Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ದಿನದ ಅಂತ್ಯದಲ್ಲಿ ನೋವಿದೆ, ಪ್ರಯಾಣ ಸಂಭವ!
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 26 (26 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸವಾಲಿನ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ಶುಭವಿದೆ. ಆದ್ರೆ ಅದರ ಫಲಿತಾಂಶದಿಂದ ನಿಮ್ಮಲ್ಲಿ ಅತೃಪ್ತಿ ಇರಲಿದೆ. ಆಪ್ತರಿಂದ ಹಣದ ಸಹಕಾರ ಬರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮ ಅನೇಕ ಕೆಲಸಗಳಲ್ಲಿ ಅಡ್ಡಿಗಳಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಆಪ್ತರಿಗೆ ನಿಮ್ಮಿಂದ ಸಹಕಾರ ಪಡೆಯಬಹುದು. ಸವಾಲುಗಳ ಎದುರಿಸುವುದು ಉತ್ತಮ. ದೂರ ದೃಷ್ಟಿಯ ಕೆಲಸಗಳ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಸವಾಲಿನ ದಿನ. ಯಾರ ಬಳಿಯೂ ಹಣಕಾಸಿನ ವಿಚಾರವಾಗಿ ಮನಸ್ತಾಪ ಮಾಡಿಕೊಳ್ಳಬೇಡಿ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಛಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ದೂರದ ಸಂಬಂಧಿಕರ ಭೇಟಿ ಸಂಭವವಿದೆ. ಸಣ್ಣ ಪ್ರವಾಸ ಕೈಗೊಳ್ಳಬಹುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಯಾರೊಂದಿಗಾದರು ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ ಎಚ್ಚರಿಕೆಯಿಂದ ಒಪ್ಪಂದಗಳ ಮಾಡಿಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿಯ ಗೃಹಿಣಿಯರಿಗೆ ಈ ದಿನ ಸವಾಲುಗಳ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಒತ್ತಡವಿದೆ. ಅವಿವಾಹಿತರಿಗೆ ನೆಮ್ಮದಿಯ ದಿನವಾಗಲಿದೆ. ಪ್ರಯಾಣಗಳ ಮಾಡುವಿರಿ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಸವಾಲುಗಳ ದಿನ. ನಿಮ್ಮ ದಾಂಪತ್ಯ ವಿಚಾರದಲ್ಲಿ ಮಧುರವಾದ ದಿನ ಎನ್ನಬಹುದು. ಆಪ್ತರೊಬ್ಬರಿಂದ ನಿಮಗೆ ದಿಢೀರ್ ಹಣಕಾಸಿನ ಸಹಾಯ ಬರಬಹುದು. ಯಾರಿಗಾದರು ನೀಡಿದ್ದ ಹಣ ಮರಳಿ ಪಡೆಯಲು ಸಕಾಲವಾಗಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಒತ್ತಡದ ದಿನ. ದೂರ ಪ್ರಯಾಣಗಳ ಮಾಡಬೇಕಾಗಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ವ್ಯಾಪಾರ ವಿಚಾರದಲ್ಲಿ ನಿಮಗೆ ಅಡ್ಡಿಯಾಗಿದ್ದ ಘಟನೆಗಳು ನಿವಾರಣೆಯಾಗಲಿದೆ. ಸಹೋದರರೊಂದಿಗೆ ಮನಸ್ತಾಪ ಮೂಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಯಾರಿಗೂ ಹಿಂದು ಮುಂದೆ ಯೋಚಿಸದೆ ಸಹಾಯ ಮಾಡುವುದು ಮಾಡಬೇಡಿ. ಬಹುದಿನದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಆಪ್ತರೊಬ್ಬರ ಭೇಟಿಯಾಗುತ್ತೀರಿ.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಉತ್ತಮ ಅನುಕೂಲಕರ ದಿನ. ವ್ಯವಹಾರ ಅಥವಾ ವ್ಯಾಪಾರದಲ್ಲಿ ಧನಲಾಭವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಿ. ಸ್ನೇಹಿತರೊಂದಿಗೆ ಅನಗತ್ಯವಾಗಿ ಮನಸ್ತಾಪ ಮಾಡಿಕೊಳ್ಳಬೇಡಿ. ರಾತ್ರಿ ಪ್ರಯಾಣಗಳ ಆದಷ್ಟು ಮುಂದೂಡುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ದೊಡ್ಡ ಲಾಭವಿದೆ. ನಿಮ್ಮ ಕೆಲಸ ಕಾರ್ಯಗಳು ಸಫಲವಾಗಲಿದೆ. ಕುಟುಂಬದ ವಾತಾವರಣದಲ್ಲಿ ನೆಮ್ಮದಿ ನೋಡಬಹುದು. ನವವಿವಾಹಿತರು ಸಂತಸದಿಂದ ಈ ದಿನ ಕಳೆಯಲಿದ್ದೀರಿ. ಹಾಗೆ ಪ್ರಯಾಣ ಕೂಡ ಮಾಡಲಿದ್ದೀರಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲದ ದಿನ. ಇಡೀ ದಿನ ಪ್ರಯಾಣ ಮಾಡಬಹುದು. ನಿಮ್ಮ ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು. ಯಾರಿಂದಾದರು ಸಾಲ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡವಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಉತ್ತಮ ದಿನ. ನಿಮ್ಮ ಪ್ರಯಾಣದಲ್ಲಿ ಶುಭವಿದೆ. ದಾಂಪತ್ಯದಲ್ಲಿ ಸುಖವಿದೆ. ಆದಾಯ ತರುವ ಕೆಲಸದಲ್ಲಿ ಏರಿಳಿತ ನೋಡಬಹುದು. ಅಪರಿಚಿತರೊಂದಿಗೆ ಪ್ರಯಾಣಿಸುವಾಗ ಎಚ್ಚರಿಕೆ ಅಗತ್ಯ.



Click it and Unblock the Notifications