Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
Dina Bhavishya: ಯಾರಿಗೆಲ್ಲಾ ಇಂದು ಶುಭದಾಯಕ?
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 23 (23 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ಸವಾಲಿನಿಂದ ತುಂಬಿದ ದಿನ. ನಿಮ್ಮ ಹಲವು ಕೆಲಸಗಳನ್ನು ಒತ್ತಡದಲ್ಲಿ ಮಾಡಬೇಕಾಗಬಹುದು. ಆಪ್ತರಿಗೆ ನಿಮ್ಮಿಂದಾಗಿ ಸಹಾಯ ಆಗಲಿದೆ, ಆದ್ರೆ ನಿಮಗೆ ಇದು ಸಮಸ್ಯೆಗಳ ತರಬಹುದು. ಪ್ರಯಾಣ ಮಾಡುವಿರಿ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳಿವೆ. ಗೃಹಿಣಿಯರಿಗೆ ಶ್ರಮದಾಯಕ ದಿನ ಹಾಗೆ ಆರೋಗ್ಯದಲ್ಲಿ ಏರುಪೇರು ಸಂಭವಿಸುವ ದಿನ. ಹಣಕಾಸು ವಿಚಾರವಾಗಿ ಖರ್ಚುಗಳ ವಿಚಾರವಾಗಿ ಎಚ್ಚರಿಕೆ ಅಗತ್ಯ.

ಮಿಥುನ ರಾಶಿ
ಮಿಥುನ ರಾಶಿಯ ಜನರು ಇಂದು ಪ್ರಯಾಣಿಸಬಹುದು. ನಿಮ್ಮ ಹಲವು ಕೆಲಸಗಳ ವಿಚಾರದಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳಿರಬಹುದು. ಆಪ್ತರಿಂದ ಬರಬೇಕಿದ್ದ ಹಣ ಸಿಲುಕಬಹುದು. ವ್ಯಾಪಾರಿಗಳು ವಿಶ್ರಾಂತಿ ಪಡೆಯುವ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಹೊಸ ವಿಚಾರಗಳು ವ್ಯವಹಾರಗಳಲ್ಲಿ ಶುಭವಿದೆ. ನಿಮ್ಮ ಸಮಸ್ಯೆಗಳನ್ನು ಯಾರೊಂದಿಗಾದರು ಹಂಚಿಕೊಳ್ಳುವುದು ನಿಮಗೆ ಪರಿಹಾರ ನೀಡಬಹುದು. ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಸಿಂಹ ರಾಶಿ
ಸಿಂಹ ರಾಶಿಯ ಜನರು ಇಂದು ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಕಚೇರಿ ಸಂಬಂಧಿತ ಒತ್ತಡಗಳು ಹೆಚ್ಚಾಗಬಹುದು. ಯಾರಿಂದಾದರು ಹಣ ಪಡೆಯುವ ವಿಚಾರದಲ್ಲಿ ಯಶಸ್ಸು ಸಿಗದೆ ಇರಬಹುದು. ಹೊಸ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಭಾಗಿಯಾಗಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಸವಾಲಿನ ದಿನ. ಗೃಹಿಣಿಯರು ಈ ದಿನ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಕೆಲಸಗಳಲ್ಲಿ ಅಡ್ಡಿ ಇದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲದಿಂದ ತುಂಬಿದ ದಿನವಾಗುತ್ತದೆ. ಆದಾಯದಷ್ಟೇ ಖರ್ಚು ಕೂಡ ನೋಡಬಹುದು. ಬಾಕಿ ಉಳಿದ ಕೆಲಸಗಳ ಪೂರ್ಣ ಮಾಡಿ. ಸಾಲ ಮರುಪಾವತಿಗೆ ಮುಂದಾಗುವುದು ಉತ್ತಮ. ದಾಂಪತ್ಯ ವಿಚಾರದಲ್ಲಿ ತೊಡಕುಗಳು ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನ. ಅನಿರೀಕ್ಷಿತ ಬೆಳವಣಿಗೆಯಲ್ಲಿ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ಅರ್ಧಕ್ಕೆ ನಿಂತಿದ್ದ ಹಲವು ಕೆಲಸಗಳನ್ನು ಇಂದು ಮುಂದುವರೆಸಬಹುದು. ಅದ್ರಲ್ಲೂ ಸರ್ಕಾರಿ ದಾಖಲೆಗಳ ವಿಚಾರದಲ್ಲಿ ನೀವಿಂದು ಪ್ರಯಾಣ ಮಾಡುತ್ತೀರಿ.
ಧನು ರಾಶಿ
ಧನು ರಾಶಿ ಜನರು ಈ ದಿನ ಓಡಾಟವಿದೆ. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮನೆಗಾಗಿ ಹೊಸ ವಸ್ತು ಖರೀದಿ ಸಂಭವವಿದೆ. ಗೃಹಿಣಿಯರು ಹೊಸ ವ್ಯವಹಾರ ಮಾಡಲು ಮುಂದಾಗಬಹುದು, ಹಣಬಲವಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಬಹುದಿನದಿಂದ ಕಾಡಿದ್ದ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗುವ ದಿನ. ನಿಮ್ಮ ಹೊಸ ಆದಾಯ ಮೂಲದಿಂದ ತೃಪ್ತಿಯಾಗುವಂತಹ ಸುದ್ದಿ ಪಡೆಯಬಹುದು. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುವ ದಿನ. ಮನೆಗಾಗಿ ಹಣ ಖರ್ಚು ಮಾಡಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನೀವು ಬಯಸಿದಂತಹ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಆಪ್ತರಿಂದ ನಿಮಗೆ ಹಣಕಾಸಿನ ನೆರವು ಸಿಗುವ ಸಂಭವವಿದೆ. ಯಾರಿಗೂ ಹಣಕಾಸಿನ ನೆರವು ನೀಡುವ ಮುನ್ನ ಮತ್ತೆ ಪರಿಶೀಲಿಸುವುದು ಉತ್ತಮ.
ಮೀನ ರಾಶಿ
ಕೋರ್ಟ್, ಆಸ್ತಿ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಸಮಸ್ಯೆಗಳಿದ್ದರೆ ಈ ದಿನ ಸುಧಾರಣೆ ಇದೆ. ಎಲ್ಲಾ ರೀತಿಯ ವಿಚಾರದಲ್ಲಿ ನಿಮಗೆ ಎದುರಾದ ತೊಡಕುಗಳು ನಿವಾರಣೆಯಾಗಬಹುದು. ಯಾರಿಗೂ ಹಣಕಾಸಿನ ನೆರವು ನೀಡುವ ನಿಮ್ಮ ಆಲೋಚನೆಯು ನಿಮಗೆ ಸಮಸ್ಯೆಗಳ ತರಬಹುದು.



Click it and Unblock the Notifications