Dina Bhavishya: ಗೃಹಿಣಿಯರಿಗೆ ಒತ್ತಡ, ಉದ್ಯೋಗದಲ್ಲಿದೆ ಹೊಸ ತಲೆನೋವು!

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 27 (27 October Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಶುಭಕರ ದಿನ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನೆರವೇರಲಿವೆ. ಆಪ್ತರೊಬ್ಬರಿಗೆ ನೀಡಿದ ಹಣ ನಿಮ್ಮ ಕೈ ಸೇರುವ ಸಮಯವಿದು. ಅನೇಕರಲ್ಲಿ ದೊಡ್ಡ ಲಾಭದ ಕೆಲಸಗಳಿವೆ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ಅನೇಕ ರೀತಿಯ ಆರ್ಥಿಕ ಸಮಸ್ಯೆಗಳನ್ನು ನೀವು ಎದುರು ನೋಡಬಹುದು. ಅನೇಕರಲ್ಲಿ ಲಾಭದಾಯಕ ಕೆಲಸ ಆರಂಭದ ದಿನ. ಆರೋಗ್ಯ ಸುಧಾರಿಸಲಿದೆ.

Dina Bhavishya October 27 Today s Daily Horoscope for 12 Zodiac Signs

ಮಿಥುನ ರಾಶಿ

ಗೃಹಿಣಿಯರಿಗೆ ಇಂದು ಸವಾಲಿನ ದಿನ. ಅವಿವಾಹಿತರಲ್ಲಿ ಇಂದು ಹೊಸ ರೀತಿಯ ಶುಭವಿದೆ. ಆಪ್ತರಿಂದ ಹಣಕಾಸಿನ ನೆರವು ಪಡೆಯಬಹುದು. ನಿಮ್ಮ ಅಗತ್ಯ ಕೆಲಸಕ್ಕೆ ಹಣಕಾಸಿನ ಕೊರತೆ ಎದುರಾಗಲಿದೆ. ಪ್ರಯಾಣ ಮಾಡುವುದು ನಿಮಗೆ ದೊಡ್ಡ ಸಮಸ್ಯೆ ತರಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಇಂದು ಸವಾಲುಗಳ ದಿನ. ನಿಮ್ಮ ದೊಡ್ಡ ಮಟ್ಟದ ಕೆಲಸಗಳಲ್ಲಿ ಶುಭವಾದರು ಮುಂದಿನ ದಿನದಲ್ಲಿ ಅದರಿಂದ ನಿಮಗೆ ಒತ್ತಡ ಬರಬಹುದು. ವಿದ್ಯಾರ್ಥಿಗಳಿಗೆ ಅಶುಭವಾಗಬಹುದು. ಹಣ‍ಕಾಸು ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಿ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ಕೆಲಸದ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸುವುದು ಉತ್ತಮ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳಿವೆ. ಯಾರೊಂದಿಗಾದರು ಸಮಯ ಕಳೆಯುವ ಅವಕಾಶ ಪಡೆಯಬಹುದು. ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿ ಜನರಿಗೆ ಇಂದು ಶ್ರಮದಾಯಕ ದಿನ. ನಿಮ್ಮ ಹಲವು ಕೆಲಸಗಳು ಒತ್ತಡದಿಂದ ಪೂರೈಸುವಿರಿ. ಧನಲಾಭದ ನಿರೀಕ್ಷೆ ಇಡಬಹುದು. ಗೃಹಿಣಿಯರು ಒತ್ತಡ ನೋಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳನ್ನು ದೂರದೃಷ್ಟಿಯ ಕಾರಣದಿಂದಾಗಿ ಮಾಡಿ ಮುಗಿಸಿ. ದಿನದ ಆರಂಭದಲ್ಲಿರುವ ಒತ್ತಡ ನಂತರ ನಿವಾರಣೆಯಾಗಲಿದೆ. ಶುಭ ಕಾರ್ಯದಲ್ಲಿ ಭಾಗಿಯಾಗುವ ಸಂಭವವಿದೆ. ಸ್ನೇಹಿತರ ಬೆಂಬಲ ನಿಮಗಿರಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲ ತರುವ ದಿನ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಇಂದು ಶುಭವಾಗುತ್ತಿದೆ. ವಾಹನ ಸಂಬಂಧವಾಗಿ ನಿಮ್ಮ ನಿರ್ಧಾರದಿಂದ ಶುಭವಿದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಹುಡುಕಿ ಬರಬಹುದು. ಮನೆಗಾಗಿ ವಸ್ತು ಖರೀದಿಗೆ ಇಂದು ಉತ್ತಮ ದಿನವಾಗಿರಲಿದೆ.

ಧನು ರಾಶಿ

ಧನು ರಾಶಿಯ ಜನರಿಗೆ ಸಾಮಾನ್ಯ ದಿನವಾಗಲಿದೆ. ಬೇರೆಯವರ ವಸ್ತು ಬಳಸುವಾಗ ಎಚ್ಚರಿಕೆ ಅಗತ್ಯ, ಆಸ್ಪತ್ರೆ ವಿಚಾರವಾಗಿ ನೀವು ಪ್ರಯಾಣ ಮಾಡಬೇಕಾಗಬಹುದು. ಮನೆಗಾಗಿ ನೀವು ಹೊಸ ವಸ್ತುಗಳ ಖರೀದಿಸಬಹುದು. ಗೃಹಪಯೋಗಿ ವಸ್ತುಗಳನ್ನು ಖರೀದಿಸಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಅನುಕೂಲಕರ ದಿನ. ಇಷ್ಟು ದಿನ ಕಾಡಿದ್ದ ಮೂಳೆ ಸಂಬಂಧಿತ ಅನಾರೋಗ್ಯದಲ್ಲಿ ನಿರಾಳತೆ ಇದೆ. ಒತ್ತಡವನ್ನು ನಿಯಂತ್ರಿಸುವ ಮಾರ್ಗ ನಿಮಗೆ ಸಿಗಲಿದೆ. ಯಾರಿಗಾದರು ಹಣ ಸಹಾಯ ಮಾಡುವಾಗ ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯದಲ್ಲಿದ್ದ ಮನಸ್ತಾಪ ನಿವಾರಣೆಯಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣಕಾಸು ವಿಚಾರ ಬಗೆಹರಿಯಲಿದೆ. ಹೂಡಿಕೆಗಳತ್ತ ಗಮನವಿಡಿ. ಉಳಿತಾಯ ಹೆಚ್ಚಾಗುವ ದಿನ. ವ್ಯಾಪಾರಿಗಳಿಗೆ ಲಾಭದ ದಿನ. ಗೃಹಿಣಿಯರ ಆರೋಗ್ಯ ಸುಧಾರಿಸಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಇಂದು ಮಿಶ್ರಫಲವಿದೆ. ಸರ್ಕಾರಿ ಕೆಲಸದವರಿಗೆ ಒತ್ತಡದ ದಿನವಾಗುತ್ತಿದೆ. ಯಾರಿಂದಾದರು ವಸ್ತುವೊಂದನ್ನು ಬಯಸಿದ್ದರೆ ಪಡೆಯಬಹುದು. ಪ್ರೀತಿಯ ವಿಚಾರವಾಗಿ ಖರ್ಚುಗಳ ಮಾಡಬೇಕಾದ ದಿನ.

English summary

Dina Bhavishya October 27: Today’s (Daily) Horoscope for 12 Zodiac Signs

daily horoscope for October 27 astrology predictions for all 12 zodiac signs including career, health, love, and money Boldsky kannada
Story first published: Monday, October 27, 2025, 5:00 [IST]
X
Desktop Bottom Promotion