Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರೀಯಂತ್ರದ ಪೂಜೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಸಂಪತ್ತು-ಕೀರ್ತಿ ದುಪ್ಪಟ್ಟಾಗೋದು ಹೀಗೆ!
ನಿಮ್ಮ ಜೀವನದ ಗುರಿ ಸಂಪತ್ತು, ಆಸ್ತಿ, ಆರೋಗ್ಯ, ಸಂತಸವನ್ನು ಹೊಂದುವುದಾಗಿರಲಿದೆ. ಆದ್ರೆ ಇದನ್ನೆಲ್ಲಾ ಪಡೆಯಬೇಕು ಅಂದರೆ ಯಾವಾಗಲು ಧನಾತ್ಮಕ ಕ್ರಿಯೆಗಳಲ್ಲಿ ನಾವು ಭಾಗಿಯಾಗಬೇಕು. ನಮ್ಮ ಸುತ್ತಲು ಧನಾತ್ಮಕ ವಿಚಾರಗಳಿಂದ ತುಂಬಿರುವಂತೆ ನೋಡಿಕೊಳ್ಳಬೇಕು. ಆದ್ರೆ ನಮ್ಮಲ್ಲಿ ಧನಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳುವುದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನಾವಿಂದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಶ್ರೀಯಂತ್ರದ ಕುರಿತು ತಿಳಿದುಕೊಳ್ಳೋಣ. ಲಕ್ಷ್ಮಿ, ಸರಸ್ವತಿಯ ಪ್ರತಿರೂಪವಾಗಿ ಈ ಶ್ರೀಯಂತ್ರವನ್ನು ಬಳಸಲಾಗುತ್ತದೆ. ಇದು ಬ್ರಹ್ಮಾಂಡದ ಸಂಕೇತವಾಗಿದೆ. ಏಕೆಂದರೆ ಅದರ ರಚನೆಯಲ್ಲೇ ವಿಶೇಷತೆ ನೋಡಬಹುದು. ಇದರಲ್ಲಿ 9 ತ್ರಿಕೋನಗಳನ್ನು ಹೊಂದಿರಲಿದೆ. ಹಾಗೆ 43 ಸಣ್ಣ ತ್ರಿಕೋನಗಳನ್ನು ಈ ರಚನೆಯಲ್ಲಿ ರೂಪಿಸಲಿದೆ.
ಶ್ರೀಯಂತ್ರ ಖರೀದಿಸಿಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಾಗೆ ಇದರಲ್ಲಿ 101 ಚೌಕಗಳ ರಚನೆಯನ್ನು ಕೂಡ ನೋಡಬಹುದು. ಈ ಶ್ರೀಚಕ್ರ ಯಂತ್ರವನ್ನು ಪೂಜಿಸುವುದು ನಿಮ್ಮ ಜೀವನದಲ್ಲಿ ಅತ್ಯಂತ ದೊಡ್ಡ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ನಂಬಲಾಗಿದೆ. ಇದು ಸಂಪತ್ತು, ವಿದ್ಯೆ, ಆರೋಗ್ಯ, ಧನ, ಆಯಸ್ಸು, ಯಶಸ್ಸು ವೃದ್ಧಿಸುವಂತಹ ಯಂತ್ರ ಎಂದು ಪರಿಗಣಿಸಲಾಗುತ್ತದೆ.

ಈ ಶ್ರೀ ಯಂತ್ರವು ನಿಮಗೆ ಸುಖ, ಭೋಗ, ಸ್ವರ್ಗ, ಉಪವರ್ಗವನ್ನು ತರಲಿದೆ. ಈ ನಾಲ್ಕು ಪುರುಷಾರ್ಥವನ್ನು ಒಲಿಸಿಕೊಳ್ಳಬೇಕಾದರೆ ಹಾಗೆ ಆಶೀರ್ವಾದಕ್ಕಾಗಿ ಶ್ರೀಯಂತ್ರವನ್ನು ಪೂಜಿಸಬೇಕು. ಈ ಯಂತ್ರವು ಬಿಂದು, ತ್ರಿಕೋನ, ಅಷ್ಟಭುಜ, ಅಂತರದಶರ, ವಹಿದಶರ, ಚತುರ್ದಶರ, ಅಷ್ಟದಳ ಕಮಲ, ಶೋಷದಳ ಕಮಲ, ಮೂರು ವೃತ್ತಗಳು, ಮೂರು ಭೂಪುರಗಳ ಹೊಂದಿರಲಿದೆ. ಇದನ್ನು ಬ್ರಹ್ಮಾಂಡದ ಪ್ರತೀಕವಾಗಿಯೂ ಪೂಜಿಸಲಾಗುತ್ತದೆ.
ಅದರಲ್ಲೂ ಈ ಶನಿ ಜಯಂತಿಯ ಸಮಯದಲ್ಲಿ ನೀವು ಈ ಶ್ರೀ ಯಂತ್ರವನ್ನು ಖರೀದಿಸಿ ಪೂಜಿಸಲು ಆರಂಭಿಸಿದರೆ ನಿಮ್ಮ ಎಲ್ಲಾ ನಕಾರಾತ್ಮಕ ಸಮಸ್ಯೆಗಳು ದೂರಾಗಲಿದೆ. ಅದರಲ್ಲೂ ಸಂಪತ್ತು ಕುರಿತಾದ ಕಂಟಕಗಳು ನಿವಾರಣೆಯಾಗಲಿದೆ. ಈ ಸಮಯದಲ್ಲಿ ನೀವು ಶ್ರೀ ಯಂತ್ರವನ್ನು ಪೂಜಿಸಿದರೆ ಶನಿಯಿಂದ ಎದುರಾಗುವಂತಹ ಸಾಡೆ ಸಾತಿಯ ಪರಿಣಾಮಗಳನ್ನು ಕಡಿಮೆ ಮಾಡಲಿದೆ.
ಶ್ರೀ ಯಂತ್ರವು 4 ಶಿವ ಚಕ್ರಗಳನ್ನು ಮತ್ತು 5 ಶಕ್ತಿ ಚಕ್ರಗಳನ್ನು ಹೊಂದಿದೆ. ಹಾಗೆ 43 ತ್ರಿಕೋನಗಳು, 28 ಮರ್ಮ ಸ್ಥಳಗಳು, 24 ಸಂಧಿಗಳು ಶಕ್ತಿಯ ಪ್ರತೀಕವಾಗಿವೆ. ಶ್ರೀ ಯಂತ್ರವು ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ, ಅದರ ತ್ರಿಕೋನಗಳು ಪುಲ್ಲಿಂಗ (ಶಿವ) ಮತ್ತು ಸ್ತ್ರೀಲಿಂಗ (ಶಕ್ತಿ)ಯನ್ನು ಪ್ರತಿನಿಧಿಸಲಿದೆ. ಇದು ನಿಮ್ಮ ಆಧ್ಯಾತ್ಮಿಕ ಪ್ರಗತಿಗೆ ದಾರಿಯಾಗಲಿದೆ. ಸ್ವಯಂ-ಸಾಕ್ಷಾತ್ಕಾರ ಮತ್ತು ಜ್ಞಾನೋದಯಕ್ಕೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಈ ಶ್ರೀಯಂತ್ರವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದು ನೋಡಬಹುದು. ಹಾಗೆ ಹಲವರು ತಾಯತವನ್ನಾಗಿ ಧರಿಸುತ್ತಾರೆ. ಇದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತೀರಿ. ಹಾಗೆ ಹಲವರು ಮನೆಯ ಬಾಗಿಲಿನಲ್ಲಿ ನೇತು ಹಾಕುವುದು ನೋಡಬಹುದು. ಇದರಿಂದ ಮನೆ ಮೇಲೆ ಬೀಳುವ ಕೆಟ್ಟು ಕಣ್ಣುಗಳ ನಿವಾರಣೆ, ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಲಿದೆ ಎಂಬುದು ಪ್ರತೀತಿ. ಹಿಂದೂ ದೇವಾಲಯಗಳಲ್ಲೂ ಕೂಡ ಒಂದು ಬದಿಯಲ್ಲಿ ಈ ಫ್ರೇಮ್ ಹಾಕಲಾದ ಫೋಟೋವನ್ನು ಇಟ್ಟು ಪೂಜಿಸುವುದು ನೋಡಬಹುದು.
ಶ್ರೀಯಂತ್ರ ಪೂಜಿಸುವಾಗ ಹೇಳುವ ಮಂತ್ರವೇನು?
ಓಂ ಶ್ರೀ ಮಹಾ ಲಕ್ಷ್ಮಿಯೇ ನಮಃ: ಶ್ರೀ ಯಂತ್ರದೊಂದಿಗೆ ಲಕ್ಷ್ಮಿ ದೇವಿಯನ್ನು ಆಹ್ವಾನಿಸುವ ಮಂತ್ರ.
ಓಂ ಶಕ್ತಿ ಓಂ: ಶ್ರೀ ಯಂತ್ರದಿಂದ ಪ್ರತಿನಿಧಿಸುವ ದೈವಿಕ ಸ್ತ್ರೀ ಶಕ್ತಿಯನ್ನು ಗೌರವಿಸುವ ಮಂತ್ರ.
ಶ್ರೀ ಶ್ರೀಯೈ ನಮಃ: ಶ್ರೀ ಯಂತ್ರ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪೂಜಿಸುವ ಮಂತ್ರ.
ಹೆಚ್ಚುವರಿ ಮಂತ್ರ
ಓಂ ಐಮ್ ಹ್ರೀಮ್ ಕ್ಲೀಮ್ ಶ್ರೀ ಯಂತ್ರ ರಾಜಾಯ ನಮಃ
ಶ್ರೀ ಯಂತ್ರದೊಂದಿಗೆ ಸಿದ್ಧ ಕಚ್ಚಾ ಪೈರೈಟ್ ಫ್ರೇಮ್ ಹೊಂದಿರುವ ಯಂತ್ರ ಖರೀದಿಸಲು ಅಸ್ಟ್ರೋಟಾಕ್ ವೆಬ್‌ಸೈಟ್ ಬಳಸಿ. ಈ ಮೇಲೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ಯಂತ್ರವು ಕೇವಲ 1,499 ರೂಪಾಯಿಗೆ ಲಭ್ಯವಿದೆ.
(ಇಲ್ಲಿ ಒಳಗೊಂಡಿರುವ ವಿಷಯ ಮತ್ತು ಮಾಹಿತಿಯು ಜಾಹೀರಾತು ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವ್ಯವಹಾರ, ಕಾನೂನು ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಆಧಾರವಾಗಿ ವೆಬ್‌ಸೈಟ್‌ನಲ್ಲಿ ಬರೆಯಲಾದ ವಿಷಯಕ್ಕೆ ಬೋಲ್ಡ್‌ಸ್ಕೈ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಅಂತಹ ವಿಷಯದ ಮೇಲೆ ಇರಿಸಲಾದ ಯಾವುದೇ ಅವಲಂಬನೆಯು ನಿಮ್ಮ ಸ್ವಂತ ನಿರ್ಧಾರವಾಗಿರಲಿದೆ)



Click it and Unblock the Notifications


