Dina Bhavishya: ಈ ದಿನ ಯಾರಿಗೆಲ್ಲಾ ಅಮಾವಾಸ್ಯೆ ಕಂಟಕ!

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನ. ಈ ದಿನ ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ನೀವು ಬಯಸಿದಂತಹ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ನಿಮ್ಮ ಹಣಕಾಸು ವಿಚಾರದಲ್ಲಿ ಜಾಗೃತೆಯಿಂದ ಖರ್ಚುಗಳ ಮಾಡುವುದು ಉತ್ತಮ.

ವೃಷಭ ರಾಶಿ

ನೀವಿಂದು ಪ್ರಯಾಣ ಮಾಡುವ ದಿನ. ಹಲವು ದಿನಗಳ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಆಪ್ತರಿಂದ ಬರಬೇಕಿದ್ದ ಹಣ ಪಡೆಯಬಹುದು. ಅನೇಕರಲ್ಲಿ ದೊಡ್ಡ ದೊಡ್ಡ ವಿಚಾರಗಳು ಸುಲಭವಾಗಿ ಮುಗಿಸಲಿದ್ದಾರೆ. ದಾಂಪತ್ಯ ವಿಚಾರದಲ್ಲಿ ನೆಮ್ಮದಿ ನೋಡಬಹುದು.

Dina Bhavishya October 21 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಮಿಶ್ರ ಫಲ. ನೀವು ಕೆಲಸದ ಕಾರಣಕ್ಕೆ ಪ್ರಯಾಣ ಮಾಡಬಹುದು. ಅನೇಕರಲ್ಲಿ ದೊಡ್ಡ ಮಟ್ಟದ ಸಾಲ ಪಡೆಯುವ ಸಾಧ್ಯತೆ ಇದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ ಒತ್ತಡದ ಜೊತೆ ಜವಾಬ್ದಾರಿ ವಹಿಸಿಕೊಳ್ಳಬೇಕಾಗಬಹುದು.

ಕರ್ಕ ರಾಶಿ

ನಿಮಗಿಂದು ಪ್ರಯಾಣ ಮಾಡುವ ದಿನ. ನಿಮ್ಮದಲ್ಲದ ವಿಚಾರವಾಗಿ ನೀವು ಪ್ರಯಾಣ ಮಾಡುವಿರಿ. ಅನೇಕರಲ್ಲಿ ದೊಡ್ಡ ಖರ್ಚುಗಳಿವೆ. ಸಭೆ ಸಮಾರಂಭಗಳಲ್ಲೂ ನೀವು ಭಾಗಿಯಾಗಬಹುದು. ಸಹೋದರರ ನಡುವೆ ಮನಸ್ತಾಪ ಮೂಡಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನ ಅನುಕೂಲಗಳಿವೆ. ನಿಮ್ಮ ಹಳೆಯ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಲಿದೆ. ಸ್ನೇಹಿತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಅನೇಕರಲ್ಲಿ ವ್ಯವಹಾರ ಸಂಬಂಧವಾಗಿದ್ದ ಸಮಸ್ಯೆ ದೂರಾಗಬಹುದು. ವಾಹನ ಚಲಾವಣೆಯ ಸಮಯದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಲ್ಲಿ ಇಂದು ಸವಾಲಿನ ದಿನ. ಕೆಲಸಗಳು ಒತ್ತಡದಿಂದ ಕೂಡಿರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆ ಬರಬಹುದು. ಸವಾಲುಗಳ ಎದುರಿಸಬೇಕಾಗಬಹುದು.

ತುಲಾ ರಾಶಿ

ತುಲಾ ರಾಶಿಯ ಜನರಲ್ಲಿ ಈ ದಿನ ಅತ್ಯುತ್ತಮ ಫಲಿತಾಂಶಗಳು ಬರುವ ದಿನ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಅಪರಿಚಿತರೊಂದಿಗೆ ವ್ಯವಹಾರ ಮಾಡುವುದು ದೊಡ್ಡ ಸಮಸ್ಯೆ ತರಬಹುದು. ಮನೆಯಲ್ಲಿನ ವಾತಾವರಣ ಶಾಂತತೆಯಿಂದ ಕೂಡಿರಲಿದೆ.

ವೃಶ್ಚಿಕ ರಾಶಿ

ನಿಮ್ಮಲ್ಲಿ ಇಂದು ಸವಾಲುಗಳ ಎದುರಿಸಬಹುದು. ನೀವು ಮಾಡಬೇಕಿದ್ದ ಕೆಲಸವು ಪೂರ್ಣವಾಗದೆ ಇರಬಹುದು. ಬ್ಯಾಂಕಿಂಗ್ ವಿಚಾರಗಳು ನಿಧಾನವಾಗಲಿದೆ. ಗೃಹಿಣಿಯರು ವಾಹನ ಚಲಾವಣೆಯ ಸಮಯದಲ್ಲಿ ಜಾಗೃತರಾಗಬೇಕಾಗುತ್ತದೆ.

ಧನು ರಾಶಿ

ಧನು ರಾಶಿಯ ಮಂದಿಗೆ ಇಂದು ಸುಖಾಂತ್ಯದ ದಿನ. ದಿನದ ಆರಂಭದಲ್ಲಿ ಹಲವು ಕಷ್ಟಗಳು ಎದುರಾದರು ದಿನದ ಅಂತ್ಯವು ನಿಮಗೆ ಶುಭಕರವಾಗಲಿದೆ. ಗೃಹಿಣಿಯರಿಗೆ ಖರ್ಚಿನ ದಿನವಾಗುತ್ತದೆ.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಸವಾಲುಗಳ ದಿನ ನಿಮ್ಮ ಹಲವು ವಿಚಾರಗಳಲ್ಲಿ ಶುಭವಿದೆ. ಆದ್ರೆ ಅದರ ಫಲಿತಾಂಶವು ತೃಪ್ತಿದಾಯಕ ಆಗದೆ ಇರಬಹುದು. ಯಾರೊಂದಿಗೂ ಅನಗತ್ಯ ಚರ್ಚೆಗಳಲ್ಲಿ ಭಾಗಿಯಾಗಬೇಡಿ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಈ ದಿನ ಅದೃಷ್ಟಕರವಾಗಲಿದೆ. ನಿಮ್ಮ ಹಲವು ಕೆಲಗಳಲ್ಲಿ ನಿಮಗೆ ಶುಭವಾಗುತ್ತಿದೆ. ಆಪ್ತರ ಜೊತೆ ಸೇರುವುದು ನಿಮಗೆ ಹಣಕಾಸಿನ ಖರ್ಚಿಗೆ ಕಾರಣವಾಗಬಹುದು. ಗೃಹಿಣಿಯರು ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

ಮೀನ ರಾಶಿ

ಮೀನ ರಾಶಿ ಜನರಿಗೆ ಈ ದಿನ ಮಿಶ್ರ ಫಲವಿದೆ. ನಿಮ್ಮ ಹಲವು ಕೆಲಸಗಳಿಂದ ವಿರಾಮ ಪಡೆಯುತ್ತೀರಿ. ಸವಾಲುಗಳ ಎದುರಿಸುವುದನ್ನು ಕಲಿಯಬೇಕಿದೆ. ಸಭೆಗಳಲ್ಲಿ ಭಾಗಿಯಾಗಬಹುದು. ಪ್ರಯಾಣ ಮಾಡುವಿರಿ. ಖರ್ಚು ಹೆಚ್ಚಾಗುವ ಸಂಭವ.

English summary

Dina Bhavishya October 21: Today’s (Daily) Horoscope for 12 Zodiac Signs

daily horoscope for October 21 astrology predictions for all 12 zodiac signs including career, health, love, and money Boldsky kannada
Story first published: Tuesday, October 21, 2025, 5:00 [IST]
X
Desktop Bottom Promotion