Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಹುಟ್ಟಿದ ತಿಂಗಳು ಯಾವುದು..!? ನಾವು ನಿಮ್ಮ ಗುಣಗಳ ಹೇಳುತ್ತೇವೆ ನೋಡಿ..!
ನಾವು ಹುಟ್ಟಿದ ದಿನವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ತಿಳಿದಿದ್ದೇವೆ, ನಾವು ಯಾವ ನಕ್ಷತ್ರ, ರಾಶಿ, ಗೋತ್ರದಲ್ಲಿ ಜನಿಸಿದ್ದೇವೆ ಎಂಬುದು ನಾವು ಸಾಯುವವರೆಗೂ ನಮ್ಮ ನಡುವೆ ಜೀವಿಸುತ್ತವೆ. ಇದು ನಮ್ಮ ನಿತ್ಯದ ಆಗುಹೋಗುಗಳಿಂದ ನಮ್ಮ ಜೀವನದ ಪ್ರಮುಖ ಘಟ್ಟಗಳಿಗೂ ಸಂಬಂಧಿಸಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯ.
ಏಕೆಂದರೆ ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ ಹೀಗೆ ಎಲ್ಲವು ಇದರಿಂದ ನಿರ್ಧಾರವಾಗುತ್ತದೆ ಎಂದು ಹೇಳುತ್ತದೆ. ಹಾಗಾದ್ರೆ ನಿಮ್ಮ ಜನ್ಮ ತಿಂಗಳು ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ. ನೀವು ಹುಟ್ಟಿದ ತಿಂಗಳಿಗೂ ನಿಮ್ಮ ಗುಣಗಳಿಗೂ ಇರುವ ಸಂಬಂಧವೇನು? ನೀವು ಯಾವ ಗುಪ್ತ ಗುಣಗಳನ್ನು ಹೊಂದಿದ್ದೀರಿ ಎಂಬುದನ್ನು ಇಂದು ತಿಳಿದುಕೊಳ್ಳಿ.

ಜನವರಿ
ವರ್ಷದ ಮೊದಲ ತಿಂಗಳಾಗಿರುವ ಜನವರಿಯಲ್ಲ ನೀವು ಜನಿಸಿದ್ದರೆ ನೀವು ಯಾವುದಕ್ಕೂ ಹೆದರಿಕೊಳ್ಳದ ಗುಣಗಳ ಹೊಂದಿರುವವರಂತೆ. ಹಾಗೆ ನೀವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು ಬೇರೆಯರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲವಂತೆ. ನಾಯಕತ್ವ ಗುಣಗಳನ್ನು ನೀವು ಹೊಂದಿರುತ್ತೀರಿ. ಎಲ್ಲಾ ಹೋರಾಟಗಳಿಗೂ ನೀವು ಸಿದ್ಧರಿರುತ್ತೀರಿ.
ಫೆಬ್ರವರಿ
ನೀವು ಫೆಬ್ರವರಿ ತಿಂಗಳಲ್ಲಿ ಜನಿಸಿದ್ದರೆ ಸ್ವತಂತ್ರ ಜೀವನದ ಕನಸು ಕಾಣುವರಾಗಿರುತ್ತೀರಿ. ಸಾಹಸಮಯ ಜೀವನ ಇಷ್ಟಪಡುತ್ತೀರಿ. ನೀವು ಹೆಚ್ಚು ನಿಷ್ಠಾವಂತರು ಹಾಗೆ ನಿಮ್ಮನ್ನು ಇಷ್ಟ ಪಡುವವರನ್ನು ಕುಟುಂಬದವರ ಮೇಲೆ ಯಾವಾಗಲು ಕಾಳಜಿ ಹೊಂದಿರುತ್ತೀರಿ. ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲು ಯಶಸ್ಸು ಸಿಗುತ್ತಿರುತ್ತದೆ.
ಮಾರ್ಚ್
ನೀವು ಮಾರ್ಚ್‌ನಲ್ಲಿ ಜನಿಸಿದರೆ ನೀವು ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳ ಹೊಂದಿರುವ ಜನರಂತೆ. ಭಾವನೆಗಳಿಗೆ ಹೆಚ್ಚು ಒತ್ತು ನೀಡುವ ನೀವು ಎಲ್ಲರಿಗೂ ಒಳಿತು ಬಯಸುವ ಮಂದಿ ಆಗಿರುತ್ತೀರಿ. ಶಾಂತಿ ಪ್ರಿಯರು, ಸಹಾನುಭೂತಿ ಹೊಂದಿರುವವಾಗಿರುತ್ತೀರಿ.
ಏಪ್ರಿಲ್
ನೀವು ಏಪ್ರಿಲ್ ತಿಂಗಳಲ್ಲಿ ಜನಿಸಿದರೆ ನೀವು ತುಂಬಾನೆ ಬಲಶಾಲಿಗಳು, ಅಂದ್ರೆ ನೀವು ಮೇಲ್ನೋಟಕ್ಕೆ ಕಾಣುವುದಕ್ಕಿಂತ ತುಂಬಾನೆ ದೃಢಶಾಲಿಗಳು, ನಿಮ್ಮ ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೆ ಜಯಿಸುವ ಮನೋಬಾವದವರು. ನೀವು ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ನೀವು ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ಮಂದಿಯಾಗಿರುತ್ತೀರಿ.
ಮೇ
ನೀವು ಮೇ ತಿಂಗಳಲ್ಲಿ ಜನಿಸಿದರೆ ನಿಮಗೆ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ನಿಮಗೆ ಹೆಚ್ಚಿನ ಮಂದಿ ಸ್ನೇಹಿತರ ಬಳಗವೇ ಇರಲಿದೆ. ನೀವು ಯಾವಾಗಲು ಏನಾದರು ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು. ನೀವು ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಮಂದಿಯಾಗಿರುತ್ತೀರಿ.
ಜೂನ್
ನೀವು ಜೂನ್‌ನಲ್ಲಿ ಜನಿಸಿದರೆ ನೀವು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತೀರಿ. ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರು ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತೀರಿ. ಎಲ್ಲ ಸಮಯದಲ್ಲು ನೀವು ಧನಾತ್ಮಕ ವಿಚಾರಗಳ ಕುರಿತು ಯೋಚಿಸುತ್ತೀರಿ.
ಜುಲೈ
ನೀವು ಜುಲೈನಲ್ಲಿ ಜನಿಸಿದವರಾಗಿದ್ದರೆ ಬಹುಬೇಗ ಕೋಪಗೊಂಡರು ಅಷ್ಟೇ ಬೇಗ ಶಾಂತಿಯಿಂದ ಎಲ್ಲವನ್ನು ನಿಭಾಯಿಸುವ ಗುಣ ಹೊಂದಿರುವ ವ್ಯಕ್ತಿ. ನಿಮ್ಮ ಕುಟುಂಬಕ್ಕಾಗಿ ನೀವು ಯಾವ ರೀತಿಯ ಕಷ್ಟಗಳನ್ನು ಕೂಡ ಎದುರಿಸುವ ಮನಸ್ಸಿನವರು. ಬಹುಬೇಗ ಎಲ್ಲಾ ವಿಚಾರಗಳನ್ನು ಕಲಿಯುವವರು.
ಆಗಸ್ಟ್
ನೀವು ಆಗಸ್ಟ್‌ನಲ್ಲಿ ಜನಿಸಿದ್ದರೆ ನೀವು ಎಲ್ಲರನ್ನು ಪ್ರೀತಿಸುವ ಗುಣಗಳ ಹೊಂದಿರುವವರು. ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ಮಂದಿ. ನಿಮ್ಮಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಇರಲಿದೆ. ಹಿರಿಯರಿಗೆ, ಪ್ರೀತಿ ಪಾತ್ರರಲ್ಲಿ ನೀವು ವಿನಯದಿಂದ ನಡೆದುಕೊಳ್ಳುವ ಗುಣ ಹೊಂದಿದ್ದೀರಿ.
ಸೆಪ್ಟೆಂಬರ್
ನೀವು ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ್ದರೆ ನಿಮ್ಮ ಆಲೋಚನೆಗಳನ್ನು ನೀವು ದೃಢವಾಗಿ ನಂಬುವವರಾಗಿರುತ್ತೀರಿ, ಬೇರೆಯವರ ಮಾತಿಗಿಂತ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗಿರುತ್ತದೆ. ನೀವು ಮಾಡಲು ಕೆಲಸದಲ್ಲಿ ನಿಮಿಗೆ ನಂಬಿಕೆ ಇರಲಿದೆ. ನಿಮಗೆ ನಾಯಕತ್ವದ ಗುಣವಿರಲಿದೆ.
ಅಕ್ಟೋಬರ್
ನೀವು ಅಕ್ಟೋಬರ್‌ನಲ್ಲಿ ಜನಿಸಿದರೆ ನೀವು ಹೆಚ್ಚು ಪ್ರಮಾಣಿಕರು, ಬುದ್ಧಿವಂತರು, ನಿಮ್ಮ ಗುರಿ ಕಡೆಗೆ ನೀವು ಯಾವಾಗಲು ಯೋಚಿಸುವವರು. ನಿಮ್ಮೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ನೀವು ಯಾವಾಗಲು ಮುಂದಾಗುತ್ತೀರಿ. ಸಾಹಿತ್ಯ ಪ್ರೇಮಿಗಳಾಗಿರುತ್ತೀರಿ.
ನವೆಂಬರ್
ನವೆಂಬರ್‌ನಲ್ಲಿ ಜನಿಸಿದವರು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ ಇಟ್ಟವರು. ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟವರು. ಯಾರನ್ನಾದರು ನೀವು ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವವರು. ನಿಮ್ಮ ಕುಟುಂಬಕ್ಕಾಗಿ ನೀವು ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುವವರು.
ಡಿಸೆಂಬರ್
ನೀವು ಡಿಸೆಂಬರ್ ತಿಂಗಳಲ್ಲಿ ಜನಿಸಿದರೆ ನಿಮ್ಮ ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ ಬಗ್ಗೆ ನೀವು ಹೆಚ್ಚು ತಲೆ ಕೆಡೆಸಿಕೊಳ್ಳುವವರಲ್ಲ. ನೀವು ಯಾವುದೇ ವಿಚಾರಕ್ಕೆ ಮಾತನಾಡಲು, ಕೆಲಸ ಮಾಡಲು ಹಿಂಜರಿಯುವವರಲ್ಲ. ನಿಮ್ಮ ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಆದರು ತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿ ದೃಢ ಸಂಕಲ್ಪ ಮಾಡುವ ಗುಣ ಇರಲಿದೆ. ಬೇರೆಯವರಿಗೆ ನೀವು ಸಹಾಯ ಮಾಡಲು ಯಾವಾಗಲು ಮುಂದಿರುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅಥವಾ ವಿಚಾರವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


