Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಕೈಬೆರಳಿನ ರೇಖೆ ಏನು ಹೇಳುತ್ತೆ ಗೊತ್ತಾ? ಪ್ರೀತಿಯ ರೇಖೆ ಬಗ್ಗೆ ಗೊತ್ತಾ?
ನಮ್ಮ ಹಸ್ತದಲ್ಲಿರುವ ರೇಖೆಗಳು ನಮ್ಮ ಗುಣ ಹಾಗೂ ನಮ್ಮ ವ್ಯಕ್ತಿತ್ವ ಹೇಳಲಿವೆ. ಅದ್ರಲ್ಲೂ ನಮ್ಮ ಹಸ್ತದಲ್ಲಿ ಯಾವ ರೀತಿ ರೇಖೆಗಳು ಮೂಡಿರುತ್ತವೆಯೋ ಒಂದೊಂದು ರೇಖೆಯ ರಚನೆಗೂ ಒಂದೊಂದು ರೀತಿ ಅರ್ಥವಿದೆ. ಅಂಗೈಯ ಮೇಲಿನ ಗೆರೆಗಳು ಜೀವನದ ಅರ್ಥಗಳನ್ನು ಪ್ರತಿನಿಧಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಅಂಗೈ ಮೇಲಿನ ಗೆರೆಗಳು ವ್ಯಕ್ತಿಯ ಭವಿಷ್ಯವನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಅಂಗೈಯಲ್ಲಿನ ರೇಖೆಗಳನ್ನು ಪರಿಶೀಲಿಸುವ ಮೂಲಕ ಪ್ರೀತಿಯ ಜೀವನ, ಆರ್ಥಿಕ ಜೀವನ ಮತ್ತು ವೃತ್ತಿಪರ ಜೀವನವನ್ನು ಲೆಕ್ಕಹಾಕಬಹುದು. ಈ ಅಧ್ಯಯನವನ್ನು ಹಸ್ತ ಸಾಮುತ್ರಿಕ ಶಾಸ್ತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಒಬ್ಬರ ಅಂಗೈ ನೋಡಿ ಅವರ ಮುಂದಿನ ಭವಿಷ್ಯ ನಿರ್ಧರಿಸಬಹುದು.

ಕೈಯಲ್ಲಿರುವ ಪ್ರತಿಯೊಂದು ರೇಖೆಯು ಪ್ರೀತಿಯ ರೇಖೆ, ಜೀವನ ರೇಖೆ, ತಲೆ ರೇಖೆ, ಮದುವೆ ರೇಖೆಯನ್ನು ಪ್ರತಿನಿಧಿಸುತ್ತದೆ. ಹಾಗಾದ್ರೆ ನಿಮ್ಮ ಕೈನಲ್ಲಿರುವ ರೇಖೆಗಳ ರಚನೆ ಹೇಗಿದೆ. ಅವು ಏನನ್ನು ಹೇಳುತ್ತವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಮ್ಮ ಕಿರು ಬೆರಳಿನ ಕಡೆಯಿಂದ ತೋರು ಬೆರಳಿನ ಕಡೆಗೆ ಸಾಗುವ ಒಂದೇ ಒಂದು ರೇಖೆಯನ್ನು ಲವ್ ಲೈನ್ ಎನ್ನಲಾಗುತ್ತದೆ. ಅದೆ ಪ್ರೀತಿಯ ರೇಖೆ, ಇದು ನಿಮ್ಮ ಪ್ರೀತಿಯ ಜೀವನ ಹಾಗೂ ಮುಂದಿನ ವಿವಾಹ ಜೀವನ ಕುರಿತು ತಿಳಿಸುತ್ತದೆ. ಈ ಪ್ರೀತಿಯ ರೇಖೆಯು ನೇರವಾಗಿದ್ದರೆ ನೀವು ಸ್ಥಿರವಾದ ಪ್ರೀತಿಯನ್ನು ಹುಡುಕುತ್ತಿದ್ದೀರಿ ಎಂದರ್ಥ. ನಿಮ್ಮ ಪ್ರೇಮಿ ಮತ್ತು ಸಂಗಾತಿಯೊಂದಿಗೆ ನೀವು ಸಂತೋಷದ ಜೀವನವನ್ನು ಹೊಂದಿರುತ್ತೀರಿ ಎಂದರ್ಥ.
ಈ ರೇಖೆಯು ನೇರವಾಗಿ ಮತ್ತು ಕೊನೆಯಲ್ಲಿ ಮೇಲಕ್ಕೆ ಬಾಗಿದಂತಿದ್ದರೆ, ಅವರು ತಮ್ಮ ಹಳೆಯ ಪ್ರೀತಿಯನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದರ್ಥ. ಅವರು ತಮ್ಮ ಪ್ರೀತಿಪಾತ್ರರನ್ನು ಆಳವಾಗಿ ಕಾಳಜಿ ವಹಿಸುತ್ತಾರೆ. ಅವರು ತಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ಎಂದಿಗೂ ಹೆದರುವುದಿಲ್ಲ. ಅವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ಅರ್ಥ ನೀಡುತ್ತಂತೆ.
ಹಲವರಿಗೆ ಪ್ರೀತಿಯ ರೇಖೆ ಸ್ವಲ್ಪ ಕಡಿಮೆ ಉದ್ದ ಹೊಂದಿರುತ್ತದೆ. ಕೆಲವರಲ್ಲಿ ಮಾತ್ರ ಈ ರೇಖೆಯು ಅಂಗೈಯ ತುದಿಯನ್ನು ಮುಟ್ಟುವಷ್ಟು ಉದ್ದವಾಗಿದೆ. ಹಾಗೆ ಇದ್ದರೆ ಇವರಿಬ್ಬರ ಪ್ರೇಮ ಸಂಬಂಧ ಬಹುಕಾಲ ಉಳಿಯುತ್ತದೆ ಎಂದರ್ಥ. ಮಹಿಳೆಯರ ವಿಷಯದಲ್ಲಿ ಅವರು ತಮ್ಮ ಜೀವನ ಸಂಗಾತಿಗೆ ಎಷ್ಟು ನಂಬಿಗಸ್ತರು ಎಂದು ಅರ್ಥ. ಆದರೆ ಜೀವನದಲ್ಲಿ ಸಂಗಾತಿ ಬೇರ್ಪಟ್ಟರೆ ಈ ಗೆರೆ ಇರುವವರು ಅದರಿಂದ ಹೊರಬರುವುದು ತುಂಬಾ ಕಷ್ಟ ಎಂದು ಶಾಸ್ತ್ರವೂ ಹೇಳುತ್ತದೆ.
ಪ್ರೀತಿಯ ಗೆರೆ ಚಿಕ್ಕದಾಗಿದ್ದರೆ, ಅಂದರೆ ಕಿರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಗೆರೆ ನಿಂತರೆ, ಅವರು ಸ್ವಾರ್ಥಿಗಳಾಗಿರುತ್ತಾರೆ. ಪ್ರೇಮ ಸಂಗಾತಿಯನ್ನು ಹುಡುಕುವಲ್ಲಿ ಅವರಿಗೆ ಸ್ವಲ್ಪ ತೊಂದರೆಯಾಗಬಹುದು. ಇದರಿಂದ ಅವರು ಬಹಳ ಕಾಲ ಒಂಟಿತನ ಅನುಭವಿಸುತ್ತಾರೆ. ಅಲ್ಲದೆ ಅವರಿಗೆ ಪ್ರೀತಿ ಹುಡುಕುವುದು ಹಾಗೂ ಸಿಗುವುದು ಎರಡು ಅದೃಷ್ಟವೇ. ಆದರೆ ಅವರಲ್ಲಿ ಒಂಟಿತನ ಯಾವಾಗಲು ಮುಂದಾಗುತ್ತದೆ.
ಪ್ರೀತಿಯ ರೇಖೆಯು ಕಿರುಬೆರಳಿನಿಂದ ಪ್ರಾರಂಭವಾಗಿ ಮಧ್ಯದ ಬೆರಳಿನಲ್ಲಿ ಕೊನೆಗೊಂಡರೆ, ನೀವು ನಿಮ್ಮ ಪ್ರೀತಿಪಾತ್ರರನ್ನು, ಅಂದರೆ ನಿಮ್ಮ ಸಂಗಾತಿಯನ್ನು ಹೆಚ್ಚು ಹೆಚ್ಚು ಆಳವಾಗಿ ಪ್ರೀತಿಸುತ್ತೀರಿ. ಅವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಏನು ಬೇಕಾದರೂ ಮಾಡುತ್ತಾರೆ.
ಒಂದು ವೇಳೆ ಈ ರೇಖೆ ತುದಿಯಲ್ಲಿ ಎರಡು ಕವಲಾಗಿ ಒಡೆದಿದ್ದರೆ ನೀವು ಪ್ರೀತಿಸಿದವರನ್ನು ಮರೆಯುವುದಿಲ್ಲ. ಆದರೆ ಅವರು ನಿಮ್ಮ ಜೀವನದ ಉದ್ದಕ್ಕೂ ನಿಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆ ಇರುವುದಿಲ್ಲ ಎಂಬರ್ಥವಂತೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


