Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
Dina Bhavishya: ಯಾರ ಜೀವನದಲ್ಲಿ ಇಂದು ತಿರುವಿನ ದಿನ?
ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 22 (22 October Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಂತಸದ ದಿನವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ಬಹುಬೇಗ ಮುಗಿಯಲಿವೆ. ಹಣದ ವಿಚಾರದಲ್ಲಿ ಅದೃಷ್ಟದ ದಿನ ಎನ್ನಬಹುದು. ಹಲವು ಸಮಸ್ಯೆಗಳಿಗೆ ಈ ದಿನ ಪರಿಹಾರ ಹುಡುಕಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಮಿಶ್ರಫಲವಿದೆ. ಬಹಳ ದಿನದ ಬಯಕೆಯೊಂದನ್ನು ಈಡೇರಿಸಿಕೊಳ್ಳುವಾಗ ತರಾತುರಿಯ ನಿರ್ಧಾರಕ್ಕೆ ಮುಂದಾಗಬೇಡಿ. ಹಣಕಾಸು ವಿಚಾರದಲ್ಲಿ ಖರ್ಚಿನ ದಿನ. ಹಲವರಿಗೆ ಇದು ಸವಾಲುಗಳ ಎದುರಿಸುವ ದಿನ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ದಿನದ ಅಂತ್ಯದಲ್ಲಿ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಮನೆಯ ವಾತಾವರಣವು ಸಂತಸದಿಂದ ಕೂಡಿರಲಿದೆ. ನಿಮ್ಮ ವೃತ್ತಿ ಸಂಬಂಧಗಳು ಮಧುರವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ಮನೆಗಾಗಿ ನೀವು ಖರ್ಚು ಮಾಡಬಹುದು. ಅನೇಕರಲ್ಲಿ ಪರಿಶ್ರಮದಿಂದ ತುಂಬಿದ ದಿನವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಶುಭವಿದೆ. ಇಷ್ಟು ದಿನದಿಂದ ಒತ್ತಡಕ್ಕೆ ಕಾರಣವಾಗಿದ್ದ ಹಣಕಾಸಿನ ವಿಚಾರದಲ್ಲಿ ನಿರಾಳತೆ ನೋಡಬಹುದು. ವ್ಯಾಪಾರಿ ವಲಯದ ಮಂದಿಗೆ ಶುಭವಿದೆ. ಆಹಾರ ಸಂಬಂಧವಾಗಿ ಸಂತೋಷ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇಂದು ಪರಿಶ್ರಮದ ದಿನ. ಹಾಗೆ ಮನೆಯಲ್ಲಿ ನೀವು ಕೆಲಸ ಮಾಡಬೇಕಾಗಬಹುದು. ಅನೇಕರಲ್ಲಿ ಶುಭ ಕಾರ್ಯದಲ್ಲಿ, ಪೂಜಾ ಕಾರ್ಯಗಳಲ್ಲಿ ಭಾಗಿಯಾಗಬಹುದು. ಹಲವರಲ್ಲಿ ಈ ದಿನ ಶುಭ ಸುದ್ದಿ ಕೇಳುವ ದಿನವಾಗಿರಲಿದೆ. ಪ್ರಯಾಣಗಳ ಮಾಡುವುದು ನಿಮಗೆ ಲಾಭ ತರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿದೆ. ಹಲವರಿಗೆ ಉದ್ಯೋಗ ಸಂಬಂಧಿ ಒತ್ತಡ ಕಡಿಮೆಯಾಗಲಿದೆ. ಹಲವು ಸವಾಲುಗಳನ್ನು ನೀವು ಬಗೆಹರಿಸಿಕೊಳ್ಳಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ದಾಂಪತ್ಯದಲ್ಲಿದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಸಂಬಂಧಿಕರ ಮನೆಗೆ ನೀವು ಪ್ರಯಾಣಿಸಬಹುದು. ಹಲವರಿಗೆ ಈ ದಿನ ಶುಭ ಆರಂಭಗಳ ತರಲಿದೆ.
ಧನು ರಾಶಿ
ಧನು ರಾಶಿಯ ಜನರಲ್ಲಿ ಇಂದು ಸುಗಮ ಕೆಲಸದ ದಿನ. ನೀವು ಮಾಡುವ ಪ್ರತಿಯೊಂದು ಕೆಲಸಗಳಲ್ಲೂ ಶುಭ ಫಲವಿದೆ. ಬಹಳ ದಿನದ ನಿಮ್ಮ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಲು ಇಂದು ಸೂಕ್ತ ದಿನವಾಗಲಿದೆ. ಬಹಳ ದಿನದ ಬಗೆಹರಿಯದ ಸಮಸ್ಯೆಯೊಂದು ಬಗೆಹರಿಯಲಿದೆ. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಇಂದು ಸವಾಲಿನ ದಿನ. ನಿಮ್ಮ ಬಯಕೆಯಂತೆ ಈ ದಿನ ಕೆಲಸಗಳು ತೃಪ್ತಿ ನೀಡದೆ ಇರಬಹುದು. ಅನೇಕರಿಗೆ ಈ ದಿನ ಕೆಲಸಗಳ ಮಾಡಲು ಪ್ರೇರೇಪಿಸುವ ದಿನವಾಗುತ್ತದೆ, ಆದ್ರೆ ನಿಮ್ಮ ಕೆಲಸದಿಂದ ಹಲವರಲ್ಲಿ ಅಸಮಾಧಾನ ನೋಡಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಮನೆಯಲ್ಲಿದ್ದ ಹಣಕಾಸಿನ ಒತ್ತಡವೊಂದು ನಿವಾರಣೆಯಾಗಲಿದೆ. ವಾಹನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಪ್ರಯಾಣಗಳ ಮಾಡಬೇಕಾಗಿ ಬರಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಇಂದು ಸವಾಲುಗಳ ಎದುರಿಸುವುದು ನಿರಾಳತೆ ನೀಡಲಿದೆ. ಮನೆಗಾಗಿ ಖರ್ಚು ಮಾಡುತ್ತೀರಿ. ಗೃಹಿಣಿಯರಿಗೆ ಲಾಭದಾಯಕ ದಿನ. ದಿಢೀರ್ ಧನಲಾಭ ನೋಡಹುದು.



Click it and Unblock the Notifications