Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Dina Bhavishya: ಯಾರಿಗೆಲ್ಲಾ ಇಂದು ಶುಭ ಶುಕ್ರವಾರ?
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 24 (24 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನ. ಈ ಶುಕ್ರವಾರವು ನಿಮ್ಮ ಅದೃಷ್ಟದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಆದ್ರೆ ನಿಮ್ಮಿಂದಾಗಿ ಹಲವರಿಗೆ ಸಹಕಾರಿಯಾಗುವಂತಹ ಸಂಭವವಿದೆ. ಮನೆಯ ವಿಚಾರವಾಗಿ ನೀವು ಖರ್ಚು ಮಾಡುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ಗೃಹಿಣಿಯರಿಗೆ ಈ ದಿನ ಆದಾಯಕ್ಕಿಂತ ಹೆಚ್ಚು ಖರ್ಚುಗಳಿರಲಿವೆ. ಈ ದಿನ ಸಾಲ ಮಾಡಿಕೊಳ್ಳಬೇಕಾಗಬಹುದು. ಅನೇಕರಿಗೆ ವ್ಯವಹಾರ ಸಂಬಂಧವಾಗಿ ದೊಡ್ಡ ಒಪ್ಪಂದ ಮಾಡಿಕೊಳ್ಳಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಬಹುದಿನದ ಆಸೆಯೊಂದು ಈಡೇರಲಿದೆ. ಆಧ್ಯಾತ್ಮಿಕವಾಗಿ ನೀವುಂದು ಬಲವಾಗುತ್ತೀರಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆ ಎದುರಿಸಬಹುದು. ಬಹಳ ದಿನದಿಂದ ಅನುಭವಿಸಿದ್ದ ನೋವು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಇದೆ. ದೂರ ಪ್ರಯಾಣ ಮಾಡಬಹುದು. ವಾಹನ ವಿಚಾರವಾಗಿ ಎಚ್ಚರಿಕೆ ಇಡಬೇಕಿದೆ. ಸಾಲ ಮಾಡಬೇಕಾಗಿ ಬರಬಹುದು. ಕುಟುಂಬ ಸದಸ್ಯರಲ್ಲಿ ಮಧುರವಾಗಿ ವರ್ತಿಸುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಿ ಮುಗಿಸಿ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ನಿಧಾನಗತಿ ನೋಡಬಹುದು. ಹಣಕಾಸು ವಿಚಾರವಾಗಿ ಸಣ್ಣ ಮಟ್ಟದ ಒತ್ತಡವಿದೆ. ಹಲವರು ಈ ದಿನ ಪ್ರಯಾಣ ಮಾಡಬೇಕಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನಿಮ್ಮ ಪ್ರಯಾಣಗಳು ಶುಭವಾಗಲಿದೆ. ಗೃಹಿಣಿಯರಿಗೆ ಈ ದಿನ ಸವಾಲುಗಳಿವೆ, ನಿಮ್ಮ ಕೆಲಸದಲ್ಲಿ ಅಡ್ಡಿ ಇದೆ. ಕೆಲಸಗಳಲ್ಲಿ ತರಾತುರಿಯ ನಿರ್ಧಾರಗಳ ಮಾಡಬೇಡಿ. ಪ್ರಭಾವಿ ವ್ಯಕ್ತಿಯೊಬ್ಬರ ಭೇಟಿಯಾಗಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ದಾಂಪತ್ಯದಲ್ಲಿದ್ದ ದೊಡ್ಡ ಮನಸ್ತಾಪವೊಂದು ನಿವಾರಣೆಯಾಗಲಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಲಿದೆ. ಯಾರೊಂದಿಗೂ ಅನಗತ್ಯ ಗಲಾಟೆಗಳು, ಚರ್ಚೆಗಳಿಗೆ ಮುಂದಾಗಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳಿವೆ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಮಟ್ಟದ ಅಡೆತಡೆ ನೋಡಬಹುದು. ಹಣಕಾಸು ವಿಚಾರವಾಗಿ ನೀವು ನಷ್ಟ ಅನುಭವಿಸಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆ ಅಥವಾ ಒತ್ತಡ ಬರಬಹುದು.
ಧನು ರಾಶಿ
ಧನು ರಾಶಿಯವರಿಗೆ ಸವಾಲಿನ ದಿನ. ನಿಮ್ಮ ದೊಡ್ಡ ಕೆಲಸಗಳಲ್ಲಿ ಹಿನ್ನಡೆ ನೋಡಬಹುದು. ವಾಹನ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ತಪ್ಪಾಗಬಹುದು. ದೇವಾಲಯ ಭೇಟಿಯ ಸಂಭವವಿದೆ. ಅನೇಕರಲ್ಲಿ ಪ್ರಯಾಣ ಮಾಡಬೇಕಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಬಹುದಿನದ ಆಸೆಯೊಂದನ್ನು ಈಡೇರಿಸಿಕೊಳ್ಳು ಖರ್ಚು ಮಾಡಬೇಕಾಗಿ ಬರಬಹುದು. ಹೊಸ ವ್ಯಾಪಾರ ಅಥವಾ ವ್ಯವಹಾರ ಆರಂಭಿಸಿದವರಿಗೆ ಈ ದಿನ ಉತ್ತಮವಾಗಿರಲಿದೆ. ಸ್ನೇಹಿತರಿಗೆ ನೀಡಿದ್ದ ಹಣ ಕೈ ಸೇರದೆ ಇರಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಅನುಕೂಲಕರ ದಿನ. ನಿಮ್ಮ ಹಲವು ಯೋಜನೆಗಳು ಇಂದು ಕಾರ್ಯರೂಪಕ್ಕೆ ಬರಬಹುದು. ಹಲವರಿಗೆ ಈ ದಿನ ನಿಮ್ಮ ಪ್ರಮುಖ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಸವಾಲಿನ ದಿನ. ಯಾರಿಂದಾದರು ಸಹಾಯಕ್ಕೆ ಬೇಡಿಕೆ ಇಟ್ಟಿದ್ದರೆ ನಿಮಗೆ ಶುಭವಾಗಲಿದೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುವತ್ತ ಗಮನಹರಿಸಿ. ಆಹಾರ ಸಂಬಂಧಿ ವಿಚಾರದಲ್ಲಿ ಖರ್ಚುಗಳಾಗಬಹುದು.



Click it and Unblock the Notifications
