Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
Dina Bhavishya: ಅನಿರೀಕ್ಷಿತ ಧನಲಾಭದ ದಿನ
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 29 (29 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯಾತ್ಮಕ ದಿನ. ನಿಮ್ಮ ಹಣಕಾಸು ಸ್ಥಿತಿ ಮತ್ತಷ್ಟು ಹದಗೆಡಬಹುದು. ಯಾರಿಗಾದರು ಹಣ ನೀಡಬೇಕಾದರೆ ಎಚ್ಚರಿಕೆ ಇಡಿ. ಆಪ್ತರಿಂದ ಹಣ ಪಡೆಯುವ ನಿಮ್ಮ ಪ್ರಯತ್ನ ಈಡೇರದೆ ಮತ್ತಷ್ಟು ಸಮಸ್ಯೆ, ಒತ್ತಡ ಹೆಚ್ಚಾಗಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರಫಲ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ. ದಿನದ ಆರಂಭದಲ್ಲಿ ಒತ್ತಡ ಎದುರಿಸಬಹುದು. ಆದ್ರೆ ಅಂತ್ಯದಲ್ಲಿ ನಿರಾಳತೆ ಇದೆ. ವ್ಯಾಪಾರ ಮಾಡುವ ಮಂದಿಗೆ ಶುಭಗಳಿಗೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಹಲವು ವಿಚಾರಗಳು ಯಶಸ್ಸಿನತ್ತ ಸಾಗಲಿವೆ. ಪ್ರಯಾಣಗಳು ಲಾಭದಾಯಕವಾಗಲಿದೆ. ನಿಮ್ಮ ಹಲವು ಕೆಲಸಗಳನ್ನ ಸಮಯದೊಳಗೆ ಮುಗಿಸುತ್ತೀರಿ. ಪೂರ್ವ ನಿಗದಿತ ಕೆಲಸದಲ್ಲಿ ಶುಭವಿದೆ. ಹಣಕಾಸಿನ ವಿಚಾರ ಧನಾತ್ಮಕವಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಬಹುಮುಖ್ಯ ಕೆಲಸವೊಂದನ್ನು ಅಡ್ಡಿಗಳ ಕಾರಣಕ್ಕೆ ಅರ್ಧಕ್ಕೆ ನಿಲ್ಲಿಸಬಹುದು. ವಾಹನ ಸಂಬಂಧವಾಗಿ ದೊಡ್ಡ ಸಮಸ್ಯೆ ಎದುರಿಸಬಹುದು. ಗೃಹಿಣಿಯರಿಗೆ ಈ ದಿನ ಸವಾಲುಗಳಿವೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಉತ್ತಮ ದಿನ. ದೊಡ್ಡ ಸಮಸ್ಯೆಯನ್ನು ಕೂದಲೆಳೆ ಅಂತರದಿಂದ ಪಾರಾಗುತ್ತೀರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಸಾಲ ಮರುಪಾವತಿ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಇಂದು ಪ್ರಯಾಣಗಳಲ್ಲಿ ತೊಡಗಬೇಕಾಗುತ್ತದೆ. ನೀವು ಬಯಸಿದಂತಹ ಫಲಿತಾಂಶ ಸಿಗಬೇಕಾದರೆ ಮತ್ತಷ್ಟು ಶ್ರಮ ಅಗತ್ಯ. ನಿರುದ್ಯೋಗಿಗಳಿಗೆ ಹಣಕಾಸಿನ ಸಮಸ್ಯೆ ದೊಡ್ಡದಾಗಬಹುದು. ಮಕ್ಕಳ ಕುರಿತ ಚಿಂತೆಯೊಂದು ಕಾಡಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರು ಇಂದು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ದಾಂಪತ್ಯದಲ್ಲಿ ವೈಮನಸ್ಸುಗಳು ಮೂಡುವ ಸಾಧ್ಯತೆ ಇದೆ. ಯಾರಿಗಾದರು ನೀಡಿದ್ದ ವಸ್ತುಗಳು ನಮ್ಮ ಕೈಸೇರುವ ದಿನವಿದು. ಗೃಹಿಣಿಯರು ಆರೋಗ್ಯದ ಕಡೆ ಗಮನವಿಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಯಾರಿಗಾದರು ಹಣ ನೀಡುವ ಮುನ್ನ ಆಲೋಚಿಸಿ. ನಿಮ್ಮ ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿಡಿ. ವಾಹನ ಸಂಬಂಧಿ ಖರ್ಚುಗಳಿವೆ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ದೈನಂದಿನ ಕೆಲಸಗಳಲ್ಲಿ ಅಡ್ಡಿಗಳಿವೆ. ದೇವಾಲಯ ಭೇಟಿಯ ಸಾಧ್ಯತೆಗಳಿವೆ. ನಿಮ್ಮ ಹಣಕಾಸಿನ ವಿಚಾರವಾಗಿದ್ದ ಸಮಸ್ಯೆಯೊಂದು ಹಂಚಿಕೊಳ್ಳುವುದು ಪರಿಹಾರ ನೀಡಬಹುದು. ಬ್ಯಾಂಕಿಂಗ್ ವಿಚಾರವಾಗಿ, ಆಸ್ತಿ ಸಂಬಂಧಿ ವ್ಯವಹಾರದಲ್ಲಿ ಶುಭವಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನದಂದು ಸವಾಲುಗಳನ್ನು ಎದುರಿಸಬಹುದು. ಆಪ್ತ ಬಳಗದಲ್ಲಿ ಕಲಹಗಳು ಮೂಡಬಹುದು. ಪ್ರೀತಿ ಪಾತ್ರರಿಂದ ನೋವು ಅನುಭವಿಸಬಹುದು. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ಮತ್ತಷ್ಟು ತಡವಾಗಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಅನುಕೂಲಕರ ದಿನ. ಅನೇಕ ಕೆಲಸಗಳಿಗೆ ನೀವು ದೊಡ್ಡ ಹೆಜ್ಜೆ ಮುಂದಿಡಬಹುದು. ಯಾರಿಂದಾದರು ಹಣಪಡೆಯುವ ನಿಮ್ಮ ಬಯಕೆಯನ್ನು ಮುಂದೂಡುವುದು ಉತ್ತಮ. ಸ್ನೇಹಿತರಿಂದ ನಿಮಗೆ ಒತ್ತಡಗಳು ಬರಬಹುದು.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರವಾಗಿ ಇಂದು ಪ್ರಯಾಣದಲ್ಲಿ ತೊಡಗುವಿರಿ. ಯಾರಿಗಾದರು ಹಣ ನೀಡಿ ಕೈ ಸುಟ್ಟುಕೊಳ್ಳಬೇಡಿ. ಆಪ್ತರೊಬ್ಬರ ಭೇಟಿಯಾಗುವಿರಿ. ಪ್ರಯಾಣಗಳ ಮಾಡುವಾಗ ಎಚ್ಚರಿಕೆಯಿಂದ ಇರಿ. ಕುಟುಂಬದಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ.



Click it and Unblock the Notifications