Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಖ್ಯಾಶಾಸ್ತ್ರದ ಪ್ರಕಾರ ಯಾವ ದಿನ ಹುಟ್ಟಿದವರಿಗೆ ಈ ದೀಪಾವಳಿ ಅದೃಷ್ಟ ತರಲಿದೆ..!!
ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕ ಪ್ರಕಾರವಾಗಿ ಅವರ ಭವಿಷ್ಯ ನಿರ್ಧಾರವಾಗುತ್ತದೆ. ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳು, ವಿಚಾರಗಳಿಗೂ ನಿಮ್ಮ ಜನ್ಮದಿನಾಂಕ ಹಾಗೂ ಗ್ರಹಗತಿಗಳ ನಡುವೆ ನೇರ ಸಂಬಂಧವಿದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಯಾವುದೇ ಮಾಸವಾಗಿರಲಿ ಯಾವ ದಿನಾಂಕದಂದು ಜನಿಸಿದರೆ ಯಾವುದು ನಿಮ್ಮ ಜನ್ಮ ಸಂಖ್ಯೆ ಎಂದು ಹೇಳಬಹುದು, ಉದಾಹರಣೆಗೆ 18ನೇ ತಾರೀಕಿಗೆ ಜನಿಸಿದ್ದರೆ 8+1=9. ಅಂದರೆ ನಿಮ್ಮ ಜನ್ಮ ಸಂಖ್ಯೆ 9 ಎಂದಾಗುತ್ತದೆ. ಹಾಗೆ ದೊಡ್ಡ ಸಂಖ್ಯೆಯಾಗಿರುವ 29ರಂದು ನೀವು ಜನಿಸಿದರೆ 2+9=11 1+1=2 ಎಂದಾಗುತ್ತದೆ.
ಈ ಸಂಖ್ಯೆಯ ಅನುಸಾರವಾಗಿ ಈ ದೀಪಾವಳಿಯಲ್ಲಿ ಯಾವ ದಿನದಂದು ಜನಿಸಿದ ಮಂದಿಯ ಭವಿಷ್ಯದಲ್ಲಿ ಏನಿದೆ? ಯಾರಿಗೆ ಈ ದೀಪಾವಳಿ ಶುಭ ತರಲಿದೆ. ಯಾರಿಗೆಲ್ಲಾ ಲಾಭದಾಯಕ ಎಂಬ ಸೂಚನೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಸಂಖ್ಯೆ 2 (ಹುಟ್ಟಿದ ದಿನಾಂಕ 2, 11, 20, 29)
ನೀವು ಯಾವುದೇ ತಿಂಗಳಲ್ಲಿ ಈ ದಿನದಂದು ಹುಟ್ಟಿದ್ದರೆ ನಿಮ್ಮ ಸಂಖ್ಯೆ 2 ಆಗಿದ್ದರೆ ದೀಪಾವಳಿಯಲ್ಲಿ ನಿಮ್ಮ ಅದೃಷ್ಟ ಬದಲಾಗಲಿದೆ. ಕೆಲಸ ಬದಲಿಸುವ ಕನಸು ಹೊತ್ತಿರುವವರಿಗೆ ಈ ಸಮಯ ಅದೃಷ್ಟವನ್ನೇ ತರಲಿದೆ. ಹಾಗೆ ನಿಮ್ಮ ಮನದಲ್ಲಿ ನೆನೆದು ದೀಪಾವಳಿಯಲ್ಲಿ ಮಾಡಿದ ಪೂಜೆಯಿಂದ ನಿಮ್ಮ ಕನಸು ಈಡೇರುವ ಸಾಧ್ಯತೆ ಇರಲಿದೆ. ಬಹುದಿನಗಳ ಬೇಡಿಕೆಗಳು ಕಣ್ಣ ಮುಂದೆ ಬರುವ ಸಾಧ್ಯತೆಗಳು ಹೆಚ್ಚಿವೆ. ನಿರೂದ್ಯೋಗಗಳಿಗೆ ಉದ್ಯೋಗ ಸಿಗುವ ಸಂಭವ ಹಾಗೆ ಅವಿವಾಹಿತರಿಗೂ ಶುಭ ಸುದ್ದಿಯ ಕಾಲ ಸನ್ನಿಹಿತವಾಗಲಿದೆ.
ಸಂಖ್ಯೆ 3 (ಹುಟ್ಟಿದ ದಿನಾಂಕ 3, 12, 21, 30)
ನೀವು ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದ ಜನರಲ್ಲಿ ಈ ದೀಪಾವಳಿಯೂ ಅದ್ಭುತವನ್ನೇ ಸೃಷ್ಟಿಸಲಿದೆ. ಹಬ್ಬದಲ್ಲಿ ನಿಮ್ಮ ಆದಾಯ ದ್ವಿಗುಣ ಆಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಲ್ಲಿ ಹೊಸ ಆದಾರ ಹರಿದು ಬರಲಿದೆ. ಹಾಗೆ ನಿಮ್ಮ ವ್ಯವಹಾರಗಳು ನೀವು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚು ಲಾಭ ತರಲಿದೆ.
ಸಂಖ್ಯೆ 6 ( ಹುಟ್ಟಿದ ದಿನಾಂಕ 6, 15, 24)
ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದವರಿಗೆ ಈ ದೀಪಾವಳಿಯಲ್ಲಿ ಅದ್ಭುತ ಪ್ರಯೋಜನ ಪಡೆಯಲಿದ್ದಾರೆ. ಉದ್ಯೋಗದಲ್ಲಿ ಅವರಿಗೆ ಯಶಸ್ಸು, ಕುಟುಂಬದಲ್ಲಿ ಶಾಂತಿ, ಹೊಸ ವಸ್ತು ಖರೀದಿಯ ಲಾಭವಿದೆ. ಅವರ ಆರೋಗ್ಯ ಚೇತರಿಕೆ ಕಾಣಲಿದೆ. ಎಷ್ಟು ದುಡಿದರು ಹಣ ಉಳಿಯುವುದಿಲ್ಲ ಎಂಬ ದೂರು ಇದ್ದರೆ ನಿವಾರಣೆ ಸಂಭವವಿದೆ.
ಸಂಖ್ಯೆ 7 ( ಹುಟ್ಟಿದ ದಿನಾಂಕ 7, 16, 25)
ನೀವು ಯಾವುದೇ ತಿಂಗಳಿನ 7, 16, 25ನೇ ತಾರೀಕಿನಲ್ಲಿ ಜನಿಸಿದ್ದರೆ ನಿಮ್ಮ ಸಂಖ್ಯೆ 7 ಆಗಿರಲಿದೆ. ಈ ಸಂಖ್ಯೆ ಹೊಂದಿರುವ ಮಂದಿ ದೀಪಾವಳಿಯಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತಾರೆ. ಅವರು ಯಾವುದೇ ಕ್ಷೇತ್ರದಲ್ಲಿರಲಿ ಮೆಚ್ಚುಗೆ, ಕೀರ್ತಿ, ಯಶಸ್ಸು ಪಡೆಯುವುದು ಖಚಿತ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯದ ದಿನಗಳು, ಹೆಚ್ಚು ಖರ್ಚಿನ ಬಗ್ಗೆ ತಲೆ ಕೆಡಿಸಿಕೊಂಡರೂ ಹಬ್ಬದ ಬಳಿಕ ಯಥಾಸ್ಥಿತಿಗೆ ಬರಲಿದ್ದೀರಿ. ಸುಧಾರಣೆಯ ದಿನಗಳು ಮುಂದೆ ಕಾದಿವೆ.
ಸಂಖ್ಯೆ 8 (ಹುಟ್ಟಿದ ದಿನಾಂಕ 8, 17, 26)
ನೀವು ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಜನಿಸಿದ್ದರೆ ನಿಮ್ಮ ಅದೃಷ್ಟವೇ ಬದಲಾಗುವ ಸಾಧ್ಯತೆ ಇದೆ. ನಿಮ್ಮ ಧನಲಾಭದ ನಿರೀಕ್ಷೆಯಲ್ಲಿದ್ದರೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ವಿವಾಹಿತರಿಗೆ ಒಳ್ಳೆಯ ಬೆಳವಣಿಗೆ ಕಾಣಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
