ಈ ವರ್ಷ ದೀಪಾವಳಿ 31ಕ್ಕಾ ಅಥವಾ ನವೆಂಬರ್ 1ಕ್ಕಾ? ಯಾವ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು?

ದೀಪಗಳ ಹಬ್ಬ ದೀಪಾವಳಿ, ದೀಪಗಳ ಪ್ರಭೆಯಲ್ಲಿ ನಾವೆಲ್ಲಾ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಈ ದೀಪಾವಳಿ ಹಬ್ಬ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ದೇಶದೆಲ್ಲಡೆ ಆಚರಿಸಲಾಗುವುದು. 5 ದಿನಗಳ ಹಬ್ಬದ ಸಡಗರ ದೀಪಾವಳಿ. ದೀಪಾವಳಿಗೆ ಸಿದ್ಧತೆ ಈಗಾಗಲೇ ಶುರುವಾಗಿರಬಹುದು ಅಲ್ವಾ?

ಈ ವರ್ಷ ದೀಪಾವಳಿ ಹಬ್ಬವನ್ನು ಯಾವಾಗ ಆಚರಿಸಲಾಗುವುದು? ಅಕ್ಟೋಬರ್ 31ಕ್ಕೆ ಎಂದು ಕೆಲವರು ಹೇಳಿದರೆ ಇಲ್ಲಾ ನವೆಂಬರ್ 1ಕ್ಕೆ ದೀಪಾವಳಿ ಎಂದು ಹೇಳುತ್ತಿದ್ದಾರೆ. ಆದರೆ ಪಂಚಾಂಗದ ಪ್ರಕಾರ ದೀಪಾವಳಿ ಆಚರಿಸಲು ನಿಖರ ದಿನ ಯಾವುದು ಎಂದು ನೋಡೋಣ ಬನ್ನಿ:

Deepavali 2024

ಜ್ಯೋತಿಷ್ಯ ಪ್ರಕಾರ ದೀಪಾವಳಿ ಆಚರಿಸಲು ಸೂಕ್ತ ದಿನವಾದ ದಿನ ಯಾವಾಗ ಎಂದು ನೋಡೋಣ ಬನ್ನಿ:
ಕಾರ್ತಿಕ ಮಾಸದ ಅಮವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುವುದು. ಈ ದಿನ ಪ್ರದೋಷ ಕಾಲದಿಂದ ಮಧ್ಯರಾತ್ರಿಯವರಿಗೆ ದೀಪಾವಳಿಯನ್ನು ಸಂಭ್ರಮಿಸಲಾಗುವುದು. ನಿಶಿತ್‌ ಕಾಲ ಲಕ್ಷ್ಮಿ ಪೂಜೆಗೆ ಸೂಕ್ತ ಎಂದು ಹೇಳಲಾಗುವುದು.

ಈ ವರ್ಷ ಅಮವಾಸ್ಯೆ ತಿಥಿ ಅಕ್ಟೋಬರ್‌ 31ಕ್ಕೆ ಶುರುವಾಗಲಿದೆ ನವೆಂಬರ್ 1 ಸಂಜೆ 06:16ಕ್ಕೆ ಕೊನೆಯಾಗಲಿದೆ, ಹಾಗಾಗಿ ಉದಯ ತಿಥಿಯ ಪ್ರಕಾರ ನವೆಂಬರ್‌ 1ಕ್ಕೆ ದೀಪಾವಳಿ ಆಚರಿಸಲಾಗುವುದು.

ಆದರೆ ನವೆಂಬರ್ 1ಕ್ಕೆ ಸಂಜೆಯೇ ಅಮವಾಸ್ಯೆ ತಿಥಿ ಮುಕ್ತಾಯವಾಗುವುದರಿಂದ ಅಕ್ಟೋಬರ್‌ 31ಕ್ಕೆ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಆಚರಿಸಲಾಗುವುದು. ಲಕ್ಷ್ಮಿ ಪೂಜೆಯನ್ನು ಅಕ್ಟೋಬರ್‌ 31ಕ್ಕೆ ಮಾಡಬಹುದು ಎಂದು ಕೂಡ ಕೆಲವರು ಹೇಳುತ್ತಿರುತ್ತಾರೆ. ಅಕ್ಟೋಬರ್ 31ಕ್ಕೆ ಮಧ್ಯಾಹ್ನ 03: 25ರ ನಂತರ ನೀವು ಲಕ್ಷ್ಮಿ ಪೂಜೆಗೆ ಸಿದ್ಧತೆ ಮಾಡಬಹುದು.

ಅಕ್ಟೋಬರ್ 31ರಂದು ಲಕ್ಷ್ಮಿ ಪೂಜೆಗೆ ಶುಭ ಸಮಯ

ಅಕ್ಟೋಬರ್ 31ರಂದು ಲಕ್ಷ್ಮಿ ಪೂಜೆ ಮಾಡಲು ಶುಭ ಸಮಯ
ಸಂಜೆ 05:36ರಿಂದ 08:11ರವರೆ ಇದೆ, ವೃಷಭ ಲಗ್ನದಲ್ಲಿ ಪೂಜೆಯನ್ನು ಸಲ್ಲಿಸಲಾಗುವುದು.
ಅದರಲ್ಲಿ ನೀವು ಸ್ವಲ್ಪ ಮೊದಲು ಪೂಜೆ ಮಾಡಲು ಬಯಸುವುದಾದರೆ ಸಂಜೆ 04:13ರಿಂದ 5:36 ಈ ಸಮಯದಲ್ಲಿಯೂ ಮಾಡಬಹುದು.

ಮಧ್ಯರಾತ್ರಿಯಲ್ಲಿ 12:04ರಿಂದ 1:42 ಈ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಬಹುದು. ಲಕ್ಷ್ಮಿ ಪೂಜೆ ಮಂಗಳವಾರ ಮಾಡಿದರೆ ಒಳ್ಳೆಯದು, ಹಾಗಾಗಿ ಹೆಚ್ಚಿನವರು ಮಂಗಳವಾರದ ಮುಹೂರ್ತದಲ್ಲಿಯೇ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.

ದೀಪಾವಳಿಯಂದು ನಿಶಿತ್‌ ಅವಧಿ

ದೀಪಾವಳಿಯಂದು ನೀವು ನಿಶಿತ್ ಸಮಯದಲ್ಲಿ ಪೂಜೆ ಮಾಡಲು ಬಸಯವುದಾದರೆ ರಾತ್ರಿ 11:39ರಿಂದ 12:31ರವರೆಗೆ ಸಮಯವಿದೆ. ಸುಮಾರು 52 ನಿಮಿಷ ನಿಶಿತ್ ಅವಧಿಯಿದೆ.

ರಾತ್ರಿ ಬೇಡ ಸಂಜೆ ಲಕ್ಷ್ಮಿ ಪೂಜೆ ಮಾಡುತ್ತೇನೆ ಎನ್ನುವವರು ಸಂಜೆ 06:25ರಿಂದ 07:13ರವರೆಗೆ ಲಕ್ಷ್ಮಿಗೆ ಪೂಜೆ ಸಲ್ಲಿಸಲು ಸಮಯವಿದೆ.


ದೀಪಾವಳಿಯಂದು ಲಕ್ಷ್ಮಿ ಪೂಜೆಯ ವಿಶೇಷತೆಯೇನು?

ದೀಪಾವಳಿ ಹಬ್ಬಕ್ಕೆ ಶುಭ ಕೋರುವಶಗ ಈ ದೀಪಾವಳಿ ಸಂತೋಷ, ಸಮೃದ್ಧಿ ತಂಬಲಿ ಎಂದು ಹಾರೈಸುತ್ತೇವೆ. ಅಮವಾಸ್ಯೆಯ ಕತ್ತಲಿನಲ್ಲಿ ದೀಪಗಳನ್ನು ಹಚ್ಚಿಟ್ಟಾಗ ಕತ್ತಲು ದೂರಾಗುವಂತೆ ಬದುಕಿನಲ್ಲಿನ ಎಲ್ಲಾ ಕಷ್ಟಗಳು ದೂರಾಗಲಿ, ಸಂತೋಷ, ಸಮೃದ್ಧಿ ಹೆಚ್ಚಾಗಲಿ ಎಂಬ ಆಶಯ ದೀಪಾವಳಿ ಆಚರಣೆಯ ಹಿಂದಿದೆ.

ಸಂಪತ್ತಿನ ದೇವತೆ ಲಕ್ಷ್ಮಿ,ಈ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ. ಹಾಗಾಗಿ ದೀಪಾವಳಿಗೆ ಲಕ್ಷ್ಮಿ ಪೂಜೆಗೆ ತುಂಬಾನೇ ಮಹತ್ವವಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Diwali 2024: When Is Celebrated 31 October Or 1st November , Auspicious Time For Laxmi Puja

When is deepavali? 31st October or November 1st is best to do laxmi puja, read on..
Story first published: Tuesday, October 22, 2024, 15:16 [IST]
X
Desktop Bottom Promotion