದೇ ಆದ ಗುಣಗಳಿವೆ, ಅದರದ್ದೇ ಆದ ಮಹತ್ವವಿದೆ, ನೀವು ಯಾವ ನಕ್ಷತ್ರದಲ್ಲಿ ಜನಿಸಿದ್ದೀರೋ ನಿಮ್ಮ ಭವಿಷ್ಯ ಅದರ ಹಿಂದೆ ನಿರ್ಧಾರವಾಗುತ್ತದೆ. ನೀವು ಯಾವ ಜನ್ಮ ನಕ್ಷತ್ರದಲ್ಲಿ ಜನಿಸಿರುತ್ತೀರೋ ಅದರಿಂದ ನಿಮಗೆ ಒಂದಿಷ್ಟು ಲಾಭಗಳಿರುತ್ತವೆ.
ಕೆಲವು ನಕ್ಷತ್ರಗಳು ಹೆಚ್ಚು ಬುದ್ಧಿವಂತರು, ಅಧ್ಯಯನಶೀಲರು ಹಾಗೆ ಹೆಚ್ಚು ಆರ್ಥಿಕವಾಗಿ ಬಲವುಳ್ಳವರು ಆಗಿರುತ್ತಾರೆ. ಹಾಗೆ ಕೆಲವರಿಗೆ ಕೆಲಸದಲ್ಲಿ ಮುಟ್ಟಿದೆಲ್ಲಾ ಯಶಸ್ಸು, ವ್ಯವಹಾರದಲ್ಲೂ ಯಶಸ್ಸು ಗಳಿಸುವುದು ನೋಡಬಹುದು. ಇದೆಲ್ಲದಕ್ಕೂ ನಕ್ಷತ್ರಗಳು ಕಾರಣವಾಗುತ್ತವೆ. ನಿಮ್ಮ ರಾಶಿ ಹಾಗೂ ಜನ್ಮ ಕುಂಡಲಿಯ ಗ್ರಹತಿಗತಿಗಳ ಆಧಾರದ ಮೇಲೆ ಎಲ್ಲವು ನಿರ್ಧರಿತವಾಗುತ್ತದೆ.

ಆದರೆ ಕೆಲವೇ ನಕ್ಷತ್ರಗಳಲ್ಲಿ ಹುಟ್ಟಿದವರಿಗೆ ಶ್ರೀಮಂತರಾಗುವಂತಹ ಅವಕಾಶ ಇರುತ್ತದೆ ಎಂದು ಹೇಳಲಾಗುತ್ತದೆ. ಶ್ರೀಮಂತರಾಗುವುದು ಅಂದ್ರೆ ಸಂಪತ್ತಿನ ಕ್ರೂಢೀಕರಣ ಎನ್ನಬಹುದು. ಈ ಕೆಲಸ ಯಾವುದೇ ಅಡ್ಡಿ ಆತಂಕ ಇಲ್ಲದೆ ಪೂರ್ಣವಾಗುವುದು. ಅವರು ಯಾವುದೇ ಕೆಲಸ ಹಿಡಿದರು ಅದರಿಂದ ಲಾಭ ಮಾಡುತ್ತಾರೆ, ಯಶಸ್ವಿಯಾಗುತ್ತಾರೆ.
ಆದ್ರೆ ಕೆಲವೊಂದು ನಕ್ಷತ್ರದವರಲ್ಲಿ ಈ ಅದೃಷ್ಟ ಹಲವು ವರ್ಷದ ಬಳಿಕ ಬರಬಹುದು. ಇಲ್ಲವೆ ಒಂದಿಷ್ಟು ನಕ್ಷತ್ರದಲ್ಲಿ ಶುಭ ಸಂಕೇತಗಳು ಕೆಲವೇ ವರ್ಷಗಳ ಕಾಲ ಇರಬಹುದು. ಹಾಗಾದ್ರೆ ಯಾವ ನಕ್ಷತ್ರದಲ್ಲಿ ಜನಿಸಿದವರು ಕುಬೇರನ ಆಶೀರ್ವಾದಕ್ಕೆ ಒಳಗಾಗುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಉತ್ತರಾ ನಕ್ಷತ್ರ
ಉತ್ತರಾ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟ ಮತ್ತು ಪ್ರತಿಭೆಯ ಮೂಲಕ ತಮ್ಮನ್ನು ಗುರುತಿಸಿಕೊಳ್ಳಲಿದ್ದಾರೆ. ಉತ್ತರಾ ನಕ್ಷತ್ರದವರಲ್ಲಿ 25 ವರ್ಷದ ಬಳಿಕ ಕುಬೇರ ಯೋಗವಂತೆ. ನೀವು ಅಂದುಕೊಂಡಿದ್ದ ಎಲ್ಲಾ ವಿಚಾರಗಳಲ್ಲು ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಹಾಗೆ ವ್ಯವಹಾರಗಳು ನಿಮ್ಮ ಕೈ ಹಿಡಿಯಲಿದೆ.
ಕೃತಿಕಾ ನಕ್ಷತ್ರ
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಕುಬೇರನ ಆಶೀರ್ವಾದವನ್ನು ಹೊಂದಿರುತ್ತಾರೆ. ಕುಬೇರ ಯೋಗದಲ್ಲಿ ಜನಿಸಿದವರು ಜೀವನದಲ್ಲಿ ನಿರಂತರ ಪ್ರಗತಿಯನ್ನು ಕಾಣುತ್ತಾರೆ. ನೀವು 30 ವರ್ಷದ ದಾಟಿದ ಬಳಿಕ ಕೆಲಸದಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಬಹುದು. ವಿದೇಶದಲ್ಲಿ ಕೆಲಸ ಮಾಡುವ ಯೋಗದ ಜೊತೆಗೆ ವಿದೇಶದಲ್ಲಿ ಖಾಯಂ ವಾಸ ಮಾಡುವ ಯೋಗವೂ ನಿಮಗೆ ಒಲಿಯಬಹುದು.
ಮೃಗಶಿರಾ ನಕ್ಷತ್ರ
ನೀವು ಹುಟ್ಟಿದಾಗಿನಿಂದಲೇ ಅದೃಷ್ಟವಂತರಂತೆ. ನಿಮ್ಮ ಯೋಗ ದಿನಗಳು ಯಾವಾಗಲು ನಿಮ್ಮ ಕೈ ಹಿಡಿಯುತ್ತಿರುತ್ತವೆ, ಹಾಗೆ ನಿಮಗೆ 40 ವರ್ಷದ ಬಳಿಕ ಕುಬೇರ ಯೋಗ ಒಲಿಯಲಿದೆ. ಅದರರ್ಥ ನಿಮಗೆ ಅಂದುಕೊಂಡ ಕಾರ್ಯಗಳು, ಆರ್ಥಿಕವಾಗಿ ಸದೃಢವಾಗಲು ನಿಮಗೆ 40 ವರ್ಷ ಬೇಕಾಗುತ್ತದೆ. ಹಣ ಗಳಿಕೆ, ಆರೋಗ್ಯ ಗಳಿಕೆ, ಹೀಗೆ ಒಂದಿಷ್ಟು ಕೆಲಸ ಕಾರ್ಯಗಳಿಗೆ ನೀವು ಕಾಯಬೇಕಾಗುತ್ತದೆ.
ಭರಣಿ ನಕ್ಷತ್ರ
ಭರಣಿ ನಕ್ಷತ್ರದ ಮಂದಿಗೆ ಕುಬೇರ ಯೋಗವು 30 ವರ್ಷದ ಬಳಿಕ ಒಲಿಯಲಿದೆ. ಆದರೆ 55 ವರ್ಷಕ್ಕೆ ಇದು ಕೊನೆಯಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ನೀವು ಜೀವನದ ಪ್ರಮುಖ ಘಟ್ಟಗಳನ್ನು ದಾಟುತ್ತಿರಿ, ಎಲ್ಲಿಯೂ ನಿಮಗೆ ಆರ್ಥಿಕ ಸಮಸ್ಯೆ ಬಾಧಿಸುವುದಿಲ್ಲ. ಹಾಗೆ ಇದರಿಂದ ನಿಮಗೆ ಹೆಚ್ಚು ಸಮಸ್ಯೆಗಳು ಕಾಡುವುದಿಲ್ಲ.
ಅಶ್ವಿನಿ ನಕ್ಷತ್ರ
ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಹುಟ್ಟಿನಿಂದಲೇ ಕುಬೇರ ಯೋಗವನ್ನು ಹೊಂದಿರುತ್ತಾರೆ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಅದರಲ್ಲಿ ಯಶಸ್ವಿಯಾಗುವ ಯೋಗವಿದೆ. ಈ ನಕ್ಷತ್ರದಲ್ಲಿ ಜನಿಸಿದವರು 25 ವರ್ಷದಲ್ಲಿ ಕುಬೇರ ಯೋಗದ ಪ್ರಾಪ್ತಿಗೆ ಒಳಗಾಗುತ್ತಾರೆ. ಇದರಿಂದ ನಿಮ್ಮ ಜೀವನ ಅತ್ಯಂತ ಯಶಸ್ವಿ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications