Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಗೃಹಿಣಿಯರಲ್ಲಿ ಕಾಡಲಿದೆ ಹಣಕಾಸು ಸಮಸ್ಯೆ
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 25 (25 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸವಾಲುಗಳು ಎದುರಾಗುವ ದಿನವಾಗಬಹುದು. ನಿಮ್ಮ ಹಲವು ಕೆಲಸಗಳನ್ನು ನೀವು ನಿಗದಿತ ಸಮಯದೊಳಗೆ ಮುಗಿಸಬಹುದು. ಹಲವರಲ್ಲಿ ಈ ದಿನ ಅಚ್ಚರಿಯ ಫಲಿತಾಂಶ ತರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಇದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಅನುಕೂಲಕರ ದಿನ. ನಿಮ್ಮ ವಾಹನ ವಿಚಾರದಲ್ಲಿ ಎದುರಾಗಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ಆಪ್ತರೊಬ್ಬರಿಂದ ನಿಮ್ಮ ಸಮಸ್ಯೆಯೊಂದು ಬಗೆಹರಿಯಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಪ್ರಯಾಣದ ದಿನ, ನಿಮ್ಮ ಎಲ್ಲಾ ಸಮಸ್ಯೆಗಳಿಗೂ ದಾರಿ ಹುಡುಕುವ ಕುರಿತಾಗಿ ಆಲೋಚಿಸುತ್ತೀರಿ. ಕುಟುಂಬದಲ್ಲಿ ಹಿರಿಯರ ಮಾತುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಹೊಸ ಚಿಂತೆಯೊಂದು ಕಾಡಬಹುದು, ನಿಮ್ಮ ಹಣಕಾಸು ಸ್ಥಿತಿಯಲ್ಲಿ ಅಡ್ಡಿಗಳು ಎದುರಾಗಬಹುದು. ನೆರೆಹೊರೆಯವರೊಂದಿಗೆ ಸಂಬಂಧ ಮತ್ತಷ್ಟು ಹದಗೆಡಬಹುದು. ಮಕ್ಕಳ ಕುರಿತಾದ ಚಿಂತೆ ಕಾಡಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಮಿಶ್ರ ಫಲವಿದೆ. ಬಹುದಿನದ ಚಿಂತೆಯೊಂದು ತಾತ್ಕಾಲಿಕವಾಗಿ ದೂರಾಗಬಹುದು. ಉದ್ಯೋಗದಲ್ಲಿನ ಒತ್ತಡ ಮುಂದುವರೆಯಲಿದೆ. ಹಣ ಖರ್ಚು ಮಾಡುವ ಮುನ್ನ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ಗೃಹಿಣಿಯರಿಗೆ ಧನಲಾಭದ ದಿನ ಎನ್ನಬಹುದು. ಸರ್ಕಾರಿ ಕೆಲಸಗಳಲ್ಲಿ ಶುಭವಿದೆ. ಶನಿ ದೇವರ ಪ್ರಾರ್ಥನೆ ಮಾಡುವುದು ನಿಮಗೆ ಲಾಭದಾಯಕ ಹಾಗೆ ದೇವಾಲಯ ಭೇಟಿಯೂ ನಿಮಗೆ ಧನಾತ್ಮಕ ವಿಚಾರಗಳ ತರಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಹದಗೆಟ್ಟ ಆರೋಗ್ಯ ಸುಧಾರಿಸಲಿದೆ. ನಿಮಗೆ ಬೇಕಾಗಿದ್ದ ವಸ್ತುವೊಂದನ್ನು ಇಂದು ಖರೀದಿಸಬಹುದು. ವಾಹನ ಸಂಬಂಧ ಖರ್ಚುಗಳಿವೆ. ಆಹಾರ ಕುರಿತಾದ ಖರ್ಚು ಕೂಡ ಹೆಚ್ಚಾಗಲಿದೆ. ಮನೆಗಾಗಿ ನೀವು ವಸ್ತು ಖರೀದಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಮಿಶ್ರಫಲ. ನಿಮ್ಮ ಆದಾಯದಷ್ಟೇ ಖರ್ಚು ಕೂಡ ನೋಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡುವುದು ಉತ್ತಮ. ಅನಗತ್ಯ ವಿಚಾರವಾಗಿ ಯಾರೊಂದಿಗೂ ಚರ್ಚೆ, ಕಲಹಗಳ ಮಾಡಿಕೊಳ್ಳದೆ ಇರುವುದು ಉತ್ತಮ.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಸವಾಲಿನ ದಿನ. ನಿಮ್ಮ ಹಲವು ದಿನದ ಸಮಸ್ಯೆಯೊಂದು ಬಗೆಹರಿಯಲಿದೆ. ದೂರ ಪ್ರಯಾಣ ಮಾಡಬೇಕಾಗಬಹುದು. ಮನೆಯಲ್ಲಿ ಶಾಂತಿ ನೆಲೆಸಲಿದೆ. ದಿನದ ಆರಂಭದಲ್ಲಿ ಖರ್ಚು ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ನಷ್ಟದ ದಿನವೂ ಹೌದು.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಸವಾಲಿನ ದಿನ. ನಿಮ್ಮ ಕೈ ಸೇರಬೇಕಿದ್ದ ವಸ್ತುವೊಂದು ನಿಮಗೆ ಸೇರುವ ದಿನ. ನಿಮಗಾಗಿ ಯಾವುದಾದರು ವಸ್ತು ಖರೀದಿಸಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಸಾಮಾನ್ಯ ದಿನ. ಗೃಹಿಣಿಯರಿಗೆ ಈ ದಿನ ಲಾಭದಾಯಕವಾಗುತ್ತಿದೆ. ಮನೆಯ ದೊಡ್ಡ ಸಮಸ್ಯೆಯನ್ನು ನೀವು ದೂರ ಮಾಡಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಶುಭವಿದೆ. ಆಪ್ತರಿಂದ ಹಣ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗಲಿದೆ. ಪ್ರೀತಿ ವಿಚಾರದಲ್ಲಿ ಹಾಗೆ ಸಹೋದರರೊಂದಿಗಿನ ವಿಚಾರದಲ್ಲಿ ನಿಮಗೆ ಶುಭವಿದೆ.



Click it and Unblock the Notifications