Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ದೀಪಾವಳಿಗೆ ಗಾಡಿ ಖರೀದಿ ಮಾಡ್ತಾ ಇದ್ದೀರಾ? ಅ. 29ಕ್ಕೆ ಬೇಡ, ಇನ್ಯಾವ ದಿನ ಶುಭ, ಪೂಜಾ ವಿಧಿಗಳು
ಅಕ್ಟೋಬರ್‌ನಲ್ಲಿ ಗಾಡಿ ಖರೀದಿ ಮಾಡಬೇಕೆಂದು ಬಯಸುವವರು ದೀಪಾವಳಿ ಸಮಯದಲ್ಲಿ ಗಾಡಿ ಖರೀದಿಸುವ ಲೆಕ್ಕಾಚಾರದಲ್ಲಿ ಇರ್ತಾರೆ. ದೀಪಾವಳಿ ಸಮಯದಲ್ಲಿ ಹೊಸ ಗಾಡಿಗೆ ಪೂಜೆ ದೀಪಗಳ ಸಂಭ್ರಮ, ಹೊಸ ಗಾಡಿಯಲ್ಲಿ ಒಂದು ರೌಂಡ್ ಹೋಗಿ ಬರುವ ಖುಷಿ ಹೀಗೆ ದೀಪಾವಳಿ ಇನ್ನಷ್ಟು ವಿಶೇಷ ಅನಿಸುವುದು.
ದೀಪಾವಳಿ ಹತ್ರ ಬರ್ತಾ ಇದೆ, ದೀಪಾವಳಿ ಸಮಯದಲ್ಲಿ ಈ ದಿನಗಳು ವಾಹನ ಖರೀದಿಗೆ ತುಂಬಾ ಶುಭ ದಿನಗಳಾಗಿವೆ:
ಅಕ್ಟೋಬರ್ 24
ಅಕ್ಟೋಬರ್ 30

ದೀಪಾವಳಿಯಂದು ಧನ್ತೇರಸ್ ದಿನ ವಾಹನ ಖರೀದಿ ಮಾಡಲು ಬಯಸುವುದಾದರೆ ಅಕ್ಟೋಬರ್ 30ಕ್ಕೆ ಖರೀದಿಸಿ, ಧನ್ತೇರಸ್ ಅಕ್ಟೋಬರ್ 29ರಿಂದ ಅಕ್ಟೋಬರ್ 30 1:15ರವರೆಗೆ ಇದೆ. ಇದರೊಳಗೆ ವಾಹನ ಖರೀದಿಸಿ.
ಕಾರು ಖರೀದಿ ಬಳಿಕ ಪೂಜೆ
ಧನ ತ್ರಯೋದಶಿಯಂದು ನೀವು ಗಾಡಿ ಖರೀದಿಸಿದರೆ ಪವಿತ್ರ ಅರಿಶಿಣ ದಾರವನ್ನು ಕಟ್ಟಿ. ನಂತರ ಗಾಡಿ ಪೂಜೆ ಮಾಡಿ. ಗಾಡಿಗೆ ಸ್ವಸ್ತಿಕ್ ಬರೆಯಿರಿ, ಇದು ಶುಭದ ಸಂಕೇತ.
ಧನ ತ್ರಯೋದಶಿ ಅಕ್ಟೋಬರ್ 29ಕ್ಕೆ ಇದ್ದರೂ ಈ ದಿನ ಗಾಡಿ ಖರೀದಿ ಮಾಡುವುದಿಲ್ಲ ಏಕೆ?
ಅಕ್ಟೋಬರ್ 29 ಮಂಗಳವಾರ ಬಂದಿದೆ, ಸಾಮಾನ್ಯವಾಗಿ ಮಂಗಳವಾರ ಗಾಡಿ ಖರೀದಿ ಮಾಡಲ್ಲ, ಹಾಗಾಗಿ ಇದೇ ಧನ ತ್ರಯೋದಶಿ ಸಮಯದೊಖಗೆ ಅಕ್ಟೋಬರ್ 30 ಬುಧವಾರದಂದು ಗಾಡಿ ಖರೀದಿಸಬಹುದು.
ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ ಮತ್ತು ಶನಿವಾರ ಕಾರು, ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡುವುದಿಲ್ಲ.
ದೀಪಾವಳಿಗೆ ಗಾಡಿ ಪೂಜೆ
ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ಪೂಜೆಯ ದಿನ ಗಾಡಿಗೆ ಕೂಡ ಪೂಜೆ ಸಲ್ಲಿಸಲಾಗುವುದು. ಗಾಡಿಯನ್ನು ಕೂಡ ನಾವು ಸಂಪತ್ತು ಎಂದು ಪರಿಗಣಿಸುತ್ತೇವೆ, ಹಾಗಾಗಿ ಶುಭ ಸಮಯದಲ್ಲಿ ಗಾಡಿಗೂ ಪೂಜೆ ಸಲ್ಲಿಸುತ್ತೇವೆ, ಇದರಿಂದ ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ.
ಯಾವೆಲ್ಲಾ ಹಬ್ಬದ ಸಮಯದಲ್ಲಿ ಗಾಡಿ ಖರೀದಿ ಜೋರಾಗಿ ಇರುತ್ತದೆ
ಅಕ್ಷಯ ತೃತೀಯ: ಅಕ್ಷಯ ತೃತೀಯ ದಿನ ಗಾಡಿ ಖರೀದಿ ತುಂಬಾ ಶುಭ ಎಂದು ಪರಿಗಣಿಸಲಾಗಿದೆ, ಹಾಗಾಗಿ ವರ್ಷದ ಎಲ್ಲಾ ದಿನಗಳಿಗಿಂತ ಈ ದಿನದಂದು ಗಾಡಿ ಸೇಲ್ ಜೋರಾಗಿ ಇರುತ್ತದೆ. ಈ ದಿನ ಮನೆಗೆ ಗಾಡಿ, ಚಿನ್ನ, ಬೆಳ್ಳಿ ಅಂತ ವಸ್ತುಗಳನ್ನು ಖರೀಸಲಾಗುವುದು, ಇದರಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆಯಿದೆ.
ವಸಂತ ಪಂಚಮಿ:ಹೊಸ ಋತುವಿನ ಆರಂಭ, ಈ ದಿನ ಕೂಡ ಗಾಡಿ ಖರೀದಿಗೆ ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.
ದಸರಾ: ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತ ದಸರಾ. ಈ ದಿನ ಗಾಡಿ ಖರೀದಿ ಮಾಡಿದರೆ ಬದುಕಿನಲ್ಲಿ ಯಶಸ್ಸು ದೊರೆಯಲಿದೆ ಎಂದು ಹೇಳಲಾಗುವುದು.
ದೀಪಾವಳಿ: ದೀಪಾವಳಿಯ ಧನ ತ್ರಯೋದಶಿ ಕೂಡ ವಾಹನ ಖರೀದಿಗೆ ಅತ್ಯಂತ ಶುಭವಾಗಿದೆ.
ದೀಪಾವಳಿಯಂದು ಲಕ್ಷ್ಮಿ ಪೂಜೆ
ದೀಪಾವಳಿಗೆ ಮನೆಯನ್ನು ಸ್ವಚ್ಛ ಮಾಡಿ ಅಲಂಕರಿಸಲಾಗುವುದು. ಈ ವರ್ಷ ಲಕ್ಷ್ಮಿ ಪೂಜೆಯನ್ನು ನವೆಂಬರ್ 1ಕ್ಕೆ ಆಚರಿಸಲಾಗುವುದು. ಲಕ್ಷ್ಮಿಯನ್ನು ಆಹ್ವಾನಿ ಕಲಶ ಪ್ರತಿಷ್ಠಾಪಿಸಿ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು. ಹಣ, ದವಸ ಧಾನ್ಯಗಳು, ವೀಳ್ಯೆದೆಲೆ, ಏಲಕ್ಕಿ ಈ ವಸ್ತುಗಳನ್ನು ಕಲಶದೊಳಗೆ ಹಾಕಲಾಗುವುದು.
ಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ಬಳಿಕ ಗಾಡಿಯನ್ನು ಅಲಂಕರಿಸಿ ಪೂಜೆಯನ್ನು ಸಲ್ಲಿಸಲಾಗುವುದು.
ದೀಪಾವಳಿ: ಕತ್ತಲನ್ನು ಹೋಗಲಾಡಿಸಿ ಬೆಳಕು ಪ್ರಕಾಶ ಹರಡುವಂತೆ ನಮ್ಮ ಬದುಕು ಕೂಡ ಪ್ರಕಾಶದಿಂದ ಕೂಡಿರಲಿ, ಕೆಡಕು, ದುಃಖ ದೂರಾಗಿ ಅಲ್ಲಿ ಖುಷಿ ಮತ್ತು ಒಳ್ಳೆಯತನ ತುಂಬಲಿ, ಈ ದೀಪಾವಳಿ ಎಲ್ಲಾ ಜನರ ಬಾಳಲ್ಲಿ ಹೊಸ ಬೆಳಕು ತುಂಬಲಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
