Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Dina Bhavishya: ಯಾರಿಗೆ ಈ ಗುರುವಾರ ಶುಭಫಲ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 30 (30 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಲ್ಲಿ ವಿವಾಹಿತರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ನಿಮಗೆ ಗೌರವಗಳು ಸಿಗಬಹುದು ಮತ್ತು ನಿಮ್ಮ ಮಕ್ಕಳ ವಿಚಾರದಲ್ಲಿ ನೆಮ್ಮದಿ ಇರಲಿದೆ. ನೀವು ಕುಟುಂಬ ಸದಸ್ಯರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ವಾಹನಗಳ ಬಳಸುವಾಗ ಎಚ್ಚರಿಕೆ ವಹಿಸಿ.
ವೃಷಭ ರಾಶಿ
ಇಂದು ನೀವು ದಾನ ಕಾರ್ಯಗಳಲ್ಲಿ ತೊಡಗಬಹುದು. ಕೆಲಸದ ವಿಚಾರದಲ್ಲಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ದೈಹಿಕ ವಿಚಾರವಾಗಿ ನಿಮಗೆ ಅನಾರೋಗ್ಯ ಇರಬಹುದು. ಆರ್ಥಿಕ ವಿಚಾರದಲ್ಲಿ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳು ಪ್ರಯತ್ನಿಸಿ.

ಮಿಥುನ ರಾಶಿ
ಅದೃಷ್ಟದ ದೃಷ್ಟಿಕೋನದಿಂದ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ತುಂಬಾ ಆಸಕ್ತಿ ಹೊಂದಿರುತ್ತೀರಿ. ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬೇಕಾಗಬಹುದು ಹೀಗಾಗಿ ಆಯಾಸ ಕಾಡಬಹುದು. ನಿದ್ರೆ ಸಂಬಂಧಿತ ಸಮಸ್ಯೆ ಕಾಡಬಹುದು.
ಕರ್ಕಾಟಕ ರಾಶಿ
ಇಂದು ನಿಮ್ಮ ಭೌತಿಕ ಸೌಕರ್ಯಗಳ ಅನುಭವಿಸುವುದು ನೋಡಬಹುದು. ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಪ್ಪು ಮಾಡಬಹುದು. ಕೆಲಸದಲ್ಲಿ ನೀವು ಬಯಸುವ ಫಲಿತಾಂಶ ಅನುಭವಿಸಬಹುದು. ಉದ್ಯೋಗಿಗಳಿಗೆ ಒತ್ತಡದಾಯಕ ದಿನ.
ಸಿಂಹ ರಾಶಿ
ಇಂದು ನೀವು ಹೆಚ್ಚುತ್ತಿರುವ ವೆಚ್ಚಗಳ ಬಗ್ಗೆ ಗಮನ ಹರಿಸುವ ದಿನವಾಗಿರುತ್ತದೆ. ನಿಮ್ಮ ಹಿತ ಶತ್ರುಗಳ ಮೇಲೆ ನಿಗಾ ಇಡಬೇಕು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ಹಲವು ದಿನಗಳ ಅನಾರೋಗ್ಯ ಸಮಸ್ಯೆಯೊಂದು ಕಾಡಬಹುದು. ದಿನದ ಅಂತ್ಯದಲ್ಲಿ ಒತ್ತಡವೊಂದು ಕಾಡಬಹುದು.
ಕನ್ಯಾ ರಾಶಿ
ಇಂದು ಕನ್ಯಾ ರಾಶಿಯವರು ಹಣ ಗಳಿಸುವಂತಹ ದಿನ. ನಿಮ್ಮ ಆದಾಯ ಹೆಚ್ಚಾಗುವ ಹಲವು ಕೆಲಸ ಮಾಡುವಿರಿ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಚರ್ಚೆ ಇರಬಹುದು. ಪ್ರಯಾಣ ಮಾಡಬೇಕಾಗಿ ಬರಬಹುದು. ವಾಹನದಲ್ಲಿ ನಷ್ಟ ಸಂಭವ.
ತುಲಾ ರಾಶಿ
ಇಂದು ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದೆ. ವ್ಯವಹಾರ ಸಂಬಂಧವಾಗಿ ನಿಮ್ಮ ಹಲವು ಕೆಲಸಗಳಲ್ಲಿ ನಷ್ಟವಿದೆ. ದಿನದ ಅಂತ್ಯ ನಿರಾಸದಾಯಕವಾಗಬಹುದು. ಹಲವರಿಂದ ನಿಮಗೆ ಹಣಕಾಸು ವಿಚಾರದಲ್ಲಿ ಒತ್ತಡ ನೋಡಬಹುದು.
ವೃಶ್ಚಿಕ ರಾಶಿ
ಇಂದು ವೃಶ್ಚಿಕ ರಾಶಿಯವರಿಗೆ ಅನಾನುಕೂಲಗಳು ಇರಬಹುದು. ನಿಮ್ಮ ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಸಿಗದೆ ಇರಬಹುದು. ಆನಾರೋಗ್ಯ ಸಂಬಂಧವಾಗಿ ನಿಮ್ಮ ನಿರ್ಧಾರಗಳು ದೊಡ್ಡ ಯಶಸ್ಸು ತರುವುದಿಲ್ಲ. ಸಾಲ ಮಾಡಲು ಮುಂದಾಗಬಹುದು.
ಧನು ರಾಶಿ
ಇಂದು ನಿಮಗೆ ಕಾರ್ಯನಿರತ ದಿನವಾಗಿರುತ್ತದೆ. ನಿಮ್ಮ ಆದಾಯದ ಮೂಲದಲ್ಲಿ ಬದಲಾವಣೆ ನೋಡಬಹುದು. ಉದ್ಯೋಗ ಸಂಬಂಧಿತ ಕೆಲಸದಲ್ಲಿ ಅಚ್ಚರಿಯ ಬೆಳವಣಿಗೆಯೊಂದನ್ನು ನೋಡಬಹುದು.
ಮಕರ ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಸಂಗಾತಿಯು ನಿಮ್ಮ ಕೆಲಸದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಅಮೂಲ್ಯವಾದ ವಸ್ತುಗಳ ಕುರಿತು ಹೆಚ್ಚು ಜಾಗೃತೆ ವಹಿಸಿ.
ಕುಂಭ ರಾಶಿ
ಇಂದು ನಿಮಗೆ ಪ್ರಯೋಜನಕಾರಿ ದಿನವಾಗಿರುತ್ತದೆ. ನೀವು ಕೆಲವು ಪ್ರಭಾವಿ ಜನರನ್ನು ಭೇಟಿಯಾಗುತ್ತೀರಿ. ಆಪ್ತರಿಂದ ಬರಬೇಕಿದ್ದ ಹಣ ಮತ್ತೆ ನಿಧಾನವಾಗಬಹುದು. ರಾತ್ರಿ ಪ್ರಯಾಣಗಳ ತಪ್ಪಿಸುವುದು ಉತ್ತಮ. ಅನಿವಾರ್ಯ ಕಾರಣಕ್ಕೆ ಪ್ರಯಾಣ ಮಾಡಬೇಕಾಗಬಹುದು.
ಮೀನ ರಾಶಿ
ಆದಾಯ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನೀವು ಒಂದರ ನಂತರ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ನ್ಯಾಯಾಲಯ, ಬ್ಯಾಂಕ್ ಸಂಬಂಧಿತ ವಿಚಾರದಲ್ಲಿ ನಿಮಗೆ ಗೆಲುವು ಇರಲಿದೆ. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ನಿಮಗೆ ಕಹಿ ವಿಷಯಗಳು ಕೇಳಿ ಬರಬಹುದು.



Click it and Unblock the Notifications











