Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ, ಬುಧ ಸೇರಿ 5 ಗ್ರಹಗಳ ಸ್ಥಾನಪಲ್ಲಟ: ಈ 3 ರಾಶಿಯವರ ಅದೃಷ್ಟ ಬದಲಾಗುತ್ತೆ..!!
ನವೆಂಬರ್ ತಿಂಗಳಿನಲ್ಲಿ ಸೂರ್ಯ ಮತ್ತು ಶನಿ ಗ್ರಹದ ಜೊತೆಗೆ ಬುಧ, ಗುರು, ಮಂಗಳನ ಸಂಚಾರದಲ್ಲಿಯೂ ಬದಲಾವಣೆಯಾಗುತ್ತಿದೆ. ಹೀಗಾಗಿ ಹಲವು ರಾಶಿಗಳಲ್ಲಿ ಬದಲಾವಣೆಯಾಗುತ್ತಿದ್ದು ಕೆಲವು ರಾಶಿಗಳಿಗೆ ಅದೃಷ್ಟ ಖುಲಾಯಿಸಲಿದೆ. ನವೆಂಬರ್‌ನ ಮೊದಲ ವಾರದಲ್ಲಿ ಈ ಗ್ರಹಗಳ ಚಲನೆಗಳು ನಕ್ಷತ್ರಗಳಿಗೆ ಅನುಸಾರವಾಗಿ ಬದಲಾಗಲಿದೆ. ಹೀಗಾಗಿ ನಿಮ್ಮ ರಾಶಿಗೂ ಅದೃಷ್ಟ ತರಲಿದ್ಯಾ ಎಂಬುದನ್ನು ನಾವು ತಿಳಿದುಕೊಳ್ಳೋಣ.
ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ ಆದ್ರೆ ನವೆಂಬರ್‌ನಲ್ಲಿನ ಗ್ರಹ ಸಂಚಾರವು ಈ ರಾಶಿಗಳಿಗೆ ಅದೃಷ್ಟವನ್ನ ತರಲಿದೆಯಂತೆ. ಹಾಗಾದ್ರೆ ಯಾವ ರಾಶಿಯವರಿಗೆ ಶುಭವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಶುಕ್ರ ಗ್ರಹವು ಇದೆ ನವೆಂಬರ್ 7ರಂದು ಧನು ರಾಶಿಗೆ ಸಂಚರಿಸಲಿದೆ. ನವೆಂಬರ್ 15ರಂದು ಶನಿಯು ಕುಂಭ ರಾಶಿಗೆ ಸಂಚರಿಸಲಿದೆ. ಹಾಗೆಯೇ ನವೆಂಬರ್ 16ರಂದು ಸೂರ್ಯ ವೃಶ್ಚಿಕ ರಾಶಿಗೆ ಚಲಿಸಲಿದ್ದಾನೆ. ಇದೆ ನವೆಂಬರ್ 26ರಂದು ಬುಧ ಗ್ರಹವು ವೃಶ್ಚಿಕ ರಾಶಿಗೆ ಆಗಮಿಸಿ ನಂತರ ಇದೇ ರಾಶಿಯಲ್ಲಿ ಅಸ್ತಮಿಸುತ್ತಾನೆ.
ಇನ್ನು ಗುರು ಗ್ರಹವೂ ಇದೇ ನವೆಂಬರ್ 28ರಂದು ಮೃಗಶಿರಾ ನಕ್ಷತ್ರದಿಂದ ದೂರ ಸರಿಯುತ್ತಾನೆ. ಅಲ್ಲಿಂದ ಗುರು ರೋಹಿಣಿ ನಕ್ಷತ್ರಕ್ಕೆ ಸಂಚರಿಸುತ್ತಾನೆ. ಇದರಿಂದ ಮೇಷ ರಾಶಿ, ವೃಶ್ಚಿಕ, ಧನು ಹಾಗೂ ಮಿಥುನ ರಾಶಿ ಜನರಿಗೆ ಒಳಿತಾಗಲಿದೆ. ಅವರಿಗೆ ಅದೃಷ್ಟ ಹುಡುಕಿಕೊಂಡು ಬರಲಿದೆ ಎಂದು ಹೇಳಲಾಗಿದೆ. ನವೆಂಬರ್ 26 ರಂದು ಬುಧನು ವೃಶ್ಚಿಕ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. ಇದರಿಂದಾಗಿ ವೃಶ್ಚಿಕ ರಾಶಿಯವರಿಗೆ ಶುಭ ತರಲಿದೆ. ಈ ರಾಶಿಯವರಿಗೆ ಅದೃಷ್ಟ ತರುವುದು ಖಚಿತ. ಆದ್ರೆ ಕರ್ಕಾಟಕ, ಕನ್ಯಾ, ಧನು, ಮಕರ ರಾಶಿಯವರಿಗೆ ಈ ಚಲನೆಯಿಂದ ಸಂಷಕ್ಟ ಎದುರಾಗಲಿದೆ.
ಹಾಗೆ ನವೆಂಬರ್ 16 ರಂದು ಸೂರ್ಯ ವೃಶ್ಚಿಕ ರಾಶಿಗೆ ಸಂಚರಿಸುತ್ತಾನೆ. ಈ ಮೊದಲು ಸೂರ್ಯ ತುಲಾ ರಾಶಿಯಲ್ಲಿರುತ್ತಾನೆ. ಅಲ್ಲಿಂದ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ ಇದರಿಂದ ಹಲವು ರಾಶಿಯವರಿಗೆ ಅದೃಷ್ಟ ಬರಲಿದೆ ಎನ್ನಲಾಗಿದೆ.
ಕರ್ಕ ರಾಶಿ
ಕರ್ಕಾಟಕ ಅಥವಾ ಕರ್ಕ ರಾಶಿಯವರಿಗೆ ಈ ಗ್ರಹಗಳ ಸಂಚಾರವು ಅದೃಷ್ಟ ತರಲಿದೆ. ಅವರು ಅಂದುಕೊಂಡಿರುವಂತೆ ಎಲ್ಲಾ ವಿಚಾರಗಳು, ಬೇಡಿಕೆಗಳು, ಇಷ್ಟಾರ್ಥಗಳು ಈಡೇರಲಿದೆ. ಬಹಳ ಕಾಲದಿಂದ ಹಾಕಿದ್ದ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಈಗ ಆಕಾಂಕ್ಷೆಯಂತೆ ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಈ ತಿಂಗಳಲ್ಲಿ ಶುಭ ಸುದ್ದಿ ಕೇಳುವ ಸಂಭವವಿದೆ.
ಸಿಂಹ ರಾಶಿ
ಈ ಗ್ರಹಗಳ ಬದಲಾವಣೆಯಿಂದಾಗಿ ಸಿಂಹ ರಾಶಿ ಜನರಿಗೆ ಅತ್ಯಂತ ಲಾಭದಾಯಕವಾಗಲಿದೆ. ನೀವು ಹೂಡಿಕೆ ಮಾಡಿದ್ದ ಹಣ ದುಪ್ಪಟ್ಟು ಲಾಭ ನೀಡುವ ನಿರೀಕ್ಷೆ ಇದೆ. ಹಾಗೆ ಆರ್ಥಿಕವಾಗಿ ನೀವು ಸದೃಢರಾಗಿರುತ್ತೀರಿ. ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ಕೌಶಕ್ಯ ನಿಮ್ಮ ಕೈಹಿಡಿಯಲಿದೆ. ಹಾಗೆ ನಿಮಗೆ ಮತ್ತಷ್ಟು ಕೀರ್ತಿ ತರಲಿದೆ. ಹೊಸ ವಾಹನ ಕೊಳ್ಳುವ ಆಲೋಚನೆಗಳು ಈ ತಿಂಗಳಿನಲ್ಲಿ ಸಾಕಾರವಾಗುವ ಸಾಧ್ಯತೆ ಇದೆ. ಹಾಗೆ ಹೊಸ ವಸ್ತು ನೀವು ಖರೀದಿಸಬಹುದು.
ಧನು ರಾಶಿ
ಧನು ರಾಶಿಯ ಮಂದಿಗೆ ಈ ತಿಂಗಳು ಹೆಚ್ಚು ಲಾಭದಾಯಕವಾಗಿ ಬದಲಾಗಲಿದೆ. ಅವರು ಬಯಸಿದ ವ್ಯಾಪಾರ, ಫಲಿತಾಂಶ ಪಡೆಯುತ್ತಾರೆ. ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಗಮನವಿಡುವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹಣಕಾಸು ವ್ಯವಹಾರಗಳು ನೀವು ಅಂದುಕೊಂಡಂತೆ ಇರಲಿದೆ. ಈ ತಿಂಗಳಿನಲ್ಲಿ ಶುಭ ಕಾರ್ಯದ ನಿಮಿತ್ತ ದೂರ ಪ್ರಯಾಣದ ಸೂಚನೆ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications