Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
Dina Bhavishya: ಯಾರಿಗಿಂದು ಸವಾಲುಗಳಿಂದ ತುಂಬಿದ ದಿನ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 28 (28 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸವಾಲುಗಳ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅನೇಕ ಅಡ್ಡಿಗಳನ್ನು ನೋಡಬೇಕಾಗಬಹುದು. ನೀವು ಮಾಡುವ ಪ್ರಯಾಣವನ್ನು ಮತ್ತೆ ಮುಂದೂಡಬಹುದು. ಅಪಾಯಕಾರಿ ಕೆಲಸಗಳನ್ನು ಮಾಡುವವರು ಎಚ್ಚರಿಕೆ ವಹಿಸಬೇಕಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಇಂದು ಉತ್ತಮ ದಿನವಾಗುವುದನ್ನು ನೋಡಬಹುದು. ಹಲವರಲ್ಲಿ ಇಂದು ಕೆಲಸದತ್ತ ಗಮನ ಹರಿಸುವ ದಿನ, ನಿಮ್ಮ ವ್ಯವಹಾರದಲ್ಲಿನ ಅಡೆತಡೆ ನಿವಾರಣೆಗೆ ನೀವು ದೊಡ್ಡ ನಿರ್ಧಾರ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಹುದು. ವಾಹನ ಸಂಬಂಧವಾಗಿ ಇದ್ದ ಅಡ್ಡಿಯೊಂದು ನಿವಾರಣೆಯಾಗಲಿದೆ. ಗೃಹಿಣಿಯರಿಗೆ ಇಂದು ಶುಭ ಸುದ್ದಿ ಬರಲಿದೆ.
ಕರ್ಕ ರಾಶಿ
ನೀವಿಂದು ದೊಡ್ಡ ಮಟ್ಟದ ಕೆಲಸಗಳಲ್ಲಿ ಭಾಗಿಯಾಗಬಹುದು, ನಿಮ್ಮ ಹಲವು ಕೆಲಸವನ್ನು ಈ ದಿನ ಮಾಡಿ ಮುಗಿಸುತ್ತೀರಿ. ಆಪ್ತರಿಂದ ಸಹಾಯ ಪಡೆಯಬಹುದು. ಆಹಾರ ಸಂಬಂಧಿ ಖರ್ಚುಗಳಿವೆ.
ಸಿಂಹ ರಾಶಿ
ನಿಮಗೆ ಇಂದು ಹಣಕಾಸು ಸಂಬಂಧಿತ ವಿಚಾರವಾಗಿ ಒತ್ತಡ ಎದುರಿಸುವ ದಿನ. ಕೌಟುಂಬಿಕ ವಿಚಾರವಾಗಿ ಹಾಗೆ ನಿಮ್ಮ ಔದ್ಯೋಗಿಕ ವಿಚಾರದಲ್ಲಿ ಅಡ್ಡಿಗಳಿವೆ. ಪ್ರಯಾಣ ಮಾಡಬೇಕಾಗುತ್ತದೆ. ಸಂಜೆ ವೇಳೆ ನಿಮ್ಮಿಂದ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಮಾಡಬೇಡಿ. ಅಪರಿಚಿತರಿಂದ ಯಾವುದಾದರು ವ್ಯವಹಾರಕ್ಕೆ ಮುನ್ನುಡಿ ಬರೆಯವ ಕಾರ್ಯಕ್ಕೆ ಮುಂದಾಗಬೇಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಪ್ರಯಾಣದಲ್ಲಿ ಶುಭವಿದೆ. ನೀವು ಬಯಸಿದ ಕೆಲಸದಲ್ಲಿ ಲಾಭವಾಗುತ್ತಿವೆ. ತಾಳ್ಮೆಯಿಂದ ಇಂದು ಎಲ್ಲಾ ಕೆಲಸಗಳನ್ನು ಪೂರ್ಣ ಮಾಡಿ. ಹಲವು ಸಮಯದಿಂದ ಬಾಕಿ ಉಳಿಸಿರುವ ಕೆಲಸವನ್ನು ಇಂದು ಮುಗಿಸುವ ಕುರಿತು ಆಲೋಚಿಸಿ. ವಾಹನ ವಿಚಾರದಲ್ಲಿ ಎಚ್ಚರಿಕೆ ಇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಿ. ಮನೆಗಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ಯಾರಿಗೂ ಒಪ್ಪಂದವಿಲ್ಲದೆ ಸಾಲ ನೀಡಬೇಡಿ. ವ್ಯಾಪಾರದಲ್ಲಿ ಶುಭವಿದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಸವಾಲುಗಳಿವೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಬೇಡಿ. ರಾತ್ರಿ ಪ್ರಯಾಣಗಳ ಮುಂದೂಡುವುದು ಉತ್ತಮ. ಸ್ವಂತ ವ್ಯಾಪಾರಿಗಳು ಹಣಕಾಸಿನ ಸಮಸ್ಯೆ ಎದುರಿಸಬಹುದು. ಆರೋಗ್ಯ ವಿಚಾರದಲ್ಲಿ ಹೇಳುವುದಾದರೆ ಸಣ್ಣ ಪುಟ್ಟ ಅಡ್ಡಿಗಳ ನೋಡಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ಸಂಬಂಧಿಕರ ಮನೆಗೆ ನೀವು ಪ್ರಯಾಣಿಸಬಹುದು. ಮನೆಗಾಗಿ ಮಾಡುವ ಖರ್ಚು ನಿಮಗೆ ಉತ್ತಮ ಫಲಿತಾಂಶ ತರಲಿದೆ. ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಫಲ ಸಿಗದೆ ಇರಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಆಸೆಯೊಂದನ್ನು ಇಂದು ಈಡೇರಿಸಿಕೊಳ್ಳಬಹುದು. ದೂರ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರಗಳಲ್ಲಿ ಶುಭವಾಗುತ್ತಿವೆ. ಬಹುದಿನದ ಅನರೋಗ್ಯವೊಂದು ನಿವಾರಣೆಯಾಗಲಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಅನುಕೂಲಕರ ದಿನವಾಗುತ್ತಿದೆ. ಗೃಹಿಣಿಯರು ಧನಲಾಭ ನೋಡಬಹುದು. ಬ್ಯಾಂಕ್ ಸಂಬಂಧಿತ ವಿಚಾರಗಳನ್ನು ಬೇಗ ಮುಗಿಸುವುದು ಉತ್ತಮ. ದೂರ ಪ್ರಯಾಣಗಳು ನಿಮಗೆ ಸಮಸ್ಯೆಗಳ ತರಬಹುದು. ವೃತ್ತಿ ಸಂಬಂಧವಾಗಿ ಶುಭ ಸುದ್ದಿ ಇದೆ. ಕುಟುಂಬದಲ್ಲಿ ನಿಮ್ಮ ಪರವಾದ ಒಲವು ಇರಲಿದೆ.



Click it and Unblock the Notifications