Dina Bhavishya: ಹಬ್ಬದ ದಿನ ನಿಮ್ಮ ರಾಶಿಫಲ!

ವೈದಿಕ ಶಾಸ್ತ್ರದ ಪ್ರಕಾರ ಅಕ್ಟೋಬರ್ 20 (20 October Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಈ ದಿನ ಬಹಳ ಉತ್ತಮವಾಗಿದೆ. ದೀಪಾವಳಿಯ ಈ ದಿನದಂದು ಕುಟುಂಬಸ್ಥರೊಂದಿಗೆ ನೀವು ಕಳೆಯುತ್ತೀರಿ. ನಿಮ್ಮ ಕುಟುಂಬದಲ್ಲಿ ಸಂತಸ ಇರಲಿದೆ. ನಿಮ್ಮ ಅನೇಕ ಕೆಲಗಳು ಸುಗಮವಾಗಿ ನಡೆಯಲಿದೆ.

ವೃಷಭ ರಾಶಿ

ವೃಷಭ ರಾಶಿಯ ಜನರಲ್ಲಿ ಇಂದು ಅನ್ಯೋನ್ಯತೆಯ ದಿನ. ಸಂಬಂಧಿಕರ ದೀಢೀರ್ ಭೇಟಿಯು ನಿಮ್ಮಲ್ಲಿ ಸಂತಸ ತರಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಪ್ರಯಾಣ ಮಾಡಬೇಕಾಗಬಹುದು.

Dina Bhavishya October 20 Today s Daily Horoscope for 12 Zodiac Signs

ಮಿಥುನ ರಾಶಿ

ಮಿಥುನ ರಾಶಿ ಜನರು ಇಂದು ಸವಾಲುಗಳ ಎದುರಿಸಬಹುದು. ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಯಾರಿಗೂ ನಿಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನ ಬಳಕೆಗಾಗಿ ನೀಡಬೇಡಿ. ಆಪ್ತರೊಬ್ಬರ ಭೇಟಿಯಿಂದ ಖರ್ಚುಗಳಿವೆ.

ಕರ್ಕ ರಾಶಿ

ಕರ್ಕ ರಾಶಿಯವರು ಇಂದು ಪ್ರಯಾಣಗಳಲ್ಲಿ ತೊಡಗಬಹುದು. ಕುಟುಂಬದೊಂದಿಗೆ ಪ್ರಯಾಣಿಸಬೇಕಾಗುತ್ತದೆ. ದೊಡ್ಡ ಹೂಡಿಕೆಗಳು, ಹಣಕಾಸು ವ್ಯವಹಾರ ಮಾಡಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.

ಸಿಂಹ ರಾಶಿ

ಸಿಂಹ ರಾಶಿಯವರು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಕಚೇರಿ ಸಂಬಂಧಿತ ವಿಚಾರದಲ್ಲಿ ಒತ್ತಡ ಎದುರಾಗಲಿದೆ. ನಿಮ್ಮ ಕಷ್ಟದ ದಿನಗಳು ದೂರಾಗಲು ಸಮಯ ಹತ್ತಿರ ಆಗಲಿದೆ. ಹಣಕಾಸು ವಿಚಾರವಾಗಿ ನೆಮ್ಮದಿ ಇರಲಿದೆ. ಪ್ರಯಾಣ ಮಾಡಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಬಹಳ ದಿನದಿಂದ ಬಯಸಿದ್ದ ಹಣ ಕೈ ಸೇರುವ ಸಂಭವವಿದೆ. ವ್ಯಾಪಾರಿಗಳು ಲಾಭ ಮಾಡಬಹುದು. ಯಾರಿಗೂ ಹಣ ಸಾಲವಾಗಿ ನೀಡಲು ಮುಂದಾಗಬೇಡಿ. ರಾತ್ರಿ ಪ್ರಯಾಣಗಳ ಮುಂದೂಡುವುದು ಉತ್ತಮ.

ತುಲಾ ರಾಶಿ

ತುಲಾ ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಉದ್ಯೋಗದ ಸ್ಥಳದಲ್ಲಿ ನಿಮಗೆ ಸವಾಲುಗಳು ಎದುರಾಗಬಹುದು. ಪ್ರಯಾಣದಲ್ಲಿನ ಸಮಸ್ಯೆಗಳು ಹಲವು ದಿನಗಳ ಕಾಲ ನಿಮಗೆ ಒತ್ತಡ ತರಬಹುದು. ಯಾರಿಂದಾದರು ಹಣ ಪಡೆದರೆ ಮರಳಿ ನೀಡುವುದು ಉತ್ತಮ.

ವೃಶ್ಚಿಕ ರಾಶಿ

ನಿಮಗಿಂದು ಉತ್ತಮ ದಿನ. ಹಬ್ಬದ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ. ದಿನದ ಅಂತ್ಯದಲ್ಲಿ ಕೈಗೊಳ್ಳುವ ಪ್ರಯಾಣವು ಶುಭವಾಗಲಿದೆ. ದಾಂಪತ್ಯ ವಿಚಾರದಲ್ಲಿ ಇಷ್ಟು ದಿನಗಳಿಂದ ಇದ್ದಂತಹ ಕಷ್ಟವೊಂದು ನಿವಾರಣೆಯಾಗಲಿದೆ.

ಧನು ರಾಶಿ

ಧನು ರಾಶಿಯ ಜನರಲ್ಲಿ ಸವಾಲುಗಳಿವೆ. ಗೃಹಿಣಿಯರಿಗೆ ಹೆಚ್ಚು ಸಮಸ್ಯಾತ್ಮಕ ದಿನ. ನಿಮ್ಮ ದೊಡ್ಡ ಕೆಲಸಗಳು ವಿಫವಾಗಬಹುದು. ಹಾಗೆ ವಾಹನ ಸಂಬಂಧಿತ ವಿಚಾರದಲ್ಲಿ ನಷ್ಟ ಸಂಭವವಿದೆ. ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಫಲಿಸಬಹುದು.

ಮಕರ ರಾಶಿ

ಮಕರ ರಾಶಿಯ ಜನರಿಗೆ ಇಂದು ಹೆಚ್ಚು ಸಮಯ ಮನೆಯಿಂದ ಹೊರಗೆ ಕಳೆಯಬೇಕಾದ ದಿನವಾಗಿರಲಿದೆ. ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಕೈ ಗೂಡಬಹುದು. ಯಾರ ಬಳಿಯೂ ವೈಯಕ್ತಿಕ ವಿಚಾರಗಳ ಕುರಿತು ಚರ್ಚೆ ಮಾಡದೆ ಇರುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಅತ್ಯಂತ ಕಷ್ಟದ ಸವಾಲು ಎದುರಾಗಲಿದೆ. ಅದ್ರಲ್ಲೂ ಹಣಕಾಸು ಕುರಿತಾದ ನಿಮ್ಮ ಚಿಂತೆಯ ಹಿನ್ನಲೆಯಲ್ಲಿ ನಿಮಗೆ ಸವಾಲುಗಳಿವೆ. ಆರ್ಥಿಕ ಸ್ಥಿತಿಯಲ್ಲಿನ ಏರುಪೇರು ನಿಮಗೆ ಚಿಂತೆ ತರಬಹುದು.

ಮೀನ ರಾಶಿ

ಮೀನ ರಾಶಿಯ ಜನರಲ್ಲಿ ಬಹಳ ಸಂತಸದ ದಿನ. ಹಲವು ದಿನದಿಂದ ಬಯಸಿದ್ದ ಹಣವೊಂದು ನಿಮ್ಮ ಕೈಸೇರಲಿದೆ. ಕುಟುಂಬದಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ನೆರವು ಸಿಗಲಿದೆ. ವಾಹನ ವಿಚಾರದಲ್ಲಿ ಖರ್ಚು ಹೆಚ್ಚಾಗಲಿದೆ.

English summary

Dina Bhavishya October 20: Today’s (Daily) Horoscope for 12 Zodiac Signs

daily horoscope for October 20 astrology predictions for all 12 zodiac signs including career, health, love, and money Boldsky kannada
Story first published: Monday, October 20, 2025, 5:00 [IST]
X
Desktop Bottom Promotion